ಅಬುಧಾಬಿಯಲ್ಲಿ ನಡೆಯುತ್ತಿರುವ ಐಫಾ ಅವಾರ್ಡ್ಸ್ 2024ಕ್ಕೆ ಇಂದು ತೆರೆ ಬೀಳಲಿದೆ. ಸೆಪ್ಟೆಂಬರ್ 27ರಿಂದ ಪ್ರಾರಂಭವಾಗಿರುವ ಐಫಾ ಅವಾರ್ಡ್ಸ್ 29ರ ವರೆಗೆ ನಡೆಯಲಿದೆ. ಭಾರತದ ಐದು ಪ್ರಮುಖ ಚಿತ್ರರಂಗಳ ಗಣ್ಯರು ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದ ಅತ್ಯುತ್ತಮ ಸಿನಿಮಾ, ತಂತ್ರಜ್ಞರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಆದರೆ ಕನ್ನಡದ ಎರಡೇ ಎರಡು ಸಿನಿಮಾಗಳಿಗೆ ಮಾತ್ರವೇ ಐಫಾ ಪ್ರಶಸ್ತಿ ನೀಡಲಾಗಿದೆ.
ಎಲ್ಲ ವಿಭಾಗದ ಪ್ರಶಸ್ತಿಯನ್ನೂ ಕನ್ನಡದ ಕೇವಲ ಎರಡೇ ಸಿನಿಮಾಗಳಿಗೆ ಕೊಟ್ಟು ಐಫಾ ಕೈತೊಳೆದುಕೊಂಡಿದೆಯಾ ಎಂಬ ಅನುಮಾನ ಶುರುವಾಗಿದೆ. ಯಾಕೆಂದರೆ 2023 ರಲ್ಲಿ ಕನ್ನಡದಲ್ಲಿ ಸಾಕಷ್ಟ ಸಿನಿಮಾಗಳು ಬಿಡುಗಡೆ ಆಗಿದ್ದು ಹಿಟ್ ಆಗಿವೆ. ಆದ್ರೆ ಅದ್ಯಾವುದಕ್ಕೂ ಪರಿಗಣನೆಗೆ ತೆಗೆದುಕೊಳ್ಳದ ಐಫಾ ಕಾಟೇರಾ ಹಾಗೂ ಸಪ್ತ ಸಾಗರದಾಚೆ ಸಿನಿಮಾವನ್ನು ಮಾತ್ರ ಪರಿಗಣಿಸಿದೆಯಾ.
ಇಲ್ಲಿದೆ ನೋಡಿ ಐಫಾ ನೀಡಿರುವ ಪ್ರಶಸ್ತಿಗಳ ಪಟ್ಟಿ
ಅತ್ಯುತ್ತಮ ಸಿನಿಮಾ: ಕಾಟೇರ
ಅತ್ಯುತ್ತಮ ನಟ: ರಕ್ಷಿತ್ ಶೆಟ್ಟಿ (ಸಪ್ತ ಸಾಗರದಾಚೆ ಎಲ್ಲೊ)
ಅತ್ಯುತ್ತಮ ನಟಿ: ರುಕ್ಮಿಣಿ ವಸಂತ್ (ಸಪ್ತ ಸಾಗರದಾಚೆ ಎಲ್ಲೊ)
ಅತ್ಯುತ್ತಮ ನಿರ್ದೇಶಕ: ತರುಣ್ ಸುಧೀರ್ (ಕಾಟೇರ)
ಅತ್ಯುತ್ತಮ ಪೋಷಕ ನಟಿ: ಶ್ರುತಿ (ಕಾಟೇರ)
ಅತ್ಯುತ್ತಮ ಪೋಷಕ ನಟ: ಗೋಪಾಲ ಕೃಷ್ಣ ದೇಶಪಾಂಡೆ (ಸಪ್ತ ಸಾಗರದಾಚೆ ಎಲ್ಲೊ)
ಅತ್ಯುತ್ತಮ ವಿಲನ್: ಜಗಪತಿ ಬಾಬು (ಕಾಟೇರ)
ಅತ್ಯುತ್ತಮ ಸಂಗೀತ: ವಿ ಹರಿಕೃಷ್ಣ (ಕಾಟೇರ)
ಅತ್ಯುತ್ತಮ ಸಾಹಿತ್ಯ: ಧನಂಜಯ ರಂಜನ್ (ಸಪ್ತ ಸಾಗರದಾಚೆ ಎಲ್ಲೊ)
ಅತ್ಯುತ್ತಮ ಗಾಯಕ: ಎಂಸಿ ಬಿಜ್ಜು (ಸಪ್ತ ಸಾಗರದಾಚೆ ಎಲ್ಲೊ-ನದಿಯೇ)
ಅತ್ಯುತ್ತಮ ಗಾಯಕಿ: ಶ್ರೀಲಕ್ಷ್ಮಿ ಬೆಳ್ಮಣ್ಣು (ಸಪ್ತ ಸಾಗರದಾಚೆ ಎಲ್ಲೊ)