ಇತ್ತೀಚಿನ ದಿನಗಳಲ್ಲಿ ಹಳೆಯ ಅಥವಾ ಪುರಾತನ ಕಾಲದ ನಾಣ್ಯಗಳಿಗೆ ಹಾಗೂ ಹಳೆಯ ಕರೆನ್ಸಿ ನೋಟುಗಳನ್ನು ಬೇಡಿಕೆ ಹೆಚ್ಚಿದೆ. ಕೆಲವೊಂದು ವೆಬ್ ಸೈಟ್ ಗಳು ಇಂಥ ಪುರಾತನ ಹಾಗೂ ವಿಶಿಷ್ಟ ನಾಣ್ಯಗಳು ಹಾಗೂ ನೋಟುಗಳ ಬಿಡ್ಡಿಂಗ್ ನಡೆಸುತ್ತಿದ್ದು, ಲಕ್ಷಾಂತರ ರೂ. ಗಳಿಸುವ ಅವಕಾಶವನ್ನು ನೀಡಿವೆ. ಹಾಗೆಯೇ ಒಂದು ರೂ. ಮುಖಬೆಲೆಯ ಹಳೆಯ ನಾಣ್ಯ ನಿಮ್ಮ ಸಂಗ್ರಹದಲ್ಲಿದ್ದರೆ,
ಕೋಟ್ಯಂತರ ರೂಪಾಯಿ ಗಳಿಸುವ ಅವಕಾಶವಿದೆ. 1885ರಲ್ಲಿ ಬ್ರಿಟಿಷರ ಕಾಲಾವಧಿಯಲ್ಲಿ ಸಿದ್ಧಗೊಂಡ ಒಂದು ರೂ. ಮುಖಬೆಲೆಯ ನಾಣ್ಯ ಹರಾಜಿನಲ್ಲಿ 10 ಕೋಟಿ ರೂ.ಗೆ ಮಾರಾಟವಾಗಿದೆ. ಹೀಗಾಗಿ ನಿಮ್ಮ ಬಳಿಯು ಇದೇ ಮಾದರಿಯ ನಾಣ್ಯವಿದ್ರೆ ನೀವು ಕೂಡ ಆನ್ ಲೈನ್ ಹರಾಜಿನಲ್ಲಿ ಭಾಗವಹಿಸುವ ಮೂಲಕ 10 ಕೋಟಿ ರೂ. ಗಳಿಸಬಹುದು.
ನಿಮ್ಮ ಹತ್ರ ಹಳೆ ನೋಟು, ಚಿಲ್ಲರೆ ಇದ್ಯಾ?
ಪ್ರಸ್ತುತ ನಾಣ್ಯಶಾಸ್ತ್ರಜ್ಞರು ನಾಣ್ಯಗಳ ಸಂಗ್ರಾಹಕರಾಗಿದ್ದಾರೆ ಮತ್ತು ನೋಟಫಿಲಿಸ್ಟ್ಗಳು ಅಪರೂಪದ ನಾಣ್ಯಗಳು ಮತ್ತು ನೋಟುಗಳ ಹುಡುಕಾಟದಲ್ಲಿದ್ದಾರೆ. ನೀವು ಅಂತಹ ನಾಣ್ಯಗಳು ಅಥವಾ ನೋಟುಗಳ ಸಂಗ್ರಹವನ್ನು ಹೊಂದಿದ್ದರೆ, ನೀವು ಅವುಗಳನ್ನು ಉತ್ತಮ ಮೊತ್ತಕ್ಕೆ ಮಾರಾಟ ಮಾಡಬಹುದು. ಈ ನಾಣ್ಯಗಳು ಮತ್ತು ನೋಟುಗಳ ಮಾರಾಟದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.
2ರೂ. ನಾಣ್ಯಕ್ಕೆ 5ಲಕ್ಷ ರೂ.
ನಿಮ್ಮ ಬಳಿ ಕೆಲವು ನಿರ್ದಿಷ್ಟ ವರ್ಷಗಳಿಗೆ ಸಂಬಂಧಿಸಿದ ನಾಣ್ಯಗಳಿದ್ರೆ ಲಕ್ಷಾಂತರ ರೂಪಾಯಿ ಗಳಿಸಬಹುದು. 1994, 1995, 1997 ಹಾಗೂ 2000 ಸರಣಿ ವರ್ಷಗಳಿಗೆ ಸೇರಿದ 2ರೂ. ನಾಣ್ಯಗಳು ನಿಮ್ಮ ಬಳಿಯಿದ್ರೆ ಆನ್ ಲೈನ್ ನಲ್ಲಿ ಮಾರಾಟ ಮಾಡಿ 5ಲಕ್ಷ ರೂ. ಗಳಿಸಬಹುದು. ಈ ನಾಣ್ಯವನ್ನು ನೀವು OLX ನಲ್ಲಿ ಮಾರಾಟ ಮಾಡಬಹುದು.
ಇದಕ್ಕೆ ನೀವು OLX ನಲ್ಲಿ ಮಾರಾಟಗಾರರಾಗಿ ಹೆಸರು ನೋಂದಾಯಿಸಬೇಕು. ಆ ಬಳಿಕ ನಾಣ್ಯದ ಎರಡೂ ಮುಖಗಳ ಫೋಟೋ ಅಪ್ ಲೋಡ್ ಮಾಡಿ. ಆ ಬಳಿಕ ನಿಮ್ಮ ಮೊಬೈಲ್ ಹಾಗೂ ಇ-ಮೇಲ್ ವಿಳಾಸ ನಮೂದಿಸಿ. ನೀವು ನೀಡಿರೋ ಎಲ್ಲ ಮಾಹಿತಿಗಳನ್ನು ಒಮ್ಮೆ ಪರಿಶೀಲಿಸಿಕೊಳ್ಳಿ. ಖರೀದಿದಾರರು ನಿಮ್ಮನ್ನು ನೇರವಾಗಿ ಸಂಪರ್ಕಿಸುತ್ತಾರೆ.
ಯಾವ ನೊಟುಗಳು, ಚಿಲ್ಲರೆಗಿದೆ ಹೆಚ್ಚಿನ ಡಿಮ್ಯಾಂಡ್?
– ಮಾತಾ ವೈಷ್ಣೋ ದೇವಿಯ ಚಿತ್ರವಿರುವ 5 ಮತ್ತು 10 ರೂಪಾಯಿ ನಾಣ್ಯಗಳನ್ನು ಹೊಂದಿದ್ದರೆ, ಈ ನಾಣ್ಯಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಅಂತಹ ನಾಣ್ಯಗಳನ್ನು ಹೊಂದಿರುವವರಿಂದ ಜನರು ಲಕ್ಷಾಂತರ ರೂಪಾಯಿಗಳನ್ನು ಪಾವತಿಸಲು ಸಿದ್ಧರಿದ್ದಾರೆ.
– ನಿಮ್ಮ ಬಳಿ ಹಳೆಯ 1 ರೂಪಾಯಿ ನೋಟು ಇದ್ದರೆ, ನೀವು 45 ಸಾವಿರ ರೂಪಾಯಿ ಗಳಿಸಬಹುದು. ಆನ್ಲೈನ್ ಪ್ಲಾಟ್ಫಾರ್ಮ್ನಲ್ಲಿ ಒಂದು ರೂಪಾಯಿ ನೋಟುಗಳ ಬಂಡಲ್ ಅನ್ನು 45,000 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಈ ನೋಟಿನಲ್ಲಿ 1957 ರಾಜ್ಯಪಾಲ ಎಚ್. ಎಂ. ಪಟೇಲ್ ಸಹಿ ಇರಬೇಕು. ಅಲ್ಲದೆ ಈ ನೋಟಿನ ಕ್ರಮಸಂಖ್ಯೆ 123456 ಆಗಿರಬೇಕು. ಇಷ್ಟು ಮಾತ್ರವಲ್ಲದೆ ಒಎನ್ ಜಿಸಿಯ 5 ಮತ್ತು 10 ರೂಪಾಯಿ ಸ್ಮರಣಾರ್ಥ ನಾಣ್ಯಗಳು 200 ರೂಪಾಯಿ ಪಡೆಯುತ್ತಿವೆ.
– ನೀವು ನೂರು ರೂಪಾಯಿ ನೋಟಿಗೆ ರೂ 1,999 ಪಡೆಯಬಹುದು. ಆದರೆ ಟಿಪ್ಪಣಿಯು 000786 ರ ಅಸಾಮಾನ್ಯ ಸಂಖ್ಯಾತ್ಮಕ ಸರಣಿಯಾಗಿರಬೇಕು. ಆ ಟಿಪ್ಪಣಿಯಲ್ಲಿ ಆರ್ಬಿಐ ಮಾಜಿ ಗವರ್ನರ್ ಡಿ. ಸುಬ್ಬರಾವ್ ಸಹಿ ಇರಬೇಕು ಎಂಬ ನಿರೀಕ್ಷೆಯನ್ನು ಖರೀದಿದಾರರು ವ್ಯಕ್ತಪಡಿಸಿದ್ದಾರೆ.
– 1943 ರಲ್ಲಿ ಬಿಡುಗಡೆಯಾದ 10 ರೂಪಾಯಿ ನೋಟನ್ನು ಕಾಯಿನ್ ಬಜಾರ್ನಲ್ಲಿ ಮಾರಾಟ ಮಾಡುವ ಮೂಲಕ ನೀವು ಹಣ ಸಂಪಾದಿಸಬಹುದು. ಈ ಟಿಪ್ಪಣಿಗೆ ಆರ್ಬಿಐ ಗವರ್ನರ್ ಸಿಡಿ ದೇಶಮುಖ್ ಸಹಿ ಹಾಕಿದ್ದಾರೆ. ಅಲ್ಲದೆ, ಈ ನೋಟಿನಲ್ಲಿ ಒಂದು ಬದಿಯಲ್ಲಿ ಅಶೋಕ ಸ್ತಂಭ ಮತ್ತು ಇನ್ನೊಂದು ಬದಿಯಲ್ಲಿ ಹಡಗಿನ ಚಿತ್ರವಿದೆ.
– ನೀವು 1862 ಕ್ವೀನ್ ವಿಕ್ಟೋರಿಯಾ ನಾಣ್ಯವನ್ನು ಹೊಂದಿದ್ದರೆ, Quikr ನಲ್ಲಿ ಖರೀದಿದಾರರು ಅದಕ್ಕೆ 1.5 ಲಕ್ಷ ರೂಪಾಯಿಗಳನ್ನು ಪಾವತಿಸಲು ಸಿದ್ಧರಿದ್ದಾರೆ. 1862 ರ ಈ ಬೆಳ್ಳಿಯ ಒಂದು ರೂಪಾಯಿ ನಾಣ್ಯವು ಅಪರೂಪದ ನಾಣ್ಯಗಳ ವರ್ಗಕ್ಕೆ ಸೇರುತ್ತದೆ.
ಎಲ್ಲಿ ಮತ್ತು ಹೇಗೆ ಮಾರಾಟ ಮಾಡೋದು?
ಹಳೆಯ ನೋಟುಗಳು ಮತ್ತು ನಾಣ್ಯಗಳನ್ನು CoinBazar, Indiamart ಮತ್ತು Quikr ನಂತಹ ಅನೇಕ ವೆಬ್ಸೈಟ್ಗಳಲ್ಲಿ ಮಾರಾಟ ಮಾಡಬಹುದು. CoinBazaar.com ನಲ್ಲಿ ಮಾರಾಟ ಮಾಡಲು ನೀವು ಮೊದಲು ಅಲ್ಲಿ ನೋಂದಾಯಿಸಿಕೊಳ್ಳಬೇಕು.
ನಿಮ್ಮ ವಿವರಗಳನ್ನು ಭರ್ತಿ ಮಾಡಿದ ನಂತರ ನೀವು ಮಾರಾಟ ಮಾಡಲು ಬಯಸುವ ನಾಣ್ಯಗಳು ಅಥವಾ ನೋಟುಗಳ ವಿವರಗಳನ್ನು ನೀಡಬೇಕು. ಇದರ ನಂತರ ನೀವು ನಿರೀಕ್ಷಿತ ಬೆಲೆಯ ಬಗ್ಗೆ ತಿಳಿಸಬೇಕು. ಇದರ ನಂತರ, ಆಸಕ್ತ ಖರೀದಿದಾರರು ನಿಮ್ಮನ್ನು ನೇರವಾಗಿ ಸಂಪರ್ಕಿಸುತ್ತಾರೆ. Coinbazaar ವೆಬ್ಸೈಟ್ ಅನ್ನು 23 ಮಾರ್ಚ್ 2015 ರಂದು ಪ್ರಾರಂಭಿಸಲಾಯಿತು.
RBI ಎಚ್ಚರಿಕೆ
ಹಳೆಯ ನೋಟು (Old note) ಹಾಗೂ ನಾಣ್ಯಗಳ ಆನ್ ಲೈನ್ ಮಾರಾಟಹಾಗೂ ಖರೀದಿಗೆ (Purchase) ಸಂಬಂಧಿಸಿ ಆರ್ ಬಿಐ ಕೆಲವು ಮಾರ್ಗಸೂಚಿ ಹಾಗೂ ಎಚ್ಚರಿಕೆ ಸಂದೇಶಗಳನ್ನು ಸಾರ್ವಜನಿಕರಿಗೆ ರವಾನಿಸಿದೆ ಕೂಡ. ‘ಕೆಲವು ಸಂಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕಿನ ಹೆಸರು ಹಾಗೂ ಲೋಗೋವನ್ನು ಅಕ್ರಮವಾಗಿ ಬಳಸಿಕೊಂಡು ಹಳೆಯ ಬ್ಯಾಂಕಿನ ನೋಟುಗಳು ಹಾಗೂ ನಾಣ್ಯಗಳ ಆನ್ ಲೈನ್
ಹಾಗೂ ಆನ್ ಲೈನ್ ಹೊರತಾದ ಮಾರಾಟ ಹಾಗೂ ಖರೀದಿಗೆ ಸಂಬಂಧಿಸಿದ ವಹಿವಾಟುಗಳಿಗೆ ಶುಲ್ಕ ವಿಧಿಸುತ್ತಿರೋದು ಅಥವಾ ಕಮೀಷನ್ ಅಥವಾ ತೆರಿಗೆ ಪಡೆಯುತ್ತಿರೋದು ಆರ್ ಬಿಐ ಗಮನಕ್ಕೆ ಬಂದಿದೆ’ ಎಂದು ಆರ್ ಬಿಐ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ ಕೂಡ. ಅಷ್ಟೇ ಅಲ್ಲ, ಇಂಥ ವ್ಯವಹಾರಗಳಲ್ಲಿ ಆರ್ ಬಿಐ ಭಾಗಿಯಾಗಿಲ್ಲ. ಅಲ್ಲದೆ, ಇಂಥ ವಹಿವಾಟುಗಳ ಮೇಲೆ ಯಾವುದೇ ಶುಲ್ಕಗಳು ಅಥವಾ ಕಮೀಷನ್ ಪಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ ಕೂಡ.