ಪ್ರಸ್ತುತದ ಹವಮಾನ ವೈಪರೀತ್ಯದಿಂದಾಗಿ ಶೀತ, ಕೆಮ್ಮು, ನಗಡಿ ಸಾಮಾನ್ಯ. ಹೀಗಾಗಿ ಈ ಮನೆ ಮದ್ದು ಸೇವಿಸಿದ್ರೆ ಶೀತ-ಕೆಮ್ಮು ನಿಮ್ಮ ಹತ್ತಿರಕ್ಕೂ ಸುಳಿಯಲ್ಲ.
ಈರುಳ್ಳಿ ಕೇವಲ ಅಡುಗೆಯ ರುಚಿ ಹೆಚ್ಚಿಸೋದು ಮಾತ್ರವಲ್ಲದೇ ಇದು ಶೀತ, ಜ್ವರದಂತ ಕಾಯಿಲೆಗೆ ರಾಮಬಾಣ ಕೂಡ ಹೌದು. ಅದೇ ರೀತಿ ಜೇನುತುಪ್ಪ ಕೂಡ ಶೀತ ಹಾಗೂ ಕೆಮ್ಮಿನ ವಿರುದ್ಧ ಪರಿಣಾಮಕಾರಿ ಔಷಧಿ ಈ ಎರಡು ಪದಾರ್ಥಗಳು ಒಂದಾದ್ವು ಅಂದರೆ ಅಲ್ಲಿಂದ ಶೀತ ಹಾಗೂ ಕೆಮ್ಮು ಓಡಿ ಹೋಯ್ತು ಅಂತಾನೇ ಅರ್ಥ.
ಮೂರು ದೊಡ್ಡ ಚಮಚ ಈರುಳ್ಳಿ ರಸಕ್ಕೆ ಎರಡು ಚಮಚ ಜೇನುತುಪ್ಪ ಸೇರಿಸಿ. ಇದಕ್ಕೆ ಸ್ವಲ್ಪ ಸೋಂಪಿನ ರಸವನ್ನ ಸೇರಿಸಿ ನಿತ್ಯ ಬೆಳಗ್ಗೆ ಸೇವನೆ ಮಾಡೋದ್ರಿಂದ ಶೀತ ನಿಮ್ಮ ಹತ್ತಿರಕ್ಕೂ ಸುಳಿಯೋದಿಲ್ಲ.