ಹೋಳಿ ಹಬ್ಬ ಎನ್ನುವುದು ಭಾರತದ ಸಂಸ್ಕೃತಿಯ ಸಂಕೇತವಾಗಿದೆ. ಭಾರತದಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಎಲ್ಲರೂ ಆಚರಿಸಲಾಗುತ್ತದೆ. ಯಾವುದೇ ಜಾತಿ ಮತಗಳ ಭೇದವಿಲ್ಲದೆ ಒಟ್ಟಾಗಿ ಸೇರಿ ಬಣ್ಣಗಳ ಓಕುಳಿಯಾಟದಲ್ಲಿ ಮಿಂದೇಳುತ್ತಾರೆ. ಯಾವುದೇ ಹಬ್ಬವೂ ತನ್ನದೇ ಆದ ಆಚಾರ ಸಂಪ್ರದಾಯಗಳನ್ನು ಹೊಂದಿರುತ್ತದೆ. ಅದೇ ರೀತಿ ಹೋಳಿ ಬಣ್ಣಗಳ ಹಬ್ಬವಾಗಿದ್ದು, ದೂರದ ಊರಿನವರು ತಮ್ಮ ತಾಯ್ನಾಡಿಗೆ ಬಂದು ಈ ಹಬ್ಬವನ್ನು ಆಚರಿಸುತ್ತಾರೆ
ಹೋಳಿ ಹಬ್ಬದ ಸಂದರ್ಭದಲ್ಲಿ ವಾಸ್ತುವಿಗೆ ಸಂಬಂಧ ಪಟ್ಟ ಕೆಲವು ವಿಷಯಗಳ ಬಗ್ಗೆ ತಿಳಿದುಕೊಂಡು ವಿಶೇಷ ಕಾಳಜಿ ವಹಿಸುವುದು ಮುಖ್ಯವಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಸಂತೋಷ, ಸಮೃದ್ಧಿ ಯಾವಾಗಲೂ ಇರಲು ಹೋಳಿ ಹಬ್ಬದ ಮುಂಚಿತವಾಗಿ ಮನೆಯನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯವಾಗುತ್ತದೆ.
ನಿಮ್ಮ ಮನೆಯಲ್ಲಿ ತುಳಸಿ ಗಿಡವು ಒಣಗಿದ್ದರೆ, ಓಕುಳಿ ಅಥವಾ ಹೋಳಿ ಹಬ್ಬದ ಮೊದಲು ಅದನ್ನು ತೆಗೆದು ಮನೆಯಲ್ಲಿ ಹೊಸ ಸಸ್ಯವನ್ನು ನೆಡಿ
ಅನೇಕ ಬಾರಿ ಜನರು ತಿಳಿದೋ ತಿಳಿಯದೆಯೋ ಕಳೆದ ವರ್ಷ ಹೋಳಿ ಆಡಿದ ಬಟ್ಟೆಯಲ್ಲಿ ಈ ವರ್ಷವೂ ಓಕುಳಿ ಆಡುತ್ತಾರೆ. ಆದರೆ ಇದನ್ನು ಮಾಡಬೇಡಿ.
ವಾಸ್ತು ಪ್ರಕಾರ, ಮುರಿದ ಕನ್ನಡಿಯನ್ನು ಮನೆಯಲ್ಲಿ ಇಡುವುದು ಶುಭವಲ್ಲ. ಆದ್ದರಿಂದ, ಹೋಳಿ ಹಬ್ಬದ ಮೊದಲು ಮನೆಯನ್ನು ಸ್ವಚ್ಛ ಗೊಳಿಸಿ ಬಿರುಕು ಬಂದ ಗಾಜಿನ ಬಾಟಲಿ ಮತ್ತು ಗ್ಲಾಸ್ ಗಳನ್ನು ಮನೆಯಲ್ಲಿ ಇಟ್ಟು ಕೊಳ್ಳಬೇಡಿ. ಮುರಿದ ವರ್ಣಚಿತ್ರಗಳು ಮತ್ತು ದೇವರ ಮುರಿದ ವಿಗ್ರಹವನ್ನು ಹರಿಯುವ ನೀರಿನಲ್ಲಿ ಬಿಡಿ.