ನಕ್ಕರೆ ಅದುವೇ ಸ್ವರ್ಗ, ನಕ್ಕರೆ ಎಲ್ಲಾ ಕಾಯಿಲೆಗಳು ಮಾಯ. ನಗುವುದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ ಎನ್ನುವ ಮಾತಿದೆ. ಸುಮ್ಮನೆ ನಕ್ಕರೆ ಅದನ್ನು ಸುತ್ತಮುತ್ತಲಿನವರು ಬೇರೆಯೇ ರೀತಿಯಲ್ಲಿ ಪರಿಗಣಿಸಬಹುದು. ಇದಕ್ಕಾಗಿ ನಾವು ಗುಂಪಿನಲ್ಲಿರುವಾಗ ಜೋಕ್ಸ್ ಸಿಡಿಸುವುದು ಸಹಜ.
ಇದನ್ನು ಕೇಳಿ ನಕ್ಕರೆ ಜೋಕ್ಸ್ ಹೇಳಿದವನ ಮನಸ್ಸಿಗೂ ಖುಷಿ.
ಆದರೆ ಅಂತಾರಾಷ್ಟ್ರೀಯ ಜೋಕ್ಸ್ ಡೇ ಇದೆ ಎಂದರೆ ಕೆಲವರಿಗೆ ಇದುವೇ ಜೋಕ್ಸ್ ಆಗಬಹುದು. ಆದರೆ ಈ ದಿನ ಹಲವಾರು ವಿಷಯಗಳನ್ನು ಹೇಳುತ್ತದೆ. ಜೋಕ್ಸ್ ದಿನದಂದು ನೀವು ತುಂಬಾ ಹಾಸ್ಯದಿಂದ ವರ್ತಿಸಿ, ಮನಸ್ಸು ಬಿಚ್ಚಿ ನಗಬಹುದು. ಪ್ರತಿಯೊಬ್ಬರು ಏನಾದರೊಂದು ಸಮಸ್ಯೆಯಲ್ಲಿ ಸಿಲುಕಿರುತ್ತಾರೆ. ಆದರೆ ಇಂತಹ ಸಮಸ್ಯೆಗಳಿಂದ ದೂರ ಉಳಿದು ಸಂತೋಷ ಪಡುವುದೇ ಅಂತಾರಾಷ್ಟ್ರೀಯ ಜೋಕ್ಸ್ ದಿನದ ವಿಶೇಷತೆ.
ಅಂತರಾಷ್ಟ್ರೀಯ ಜೋಕ್ ದಿನದ ಇತಿಹಾಸ
ಇಂಟರ್ನ್ಯಾಷನಲ್ ಜೋಕ್ ಡೇ ಆಚರಣೆಯು 90 ರ ದಶಕದ ಮಧ್ಯಭಾಗದಲ್ಲಿ ವೇಯ್ನ್
ರೀನಾಗೆಲ್ ಎಂಬ ಅಮೆರಿಕನ್ ಲೇಖಕರಿಂದ ಪ್ರಾರಂಭವಾಯಿತು. ಅವರು ತಮ್ಮ ಹಾಸ್ಯದ ಪುಸ್ತಕಗಳನ್ನು ಪ್ರಚಾರ ಮಾಡಲು ಈ ದಿನವನ್ನು ರಚಿಸಿದರು. ನಮ್ಮ ಜೀವನದಲ್ಲಿ ಹಾಸ್ಯ ಮತ್ತು ನಗುವಿನ ಪ್ರಾಮುಖ್ಯತೆಯನ್ನು ಗುರುತಿಸಲು, ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯಕರವಾಗಿರಲು ದೈನಂದಿನ ಒತ್ತಡಗಳ ವಿರುದ್ಧ ಹೋರಾಡಲು ಅಂತರರಾಷ್ಟ್ರೀಯ ಜೋಕ್ ದಿನವನ್ನು ಆಚರಿಸುವುದು ಕಾಣಬಹುದು.
ಇಂಟರ್ನ್ಯಾಷನಲ್ ಜೋಕ್ಸ್ ಡೇ 1994 ರಲ್ಲಿ ಅಮೆರಿಕಾದಲ್ಲಿ ಪ್ರಾರಂಭವಾಯಿತು. ಲೇಖಕ ವೇಯ್ನ್ ರಾನಿಗಲ್ ಅವರಿಂದ ಈ ದಿನ ಶುರುವಾಯ್ತು. ಲೇಖಕ ವೇಯ್ನ್, ತಮ್ಮ ಜೋಕ್ ಪುಸ್ತಕವನ್ನು ಪ್ರಚಾರ ಮಾಡಲು ಈ ದಿನವನ್ನು ಬಳಸಿಕೊಡಿದ್ದರು. ಅವರು ಸುಮಾರು 250 ಆಫೀಸ್ ಜೋಕ್ಗಳು, ಕಾರ್ಟೂನ್ಗಳು, ಮೀಮ್ಗಳ ಪ್ರಚಾರ ಮಾಡಿದ್ದರು. ಅವರು
ಇದನ್ನು ಪ್ರಚಾರ ಮಾಡುವ ವೇಳೆಗೆ ಅರ್ಧವರ್ಷ ಪೂರ್ಣಗೊಂಡಿದ್ದ ಕಾರಣ ಜುಲೈ ತಿಂಗಳನ್ನು ಜೋಕ್ ಡೇಯಾಗಿ ಆಚರಿಸಲು ಆಯ್ದುಕೊಂಡ್ರು.
ಜೋಕ್ನಿಂದಾಗುವಲಾಭಗಳು :
- ಜೋಕ್ ಗಳು ಮನುಷ್ಯನ ಮುಖದಲ್ಲಿ ನಗು ತರಿಸುತ್ತವೆ. ಈ ನಗುವಿನಿಂದ ನಾನಾ ಲಾಭಗಳಿವೆ.
- ಯಾವ ವ್ಯಕ್ತಿ ಸದಾ ನಗ್ತಿರುತ್ತಾನೋ ಆತನ ಹಾಸ್ಯ ಪ್ರಜ್ಞೆ ಉತ್ತಮವಾಗಿರುತ್ತದೆ ಎನ್ನಲಾಗುತ್ತದೆ.
- ಹೆಚ್ಚು ಸಂತೋಷವಾಗಿರುವವರು ಹೆಚ್ಚು ನಗ್ತಾರೆ. ಹೆಚ್ಚು ನಗುತ್ತಿದ್ದಂತೆ ನಿಮ್ಮ ಒತ್ತಡ ಕಡಿಮೆಯಾಗುತ್ತದೆ.
- ನಗುವುದರಿಂದ ರಕ್ತಸಂಚಾರ ಚೆನ್ನಾಗಿ ಆಗುತ್ತದೆ.
- ನಗುವುದ್ರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ. ಮುಖಕ್ಕೊಂದು ವಿಶೇಷ ಹೊಳಪು ಬರುತ್ತದೆ. ಮುಕ್ತವಾಗಿ ನಗುವುದು ದೇಹ ಮತ್ತು ಮುಖ ಎರಡಕ್ಕೂ ಒಳ್ಳೆಯದು.
- ನಗು ಶ್ವಾಸಕೋಶಗಳ ಆರೋಗ್ಯಕ್ಕೂ ಒಳ್ಳೆಯದು.
- ಸಂಶೋಧನೆ ಪ್ರಕಾರ, ನಗುವ ವ್ಯಕ್ತಿಯ ಸುತ್ತ ಯಾವಾಗ್ಲೂ ಒಂದಿಷ್ಟು ಜನರು ಸುತ್ತುವರೆದಿರುತ್ತಾರೆ. ಧನಾತ್ಮಕ ಶಕ್ತಿ ಅವರಲ್ಲಿ ಹೆಚ್ಚಿರುವ ಕಾರಣ ಅವರು ಜನರನ್ನು ಸೆಳೆಯುತ್ತಾರೆ.
- ನಗುವಿನಿಂದ ಆಯಾಸವಾಗಲು ಸಾಧ್ಯವೇ ಇಲ್ಲ. ನಗು ಧನಾತ್ಮಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ.
- ವಿಜ್ಞಾನದ ಪ್ರಕಾರ, ಹೃದಯ ಮತ್ತು ಮನಸ್ಸಿಗೆ ಸಂಬಂಧಿಸಿದ ಕಾಯಿಲೆಗಳನ್ನು ತಪ್ಪಿಸಲು ನಗು ಉತ್ತಮವಾದ ಔಷಧವಾಗಿದೆ.
- ನೀವು ಮನಸ್ಸು ಬಿಚ್ಚಿ ನಗುವುದ್ರಿಂದ ಯಾವುದೇ ರೋಗ ನಿಮ್ಮ ಬಳಿ ಸುಳಿಯೋದಿಲ್ಲ. ಆದ್ರೆ ಈ ಹಾಸ್ಯ, ತಮಾಷೆ ಬೇರೆ ಯಾರ ಭಾವನೆಗೂ ಧಕ್ಕೆ ತರುವಂತಿರಬಾರದು.
- ಅಧಿಕ ರಕ್ತದೊತ್ತಡದಿಂದ ಬಳಲುವ ರೋಗಿ ಯಾವಾಗ್ಲೂ ಸಂತೋಷವಾಗಿರುವುದು ಮುಖ್ಯ. ಅಧಿಕ ರಕ್ತದೊತ್ತಡದಿಂದಾಗಿ ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವು ತುಂಬಾ ಹೆಚ್ಚಾಗಿದೆ.
- ನೀವು ಸಂತೋಷವಾಗಿದ್ದರೆ, ನಗುತ್ತಿದ್ದರೆ ನಿಮ್ಮೊಳಗಿನ ಒತ್ತಡದ ಹಾರ್ಮೋನುಗಳು