ಬೆಂಗಳೂರು:- ಖಾಸಗಿ ಕಂಪನಿಗಳಲ್ಲಿ ಕನ್ನಡಿಗರ ಉದ್ಯೋಗ ಮೀಸಲಾತಿ ಪರ ಜ್ಞಾನ ಭಾರತಿ ವಿಶ್ವವಿದ್ಯಾಲಯ ಬ್ಯಾಟ್ ಬೀಸಿದೆ.
ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಜಾಬ್ ಸಿಗ್ತೀಲ್ಲವಂತೆ.
ರಾಜಧಾನಿಯಲ್ಲಿ ಇಂಗ್ಲೀಷ್ ಕಲಿಕೆ ಇಲ್ಲದ ವಿದ್ಯಾರ್ಥಿಗಳಿಗೆ ಕೆಲಸವೇ ಇಲ್ಲದಾಗಿದೆ. ಹೀಗಾಗಿ ಬೆಂಗಳೂರು ವಿಶ್ವವಿದ್ಯಾಲಯ ಉಚಿತವಾಗಿ ಲ್ಯಾಂಗ್ವೇಜ್ ಲ್ಯಾಬ್ ಶುರು ಮಾಡಿ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಭಾಷಾ ಶಾಸ್ತ್ರ ಹೇಳಿಕೊಡುವ ಸ್ಥಿತಿಗೆ ಬಂದಾಗಿದೆ. ವಿವಿಯ ಲಕ್ಷಾಂತರ ಗ್ರಾಮೀಣ ಭಾಗದ ಕನ್ನಡ ಮಾದ್ಯಮ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಭಾಷ ಜ್ಞಾನದ ಕೊರತೆಯಿಂದ ಕೆಲಸ ಸಿಗುತ್ತಿಲ್ಲ. ಹೀಗಾಗಿ ಲ್ಯಾಬ್ ಶುರು ಮಾಡಿದ್ದು ಇಂಗ್ಲೀಷ್ ಭಾಷಾಶಾಸ್ತ್ರ ಹೇಳಿ ಕೋಡಲಾಗ್ತೀದೆ. ಹೀಗಾಗಿ ಸರ್ಕಾರ ಕನ್ನಡದ ವಿದ್ಯಾರ್ಥಿಗಳಿಗೆ ಐಟಿ ಸೇರಿದಂತೆ ಖಾಸಗಿ ಕಂಪನಿಗಳಲ್ಲಿ ಔದ್ಯೋಗಿಕ ಮೀಸಲಾತಿ ತಂದ್ರೆ ಬೆಂಗಳೂರು ವಿವಿ ವಿದ್ಯಾರ್ಥಿಗಳ ಜೊತೆ ಎಲ್ಲ ಕನ್ನಡ ಅಭ್ಯಾಸಮಾಡುವ ವಿದ್ಯಾರ್ಥಿಗಳಿಗೂ ಸುಲಭವಾಗಿ ಕೆಲಸ ಸಿಗುತ್ತೆ ಎಂದು ಬೆಂಗಳೂರು ವಿವಿ ಕುಲಪತಿಗಳಾದ ಜಯಕರ್ ಶೆಟ್ಟಿ ತಿಳಿಸಿದ್ದಾರೆ.
ಇನ್ನು ಒಳ್ಳೆ ಮಾರ್ಕ್ಸ್ ಇದೆ ಟ್ಯಾಲೆಂಟ್ ಜೊತೆಗೆ ಪದವಿಯೂ ಇದೆ ಆದ್ರೆ ಇಂಗ್ಲೀಷ್ ಕಮ್ಯೂನಿಕೇಶನ್ ಸ್ಕಿಲ್ ಬರ್ತಿಲ್ಲ. ಹೀಗಾಗಿ ಕೆಲಸವೂ ಇಲ್ಲದಾಗಿದೆ ಎಂದು ರಾಜಧಾನಿಯಲ್ಲಿ ಓದುತ್ತಿರುವ ಬಹುತೇಕ ವಿದ್ಯಾರ್ಥಿಗಳು ತಿಳಿಸಿದ್ದಾರೆ. ಐಟಿ ಬಿಟಿ ಸೇರಿದ್ದಂತೆ ನಾನಾ ಕಂಪನಿಗಳಲ್ಲಿ ಸಾಕಷ್ಟು ಅವಕಾಶಗಳಿದ್ರೂ ಉತ್ತರಭಾರತದವರಿಗೆ ಸಿಕ್ಕಷ್ಟು ಅವಕಾಶಗಳು ಬೆಂಗಳೂರಿನ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ. ಹೀಗಾಗಿ ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯ ಅನಿವಾರ್ಯವಾಗಿ ಇಂಗ್ಲೀಷ್ ಲ್ಯಾಂಗ್ವೇಜ್ ಲ್ಯಾಬ್ ಶುರುಮಾಡಿದ್ದು ಇಂಗ್ಲೀಷ್ ಹೇಳಿ ಕೊಡುತ್ತಿದೆ.
ವರದಿಗಾರರು ರಂಗನಾಥ್ ಭಂಡಾರಿ H…..