ಬಾಲಿವುಡ್ ಸ್ಟಾರ್ ನಟಿ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಮಧ್ಯೆ ಎಲ್ಲವು ಸರಿ ಇಲ್ಲ. ಇಬ್ಬರು ಡಿವೋರ್ಸ್ ಪಡೆದುಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಕಳೆದ ಕೆಲ ತಿಂಗಳುಗಳಿದ್ದು ಸದ್ದು ಮಾಡುತ್ತಲೆ ಇದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿರಲಿಲ್ಲ. ಇದೀಗ ಇದೇ ಮೊದಲ ಭಾರಿಗೆ ನಟ ಅಭಿಷೇಕ್ ಬಚ್ಚನ್ ಗಾಳಿ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ. ‘ನಾನಿನ್ನೂ ವಿವಾಹಿತ’ ಎಂದು ಹೇಳುವ ಮೂಲಕ ಡಿವೋರ್ಸ್ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ.
ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ಇತ್ತೀಚೆಗೆ ಒಟ್ಟಾಗಿ ಕಾಣಿಸಿಕೊಂಡಿಲ್ಲ. ಅನಂತ್ ಅಂಬಾನಿ ಮದುವೆಗೂ ಇವರು ಪ್ರತ್ಯೇಕವಾಗಿ ಬಂದಿದ್ದು ಚರ್ಚೆ ಹುಟ್ಟುಹಾಕಿತು. ಆ ಬಳಿಕ ಡಿವೋರ್ಸ್ಗೆ ಸಂಬಂಧಿಸಿದ ಪೋಸ್ಟ್ ಲೈಕ್ ಮಾಡಿ ಅವರು ಸುದ್ದಿ ಆದರು. ಅಭಿಷೇಕ್ ಬಚ್ಚನ್ ಅವರು ಮಾಧ್ಯಮಗಳ ಕೈಗೆ ಸಿಗುತ್ತಿಲ್ಲ. ಪ್ರೆಸ್ಮೀಟ್ಗಳಲ್ಲಿ ಭಾಗಿ ಆಗುತ್ತಿಲ್ಲ. ಹೀಗಿರುವಾಗಲೇ ಅವರು ವಿದೇಶಿ ಮಾಧ್ಯಮ ಒಂದಕ್ಕೆ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
‘ವದಂತಿಗಳ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ನೀವೆಲ್ಲರೂ ಬೇರೆ ರೀತಿಯಲ್ಲೇ ಸುದ್ದಿ ಪ್ರಕಟಿಸಿದ್ದೀರಿ. ನೀವು ಏನ್ನಾದರೂ ಒಂದು ಸುದ್ದಿ ಪ್ರಕಟಿಸಬೇಕು. ಅದು ನನಗೆ ಅರ್ಥವಾಗುತ್ತದೆ. ನಾವು ಸೆಲೆಬ್ರಿಟಿಗಳು ಅದನ್ನು ತೆಗೆದುಕೊಳ್ಳಬೇಕು’ ಎಂದು ಅಭಿಷೇಕ್ ಹೇಳಿರೋದಾಗಿ ವರದಿ ಆಗಿದೆ. ‘ನಾನಿನ್ನೂ ವಿವಾಹಿತ’ ಎಂದು ಅಭಿಷೇಕ್ ಹೇಳಿದ್ದಾರೆ.
ಅಭಿಷೇಕ್ ಹಾಗೂ ಐಶ್ವರ್ಯಾ ಸಂಬಂಧಕ್ಕೆ 17 ವರ್ಷ. ಈ ದಂಪತಿಗೆ ಆರಾಧ್ಯಾ ಹೆಸರಿನ ಮಗಳು ಇದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಈ ದಂಪತಿ ಒಟ್ಟಾಗಿ ಫೋಟೋ ಶೇರ್ ಮಾಡಿಕೊಳ್ಳೋದು ಕಡಿಮೆ ಆಗಿದೆ. ಜನ್ಮದಿನ ಹಾಗೂ ವಿವಾಹ ವಾರ್ಷಿಕೋತ್ಸವ ಸಂದರ್ಭಗಳಲ್ಲಿ ಮಾತ್ರ ಇವರು ಫೋಟೋ ಅಪ್ಲೋಡ್ ಮಾಡುತ್ತಿರುತ್ತಾರೆ. ಅಲ್ಲದೆ ಐಶ್ವರ್ಯಾ ಎಲ್ಲೆ ಹೋದರು ಮಗಳ ಜೊತೆ ಮಾತ್ರವೇ ಹೋಗುತ್ತಾರೆ. ಅಲ್ಲದೆ ಇತ್ತೀಚೆಗೆ ಅಂಬಾನಿ ಕುಟುಂಬದ ಮದುವೆಗೆ ಆಗಮಿಸಿದ್ದ ಐಶ್ವರ್ಯಾ ಬಚ್ಚನ್ ಕುಟುಂಬದಿಂದ ಅಂತರ ಕಾಯ್ದುಕೊಂಡಿದ್ದರು. ಇದು ಡಿವೋರ್ಸ್ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿತ್ತು. ಇದೀಗ ಅಭಿಷೇಕ್ ಹೇಳಿಕೆಯಿಂದ ಐಶ್ ಅಭಿಮಾನಿಗಳು ಕೊಂಚ ನಿರಾಳರಾಗಿದ್ದಾರೆ.