ನಂಬಿಕೆ ಎನ್ನುವುದು ಮನುಷ್ಯನಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಒಂದು ಪುಟ್ಟ ನಂಬಿಕೆಯಿಂದ ಜೀವನದಲ್ಲಿ ಸಾಕಷ್ಟು ಆಗುಹೋಗುಗಳನ್ನು ಎದುರಿಸುತ್ತೇವೆ. ನಂಬಿಕೆ ಎನ್ನುವುದು ಮನುಷ್ಯನಿಗೆ ಒಂದು ಔಷಧಿ ಇದ್ದಂತೆ. ನಾಗರೀಕತೆಯು ಬೆಳೆದು ಬಂದಿದ್ದು ಕೆಲವು ದೃಢ ನಂಬಿಕೆಗಳ ಮೂಲಕವೇ ಎಂದರೆ ತಪ್ಪಾಗಲಾರದು. ನಿಜ, ದೇವರು ಇದ್ದಾನೆ, ತಪ್ಪು ಮಾಡಿದರೆ ಶಿಕ್ಷಿಸುತ್ತಾನೆ ಎನ್ನುವ ನಂಬಿಕೆಯಿಂದಲೇ ಜನರು ತಪ್ಪುಗಳನ್ನು ಮಾಡಲು ಭಯಪಡುತ್ತಾರೆ.
ಅನೇಕ ಜನರಿಗೆ ಕನಸುಗಳಿವೆ. ರಾತ್ರಿ ಮತ್ತು ಹಗಲು ಸೇರಿ ಅನೇಕ ಕನಸುಗಳು ಬರುತ್ತವೆ. ಈ ಕನಸುಗಳಿಂದ ಕೆಲವರು ಭಯಗೊಳ್ಳುತ್ತಾರೆ, ಆದರೆ ಕನಸುಗಳು ಒಳ್ಳೆಯ ಫಲಿತಾಂಶಗಳನ್ನು ಅಥವಾ ಕೆಟ್ಟ ಫಲಿತಾಂಶಗಳನ್ನು ತರಬಹುದು ಎಂದು ನಂಬುವವರು ಹಲವರಿದ್ದಾರೆ. ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಪ್ರಾಣಿಗಳು ಬಂದರೆ ಒಳ್ಳೆಯ ಫಲ ಸಿಗುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.
ಕನಸಿನಲ್ಲಿ ಯಾವ ಪ್ರಾಣಿ ಕಂಡ್ರೆ ಏನು ಅರ್ಥ?
- ರಾತ್ರಿ ಮಲಗಿದ್ದಾಗ ಸ್ವಪ್ನದಲ್ಲಿ ಮೀನು ಕಂಡರೆ ಖುಷಿಪಡಿ. ಯಾಕೆಂದ್ರೆ ನಿಮ್ಮ ಮನೆಯಲ್ಲಿ ಶೀಘ್ರವೇ ಮಂಗಳ ಕಾರ್ಯ ನಡೆಯಲಿದೆ ಎಂಬ ಸೂಚನೆಯನ್ನು ಇದು ನೀಡುತ್ತದೆ.
- ನೀರಿನಲ್ಲಿ ಕಪ್ಪೆ ಇರುವಂತಹ ಕನಸು ಕಂಡರೆ ನಿಮ್ಮ ಭಾವನೆಗಳನ್ನು ನೀವು ನಿಯಂತ್ರಿಸಬೇಕು ಎಂದರ್ಥ.
- ಕನಸಿನಲ್ಲಿ ಕಪ್ಪೆಯ ಶಬ್ದ ಕೇಳಿಸಿದರೆ ಜೀವನದಲ್ಲಿ ಹೊಸ ತಿರುವು ಸಿಗಲಿದೆ ಎಂಬ ಸೂಚನೆಯಾಗಿದೆ. ಕನಸಿನಲ್ಲಿ ನೀವು ಕಪ್ಪೆಯನ್ನು ಕೈನಲ್ಲಿ ಹಿಡಿದಿಟ್ಟುಕೊಂಡಂತೆ ಕಾಣಿಸಿದ್ರೆ ಅದು ಒಳ್ಳೆಯ ಸಂಕೇತವಾಗಿದೆ.
- ಸ್ವಪ್ನದಲ್ಲಿ ಗೂಬೆ ಕಾಣಿಸಿಕೊಂಡ್ರೆ ಶುಭವಲ್ಲ. ಮುಂದಿನ ಜೀವನದಲ್ಲಿ ದುಃಖ ಮತ್ತು ಹಣದ ಸಮಸ್ಯೆ ನಿಮಗೆ ಎದುರಾಗುತ್ತದೆ ಎಂಬುದನ್ನು ಇದು ಸೂಚಿಸುತ್ತದೆ.
- ಕನಸಿನಲ್ಲಿ ಕರಡಿ ಕಾಣಿಸಿಕೊಂಡರೆ ನೀವು ಹೆದರಬೇಕಾಗಿಲ್ಲ. ಖುಷಿಪಡಿ. ಯಾಕೆಂದ್ರೆ ಕನಸಿನಲ್ಲಿ ಕರಡಿ ಕಾಣಿಸಿಕೊಳ್ಳುವುದು ಮಂಗಳಕರವೆಂದು ಪರಿಗಣಿಸಲಾಗಿದೆ.
- ಹಳದಿ ಬೆಕ್ಕು ನಿಮ್ಮ ಕನಸಿನಲ್ಲಿ ಕಾಣಿಸಿಕೊಂಡರೆ ಶೀಘ್ರದಲ್ಲೇ ಅಹಿತಕರ ಸುದ್ದಿ ಕೇಳುವಿರಿ ಎಂಬ ಸೂಚನೆಯಾಗಿದೆ. ಬಿಳಿ ಬೆಕ್ಕ ಕನಸಿನಲ್ಲಿ ಕಂಡರೆ ಹಣದ ನಷ್ಟದ ಸಂಕೇತವಾಗಿದೆ.
- ಬೆಕ್ಕುಗಳು ಜಗಳವಾಡುವುದು ಕನಸಿನಲ್ಲಿ ಕಂಡರೆ ಅದು ಒಳ್ಳೆಯ ಸಂಕೇತವಲ್ಲ. ಬೆಕ್ಕಿನ ಜಗಳ ನೋಡಿದವರು ಸ್ನೇಹಿತರ ಜೊತೆ ಜಗಳವಾಡುತ್ತಾರೆ ಎಂಬ ಸೂಚನೆಯಾಗಿದೆ.
- ರಾತ್ರಿ ನಿದ್ರೆ ಕಸಿದುಕೊಳ್ಳುವ ಕೆಲಸವನ್ನು ಬೆಡ್ ಬಗ್ ಗಳು ಮಾಡ್ತವೆ. ಈ ಬೆಡ್ ಬಗ್ ಗಳು ಕನಸಿನಲ್ಲಿ ಕಂಡರೆ ಯಶಸ್ಸನ್ನು ಪಡೆಯಲು ನೀವು ಸಾಕಷ್ಟು ಕಷ್ಟಪಡಬೇಕಾಗುತ್ತದೆ ಎಂಬ ಸೂಚನೆಯಾಗಿದೆ.
- ಅಲಂಕರಿಸಿರುವ ಕುದುರೆ ನಿಮ್ಮ ಕನಸಿನಲ್ಲಿ ಕಾಣಿಸಿದ್ರೆ ಕೆಲಸದಲ್ಲಿ ನಷ್ಟ ಉಂಟಾಗುತ್ತದೆ ಎಂಬ ಸಂಕೇತವಾಗಿದೆ. ಹಾಗಾಗಿ ಇಂಥ ಕನಸು ಕಾಣಿಸಿದಲ್ಲಿ ಎಚ್ಚರಿಕೆಯಿಂದಿರಿ.
- ಬಾವಲಿ ನೇತಾಡುವುದನ್ನು ನೋಡುವುದು ಅಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ.
- ಕನಸಿನಲ್ಲಿ ಜೀಬ್ರಾ ಕಾಣಿಸಿಕೊಂಡರೆ ಸಂತೋಷದ ದಿನಗಳು ಪ್ರಾರಂಭವಾಗಲಿದೆ ಎಂದರ್ಥ.
- ಕನಸಿನಲ್ಲಿ ಸಿಂಹ ಕಾಣಿಸಿಕೊಂಡ್ರೆ ಶೀಘ್ರದಲ್ಲೇ ಕೆಲವು ಕೆಲಸ ಯಶಸ್ವಿಯಾಗಲಿದೆ ಎಂಬ ಸಂಕೇತವಾಗಿದೆ.
- ಕನಸಿನಲ್ಲಿ ಆನೆಗಳನ್ನು ನೋಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿಯ ಕೃಪೆ ನಿಮಗೆ ಸಿಗಲಿದೆ.
- ಕನಸಿನಲ್ಲಿ ಹಸುವನ್ನು ನೋಡುವುದು ಕೂಡ ಮಂಗಳಕರವೆಂದು ಹೇಳಲಾಗಿದೆ.