ಬಾಳೆಹಣ್ಣು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರಲ್ಲಿ ಪೊಟ್ಯಾಸಿಯಮ್ ಅಧಿಕವಾಗಿದೆ. ಇದು ಅನೇಕ ರೀತಿಯ ದೀರ್ಘಕಾಲದ ಕಾಯಿಲೆಗಳಿಂದ ದೇಹವನ್ನು ರಕ್ಷಿಸುತ್ತದೆ. ಅಲ್ಲದೇ, ಬಾಳೆಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಅಧಿಕವಾಗಿದೆ.
ಹಾಗಾಗಿ ಪ್ರತಿದಿನ ಬಾಳೆಹಣ್ಣನ್ನು ತಿನ್ನುವುದರಿಂದ ದೇಹಕ್ಕೆ ತ್ವರಿತ ಶಕ್ತಿ ಸಿಗುತ್ತದೆ. ಹೀಗಾಗಿ ವ್ಯಾಯಾಮ ಮಾಡುವವರು ಮತ್ತು ಜಿಮ್ಗೆ ಹೋಗುವವರು ಬಾಳೆಹಣ್ಣು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯುತ್ತಾರೆ. ಬಾಳೆಹಣ್ಣು ಪೊಟ್ಯಾಸಿಯಮ್, ಮೆಗ್ನೀಸಿಯಮ್, ವಿಟಮಿನ್ ಬಿ6, ರಂಜಕದಂತಹ ಜೀವಸತ್ವಗಳು ಮತ್ತು ಖನಿಜಗಳ ಗಣಿಯಾಗಿದೆ. ಈ ಎಲ್ಲಾ ಅಂಶಗಳಿಂದ ಮುಂಜಾನೆ ಎದ್ದು ಬಾಳೆಹಣ್ಣನ್ನು ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಶಕ್ತಿ ಸಿಗುತ್ತದೆ. ಅಲ್ಲದೇ ಸ್ನಾಯುಗಳ ಬಲವೂ ಹೆಚ್ಚುತ್ತದೆ.
ಬಾಳೆಹಣ್ಣು ಪೊಟ್ಯಾಷಿಯಂ, ಮೆಗ್ನೀಷಿಯಂ ಮತ್ತು ವಿಟಮಿನ್-ಬಿ 6 ನ ಉತ್ತಮ ಮೂಲವಾಗಿದೆ. ಇದು ದೇಹದ ಚಯಾಪಚಯವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ದೇಹದ ಶಕ್ತಿಗೆ ಈ ಹಣ್ಣು ಅಗತ್ಯ. ಹಾಗಾಗಿ ಚಳಿಗಾಲದಲ್ಲಿ ಬಾಳೆಹಣ್ಣುಗಳು ಶಕ್ತಿ ಪಡೆಯಲು ಉತ್ತಮ ಮೂಲವಾಗಿದೆ ಎಂದು ಹೇಳಬಹುದು. ಅಲ್ಲದೆ, ಇದರಲ್ಲಿರುವ ಫೈಬರ್ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಆದ್ರೆ, ಈ ಕ್ರಿಯೆಗಳು ಚಳಿಗಾಲದಲ್ಲಿ ನಿಧಾನವಾಗಬಹುದು
ಬಾಳೆಹಣ್ಣುಗಳನ್ನು ತಂಪಾಗಿಸುವ ಹಣ್ಣು ಎಂದು ಪರಿಗಣಿಸಲಾಗುತ್ತದೆ ಮತ್ತು ಅತಿಯಾದ ಸೇವನೆಯು ಕೆಲವು ಜನರಲ್ಲಿ ಗಂಟಲು ನೋವು ಅಥವಾ ಶೀತಕ್ಕೆ ಕಾರಣವಾಗಬಹುದು. ಒಬ್ಬ ವ್ಯಕ್ತಿಯು ಶೀತಕ್ಕೆ ಸಂಬಂಧಿಸಿದ ಅಲರ್ಜಿಯನ್ನು ಹೊಂದಿದ್ದರೆ ಅವರು ಬಾಳೆ ಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಬೇಕು.
ಅದೇ ಸಮಯದಲ್ಲಿ, ನೀವು ದೈಹಿಕವಾಗಿ ಸಕ್ರಿಯರಾಗಿದ್ದರೆ ಮತ್ತು ಶೀತದಲ್ಲಿಯೂ ಸಹ ವ್ಯಾಯಾಮ ಮಾಡುತ್ತಿದ್ದರೆ ಬಾಳೆಹಣ್ಣುಗಳು ನಿಮಗೆ ಪ್ರಯೋಜನಕಾರಿಯಾಗಬಹುದು. ಏಕೆಂದರೆ ಅವು ತ್ವರಿತ ಶಕ್ತಿಯನ್ನು ನೀಡುತ್ತದೆ.
ಹಾಗಿದ್ರೆ, ಬಾಳೆಹಣ್ಣನ್ನು ಯಾವ ಸಂದರ್ಭದಲ್ಲಿ ಸೇವಿಸಬಹುದು ಎಂಬುದನ್ನು ಇಲ್ಲಿ ನೋಡೋಣ, ಬೆಳಿಗ್ಗೆ ಬಾಳೆಹಣ್ಣುಗಳನ್ನು ತಿನ್ನುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಆದರೆ ರಾತ್ರಿಯಲ್ಲಿ ಅವುಗಳನ್ನು ತಿನ್ನುವುದನ್ನು ನಿಲ್ಲಿಸಬೇಕು. ಏಕೆಂದರೆ ಅವು ಲೋಳೆಯ ಪ್ರಮಾಣವನ್ನು ಹೆಚ್ಚಿಸಬಹುದು, ಇದು ಶೀತ ಮತ್ತು ಕೆಮ್ಮಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಅಧಿಕ ರಕ್ತದೊತ್ತಡ ಇರುವವರಿಗೆ ಬಾಳೆಹಣ್ಣು ಪ್ರಯೋಜನಕಾರಿ. ಇದರಲ್ಲಿ ಪೊಟಾಶಿಯಂ ಅಧಿಕವಾಗಿದ್ದು, ರಕ್ತದೊತ್ತಡ ನಿಯಂತ್ರಣದಲ್ಲಿರಲು ಸಹಕಾರಿಯಾಗಲಿದೆ. ಅದರ ಹೊರತಾಗಿಯೂ, ಮಧುಮೇಹಿಗಳು ಬಾಳೆಹಣ್ಣನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು. ಏಕೆಂದರೆ ಅವುಗಳು ಹೆಚ್ಚಿನ ಸಕ್ಕರೆ ಹೊಂದಿರುತ್ತವೆ. ಚಳಿಗಾಲದಲ್ಲಿ ಬಾಳೆಹಣ್ಣು ತಿನ್ನಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವುದು ಅವರ ದೈಹಿಕ ಸ್ಥಿತಿ ಮತ್ತು ಅಗತ್ಯಗಳನ್ನು ಅವಲಂಬಿಸಿರುತ್ತದೆ