ನಾವು ಬಳಸುವ ಪಾತ್ರೆಗಳಿಂದಲೂ ನಮಗೆ ಮಾರಕ ಖಾಯಿಲೆ ಬರುವ ಅಪಾಯವಿದೆ ಎಂದು ಕ್ಯಾಲಿಫೋರ್ನಿಯಾದನ ಸಂಶೋಧಕರು ಹೇಳಿದ್ದಾರೆ.
ನಾವು ಬಳಸುವ ನಾನ್ ಸ್ಟಿಕ್ ಪಾತ್ರೆಗಳು, ಪಾತ್ರೆ ಬೆಳಗುವ ಸೋಪ್ ಗಳಲ್ಲಿರುವ ರಾಸಾಯನಿಕಗಳು ಮನುಷ್ಯರಿಗೆ ಲಿವರ್ ಕ್ಯಾನ್ಸರ್ ನಂತಹ ಗಂಭೀರ ಸಮಸ್ಯೆ ತರಬಹುದು ಎಂದು ಅಧ್ಯಯನ ವರದಿ ಹೇಳಿದೆ.
ಇದು ಒಮ್ಮೆಲೇ ಆಗೋದಲ್ಲ. ನಾವು ಬಳಸುವ ಪಾತ್ರೆಗಳಿಂದ ರಾಸಾಯನಿಕ ನಮ್ಮ ದೇಹಕ್ಕೆ ಹೊಕ್ಕು ಬಹಳ ವರ್ಷಗಳ ನಂತರ ಅದರ ರಿಯಾಕ್ಷನ್ ಕ್ಯಾನ್ಸರ್ ನಂತಹ ರೋಗಗಳಿಗೆ ಕಾರಣವಾಗುತ್ತಿದೆ ಎಂದು ಕೆಲವರ ಮೇಲೆ ಅಧ್ಯಯನ ನಡೆಸಿ ಸಂಶೋಧಕರು ಕಂಡುಕೊಂಡಿದ್ದಾರೆ.