ಇಂದಿನ ಕಾಲದಲ್ಲಿ ಕೂದಲು ಉದುರುವುದು, ಬಿಳಿ ಕೂದಲು, ತಲೆಹೊಟ್ಟು ಹೀಗೆ ಅನೇಕ ಸಮಸ್ಯೆಗಳು ಅನೇಕರನ್ನು ಕಾಡುತ್ತಿದೆ. ಹೀಗಿರುವಾಗ ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಅಂಶಗಳುಳ್ಳ ಹೇರ್ ಮಾಸ್ಕ್ಗಳನ್ನು ಬಳಸುತ್ತಾರೆ. ಆದರೆ ಕೆಲವೊಮ್ಮೆ ಅವುಗಳು ಕೆಲಸ ಮಾಡುವುದಿಲ್ಲ. ಜೊತೆಗೆ ವಿರುದ್ಧ ಪರಿಣಾಮವನ್ನು ಸಹ ಹೊಂದಿದೆ.
ಕೂದಲು ಉದುರುವ ಸಮಸ್ಯೆಯನ್ನು ಹೋಗಲಾಡಿಸಲು, ಉದ್ದ ಮತ್ತು ಆರೋಗ್ಯಕರ ಕೂದಲು ಬೆಳೆಯಲು, ಸ್ನಾನ ಮಾಡುವಾಗ ಕೆಲವು ಅಂಶಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ತಜ್ಞರು ಹೇಳುತ್ತಾರೆ. ಕೂದಲು ಉದುರುವುದನ್ನು ತಪ್ಪಿಸಲು ಸಲ್ಫೇಟ್ ಮುಕ್ತ ಶಾಂಪೂ ಬಳಸಿ ಕೂದಲನ್ನು ತೊಳೆಯಲು ತಜ್ಞರು ಶಿಫಾರಸು ಮಾಡುತ್ತಾರೆ.
ಪ್ರತಿದಿನ ಸ್ನಾನ ಮಾಡುವುದರಿಂದ ಕೂದಲು ಒಣಗಬಹುದು. ಇದರಿಂದ ನೆತ್ತಿಯಲ್ಲಿರುವ ನೈಸರ್ಗಿಕ ಎಣ್ಣೆ ನಾಶವಾಗಿ ಕೂದಲು ಹೆಚ್ಚು ಉದುರುತ್ತದೆ. ಇದನ್ನು ತಡೆಯಲು ವಾರಕ್ಕೆ 2-3 ಬಾರಿ ತಲೆ ಸ್ನಾನ ಮಾಡಿದರೆ ಸಾಕು.
ತುಂಬಾ ಬಿಸಿ ನೀರಿನಿಂದ ಸ್ನಾನ ಮಾಡಬೇಡಿ. ಇದು ಕೂದಲು ಉದುರುವಿಕೆಗೆ ಕಾರಣವಾಗಬಹುದು. ನೀವು ಸ್ನಾನ ಮಾಡುವಾಗ ನಿಮ್ಮ ಕೂದಲನ್ನು ಚೆನ್ನಾಗಿ ತೊಳೆಯದಿದ್ದರೆ, ಶಾಂಪೂದಲ್ಲಿನ ರಾಸಾಯನಿಕಗಳು ಉಳಿದು ನಿಮ್ಮ ಕೂದಲಿಗೆ ಹಾನಿಯನ್ನುಂಟುಮಾಡುತ್ತವೆ. ಕೂದಲು ಉದುರುವಿಕೆಗೆ ಇದು ಪ್ರಮುಖ ಕಾರಣವೂ ಆಗಿರಬಹುದು.