ಸೆಕ್ಸ್ ದಾಂಪತ್ಯ ಜೀವನದಲ್ಲಿ ತುಂಬಾ ಮುಖ್ಯ. ಸಂಗಾತಿಯೊಂದಿಗೆ ಆರೋಗ್ಯಕರ ಬಂಧವನ್ನು ಬೆಳೆಸುವುದು ಮುಖ್ಯ. ಇದು ಸಂಬಂಧವನ್ನು ಬಲಪಡಿಸುತ್ತದೆ ಮತ್ತು ಸಂಗಾತಿಯೊಂದಿಗಿನ ಜೀವನದ ಪ್ರಯಾಣವನ್ನು ಸುಲಭಗೊಳಿಸುತ್ತದೆ. ಸಂಗಾತಿಯೊಂದಿಗೆ ಆತ್ಮೀಯ ದೈಹಿಕ ಸಂಬಂಧ ಹೊಂದುವುದು ಕೂಡ ಸಂಬಂಧದ ಪ್ರಮುಖ ಭಾಗವಾಗಿದೆ.
ಲೈಂಗಿಕ ಕ್ರಿಯೆ ಸಂದರ್ಭದಲ್ಲಿ ಪುರುಷರಿಗೆ ಯಾವುದಾದರೂ ಲೈಂಗಿಕ ಸಮಸ್ಯೆಗಳು ಇದ್ದರೆ ಅದರಿಂದ ಇಬ್ಬರಿಗೂ ತೊಂದರೆಯಾಗುತ್ತದೆ ಮತ್ತು ಅಷ್ಟೇ ಬೇಸರವಾಗುತ್ತದೆ. ಆದರೆ ಈ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಲು ನಮ್ಮೆಲ್ಲರ ಅಡುಗೆಮನೆಯಲ್ಲಿ ಒಳ್ಳೆಯ ಪರಿಹಾರವಿದೆ. ಅದೇನೆಂದರೆ ನಾವು ಅಡುಗೆಯಲ್ಲಿ ಬಳಕೆ ಮಾಡುವ ಕೆಲವೊಂದು ಬೀಜಗಳು ಅಥವಾ ಕಾಳುಗಳು. ಬನ್ನಿ ಈ ಲೇಖನದಲ್ಲಿ ಇವುಗಳ ಬಗ್ಗೆ ತಿಳಿದುಕೊಳ್ಳೋಣ.
ಕುಂಬಳಕಾಯಿ ಬೀಜಗಳು
ಕುಂಬಳಕಾಯಿ ಬೀಜಗಳಲ್ಲಿ ಜಿಂಕ್ ಅಂಶದ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಇದು ನಿಮ್ಮ ಆರೋಗ್ಯಕರವಾದ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚು ಮಾಡಬಲ್ಲದು.ಪುರುಷರು ಕುಂಬಳಕಾಯಿ ಬೀಜಗಳನ್ನು ಸೇವನೆ ಮಾಡುವುದರಿಂದ ಅವರ ವೀರ್ಯದ ಗುಣಮಟ್ಟ ಹೆಚ್ಚಾಗುತ್ತದೆ ಎಂದು ತಿಳಿದುಬಂದಿದೆ.ಇದರ ಜೊತೆಗೆ ಪ್ರೋಸ್ಟೇಟ್ ಕ್ಯಾನ್ಸರ್ ಸಮಸ್ಯೆ ಇರುವುದಿಲ್ಲ. ಜೊತೆಗೆ ಇದರಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಅಂಶಗಳು ಪ್ರಮಾಣ ಹೆಚ್ಚಾಗಿರುವುದರಿಂದ, ಪುರುಷರಿಗೆ ಲೈಂಗಿಕ ಆಸಕ್ತಿ ಕೂಡ ಹೆಚ್ಚಾಗಲು ನೆರವಾಗುತ್ತದೆ.
ಎಳ್ಳಿನ ಬೀಜಗಳು
ಎಳ್ಳಿನಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳ ಪ್ರಮಾಣ ತುಂಬಾ ಇದೆ. ಇದರ ಕಾರಣದಿಂದ ಫ್ರೀ ರಾಡಿಕಲ್ ಅಂಶಗಳು ವೀರ್ಯಾಣುಗಳ ಗುಣಮಟ್ಟದ ಮೇಲೆ ಹಾನಿ ಮಾಡುವ ಪ್ರಭಾವ ತಪ್ಪುತ್ತದೆ.ಹೀಗಾಗಿ ವೀರ್ಯಾಣುಗಳ ಸಂತೋಷದಲ್ಲಿ ಯಾವುದೇ ಕಡಿಮೆ ಪ್ರಮಾಣ ಇರುವುದಿಲ್ಲ. ಆರೋಗ್ಯಕರವಾಗಿ ವೀರ್ಯಾಣುಗಳ ಚಲನೆ ಇರಲಿದ್ದು, ಪುರುಷರ ನಪುಂಸಕತ್ವ ದೂರವಾಗಲು ಅನುಕೂಲವಾಗುತ್ತದೆ.
ಓಂ ಕಾಳುಗಳು
ಓಂ ಕಾಳುಗಳಲ್ಲಿ ಕೇವಲ ದೇಹದ ತಾಪಮಾನವನ್ನು ಮಾತ್ರವಲ್ಲ, ಪುರುಷರ ಲೈಂಗಿಕ ಆರೋಗ್ಯವನ್ನು ಕೂಡ ಕಾಪಾಡುವ ಗುಣವಿದೆ.ಪುರುಷರಿಗೆ ಉಂಟಾಗುವ ಶೀಘ್ರಸ್ಕಲನ ಸಮಸ್ಯೆಗೆ ಪರಿಹಾರ ನೀಡಿ ದೀರ್ಘಕಾಲದವರೆಗೆ ಲೈಂಗಿಕ ತೃಪ್ತಿಯನ್ನು ಹೊಂದುವಂತೆ ಮಾಡುತ್ತದೆ.
ಜೀರಿಗೆ ಕಾಳುಗಳು
ಜೀರಿಗೆ ಕಾಳುಗಳಲ್ಲಿ ಲೈಂಗಿಕ ಆಸಕ್ತಿಯನ್ನು ಹೆಚ್ಚು ಮಾಡುವ ಖನಿಜಾಂಶಗಳು ಸಾಕಷ್ಟು ಕಂಡುಬರುತ್ತವೆ. ಅದರಲ್ಲಿಯೂ ಇದರಲ್ಲಿ ಪೊಟ್ಯಾಷಿಯಂ ಅಂಶ ಹೆಚ್ಚಾಗಿ ಸಿಗುವುದರಿಂದ ಪುರುಷರು ತಮ್ಮ ಸಂಗಾತಿಯ ಬಳಿ ದೀರ್ಘಕಾಲದವರೆಗೆ ತಮ್ಮ ಲೈಂಗಿಕ ತೃಪ್ತಿಯನ್ನು ಅನುಭವಿಸಲು ಅನುಕೂಲವಾಗುತ್ತದೆ.
ಇದರಲ್ಲಿರುವ ಜಿಂಕ್ ಅಂಶ ವೀರ್ಯಾಣುಗಳ ಉತ್ಪತ್ತಿಯಲ್ಲಿ ನೆರವಾದರೆ, ಪೊಟ್ಯಾಷಿಯಂ ಅಂಶ ಆರೋಗ್ಯಕರವಾದ ಹೃದಯ ಬಡಿತ ಮತ್ತು ರಕ್ತದ ಒತ್ತಡದಲ್ಲಿ ನೆರವಾಗುತ್ತದೆ. ಸಾಕಷ್ಟು ಪುರುಷರಲ್ಲಿ ಕಂಡುಬರುವ ಲೈಂಗಿಕ ಸಾಮರ್ಥ್ಯದ ಸಮಸ್ಯೆಯನ್ನು ಜೀರಿಗೆ ಕಾಳುಗಳು ಸುಲಭವಾಗಿ ಬಗೆಹರಿಸುತ್ತವೆ. ವೀರ್ಯಾಣುಗಳ ಗುಣಮಟ್ಟ ಮತ್ತು ಸಂತತಿಯನ್ನು ಹೆಚ್ಚು ಮಾಡುವಲ್ಲಿ ಜೀರಿಗೆ ಕಾಳುಗಳ ಪಾತ್ರ ಬಹಳ ದೊಡ್ಡದು