ನಾವೆಲ್ಲರೂ ನಮ್ಮ ಮನೆಗಳನ್ನು ಸುಂದರವಾದ ಪೀಠೋಪಕರಣಗಳಿಂದ ಅಲಂಕರಿಸುವುದನ್ನು ಇಷ್ಟಪಡುತ್ತೇವೆ. ಅದಕ್ಕಾಗಿಯೇ ಅನೇಕ ವಸ್ತುಗಳನ್ನ ಸಹ ನಾವು ತಂದು ಇಟ್ಟುಕೊಳ್ಳುತ್ತೇವೆ. ಹೂವಿನ ಕುಂಡ, ಟೇಬಲ್, ಫೋಟೋ, ಪೇಂಟಿಂಗ್ ಹೀಗೆ ವಿಭಿನ್ನವಾದ ವಸ್ತುಗಳನ್ನ ತಂದು ನಾವು ಮನೆಯ ಅಲಂಕಾರ ಮಾಡುತ್ತೇವೆ.
ಈ ವಸ್ತುಗಳು ನಮ್ಮ ಮನೆಯ ಅಂದವನ್ನ ಹೆಚ್ಚಿಸುತ್ತದೆ. ಈ ರೀತಿಯ ವಸ್ತುಗಳಲ್ಲಿ ನವಿಲು ಗರಿ ಸಹ ಒಂದು. ಹಾಗಾಗಿಯೇ ಅನೇಕ ಜನರು ನವಿಲು ಗರಿಯನ್ನ ಅಥವಾ ಅದರಿಂದ ಮಾಡಿದ ಸಣ್ಣ ಕೈ ಫ್ಯಾನ್ಗಳನ್ನ ಇಟ್ಟುಕೊಂಡಿರುತ್ತದೆ. ಇದು ಮನೆಗೆ ಒಂಥರ ಲುಕ್ ಕೊಡುತ್ತದೆ ಎನ್ನಬಹುದು.
ಪ್ರತಿಯೊಬ್ಬರಿಗೂ ಸಂಪತ್ತು ಪಡೆಯಬೇಕು ಎನ್ನುವ ಆಸೆ ಇರುತ್ತದೆ. ಹಾಗಾಗಿ ಅನೇಕ ಪ್ರಯತ್ನಗಳನ್ನ ಮಾಡುತ್ತಾರೆ. ಕೆಲವರು ಅದೆಷ್ಟೇ ಹಣವನ್ನ ಗಳಿಸಿದರೂ ಸಹ ಅದನ್ನ ಉಳಿಸಲು ಸಾಧ್ಯವಾಗುವುದಿಲ್ಲ. ಆದರೆ ಅದಕ್ಕೆ ಸಹ ಈ ನವಿಲು ಗರಿ ಸಹಾಯ ಮಾಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಸೂರ್ಯ ದೇವ ಮತ್ತು ಇಂದ್ರ ದೇವ ಪೂರ್ವ ದಿಕ್ಕಿನ ಅಧಿಪತಿಗಳು. ಹಾಗಾಗಿ ಮನೆಯ ಪೂರ್ವ ದಿಕ್ಕಿನಲ್ಲಿ ನವಿಲು ಗರಿಯನ್ನು ಇಡುವುದು ವಿಶೇಷವಾಗಿ ಅದೃಷ್ಟವನ್ನ ನೀಡುತ್ತದೆ.
- ವಾಸ್ತುವಿನ ಪ್ರಕಾರ ನವಿಲಿನ ಪೇಯಿಂಟಿಂಗ್ ಯಶಸ್ಸುಹಾಗೂ ಅಧಿಕಾರದಸಂಕೇತವಾಗಿದೆ. ಇದು ಮನೆಯಲ್ಲಿದ್ದರೆ ವಯಕ್ತಿಕ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಅಲ್ಲದೆ ಮನೆಯಲ್ಲಿ ಹಣಕಾಸಿನ ಸ್ಥಿರತೆಯನ್ನೂ ಕಾಯ್ದುಕೊಳ್ಳಬಹುದು.
- ಕೆಲವರು ನವಿಲಿನ ಚಿತ್ರವನ್ನು ಆಫೀಸಿನಲ್ಲಿ ಇರಿಸಿಕೊಂಡಿರುತ್ತಾರೆ. ಯಶಸ್ಸು ಹಾಗೂ ಅಧಿಕಾರ ಎರಡನ್ನೂ ಒದಗಿಸುತ್ತಲ್ಲದೆ, ಹುರುಪಿನ ವೇಗದಲ್ಲಿ ಪ್ರಮೋಷನ್ ಪಡೆಯಬಹುದಾಗಿದೆ.
- ಮನೆಯ ಎಂಟ್ರೆನ್ಸ್ ಇರುವ ಕಡೆ ನವಿಲಿನ ಫೋಟೋವನ್ನು ಸಾಮಾನ್ಯವಾಗಿ ಕಾಣಿಸಿಗುತ್ತೆ. ಅದು ಮನೆಯ ಬಾಗಿಲು ಯಾವ ದಿಕ್ಕಿಗಿದೆ ಅದಕ್ಕನುಗುಣವಾಗಿ ಆ ಕಡೆ ಮುಖ ಮಾಡಿರುವ ನವಿಲಿನ ಪೇಯಿಂಟಿAಗ್ ಅನ್ನು ತೂಗಿ ಹಾಕಿರುತ್ತಾರೆ. ಇದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನುಹೆಚ್ಚಿಸುತ್ತೆ.
- ವಾಸ್ತು ಶಾಸ್ತçದ ಪ್ರಕಾರ ಎರಡು ಮುಖದ ನವಿಲಿನ ಪೇಯಿಂಟಿAಗ್ ಮನೆಯಲ್ಲಿದ್ದರೆ ಬಹಳ ಒಳ್ಳೆಯದು. ಅದು ಯಶಸ್ಸು, ಶಾಂತಿ, ಉನ್ನತಿ ಹೊಂದಲು ಉತ್ತೇಜನ ನೀಡುತ್ತದೆ.
- ವಾಸ್ತು ಶಾಸ್ತçದಲ್ಲಿ ನವಿಲಿಗೆ ಹಾಗೂ ನವಿಲು ಗರಿಗೆ ಅದರದೇ ಆದ ಮಹತ್ವ ನೀಡಲಾಗಿದೆ. ನವಿಲುಗರಿ ಮನೆಯಲ್ಲಿ ಇಟ್ಟುಕೊಳ್ಳುವವರೂ ಇದ್ದಾರೆ. ಅದಿದ್ದರೆ ಹಲ್ಲಿ ಸೇರಿದಂತೆ ಹಲವು ಕ್ರಿಮಿ ಕೀಟಗಳು ಬರುವುದಿಲ್ಲ.
- ನವಿಲು ಅದರ ಸೌಂದರ್ಯದಿAದಲೇ ಎಲ್ಲರನ್ನು ತನ್ನತ್ತ ಆಕರ್ಷಿಸುತ್ತದೆ. ಹಾಗಾಗಿ ಡಾನ್ಸ್ ಮಾಡುತ್ತಿರುವ ನವಿಲಿನ ಫೋಟೊವನ್ನು ರೂಮ್ನ ಎದುರು ಇಟ್ಟುಕೊಂಡಲ್ಲಿ ಲಾವಣ್ಯಭರಿತರಾಗಿ, ಅಂದವಾಗಿ, ತೇಜಸ್ಸಿನಿಂದ ಕೂಡಿರಲು ಸಹಕಾರಿಯಾಗಿದೆ.
- ನವಿಲು ಗರಿಯನ್ನು ಮಕ್ಕಳಿಗೆ ದೃಷ್ಟಿ ತೆಗೆಯಲು, ಕೆಲ ದೋಷಗಳನ್ನುಹೋಗಲಾಡಿಸಲು ಬಳಸಲಾಗುತ್ತದೆ.
- ವಾಸ್ತು ಪ್ರಕಾರ ನವಿಲು ಗರಿ ಮನೆಯಲ್ಲಿ ಎಲ್ಲೆಂದರಲ್ಲಿ ಇಡುವ ಹಾಗಿಲ್ಲ. ಅದನ್ನು ಕೆಲ ಪ್ರಮುಖ ಕಾರಣಕ್ಕೆ ಬಳಸುವುದರಿಂದ ಧೂಳು ಹಿಡಿಯದ ಹಾಗೆ ಜೋಪಾನವಾಗಿನೋಡಿಕೊಳ್ಳಬೇಕು.
- ಆರೋಗ್ಯದ ಮೇಲು ನವಿಲು ಗರಿಪರಿಣಾಮಬೀರುತ್ತದೆ. ಹಿಂದೆಲ್ಲ ದೇಹದಲ್ಲಿ ಸೇರಿದ್ದ ವಿಷವನ್ನು ಹೊರಹಾಕಲು ಈ ಗರಿಯನ್ನು ಬಳಸುತ್ತಿದ್ದರು.
- ನಿಮ್ಮ ಬೆಡ್ರೂಮ್ನಲ್ಲಿ