ಬೆಂಗಳೂರು: ಅನಾಥಶ್ರಮದಲ್ಲಿ ಬೆಳೆದವಳ ಮೆಚ್ಚಿ ಮದುವೆಯಾಗಿದ್ದ.ಸುಖವಾಗಿ ಸಂಸಾರ ನಡೆಸಲು ಶುರುಮಾಡಿದ್ದ ಇಬ್ಬರು ಬಡತನದ ನಡುವೆ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಇರೊದ್ರಲ್ಲಿ ಖುಷಿಕಂಡ ಬದುಕು ಕಟ್ಟಿಕೊಂಡಿದ್ರು.. ಮದುವೆಯಾಗಿ 12 ವರ್ಷ ಇಬ್ಬರು ಮಕ್ಕಳ ದ ಮೇಲೆ ಪತಿಗೆ ಪತ್ನಿ ನಡತೇ ಮೇಲೆ ಅನುಮಾನ ಮೂಡಿದ ಅನೈತಿಕ ಸಂಬಂಧದ ಭೂತ ಹೊಕ್ಕಿತ್ತು.ಆ ಸಂಶಯಕ್ಕೆ ಪುಷ್ಟಿ ಕೊಡುವಂತೆ ಆಕೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ಲು.ಕೋಪದ ಕೈಗೆ ಬುದ್ದಿ ಕೊಟ್ಟ ಗಂಡ ಮಾಡಿದ್ದಾದ್ರೂ ಏನು ಅನ್ನೋದನ್ನ ತೋರಿಸ್ತಿವಿ ನೋಡಿ..
ಈಕೆ ನಾಗರತ್ನ ಹಾಗೂ ಈತ ಅಯ್ಯಪ್ಪ.. ಮೂಲತಃ ಮೈಸೂರು ಮೂಲದ ಈ ಜೊಡಿ ಹಲವು ವರ್ಷಗಳಿಂದ ಬೆಂಗಳೂರಿನ ಬಸವೇಶ್ವರನಗರದ ಮಂಜುನಾಥ ನಗರದ ಮನೆಯೊಂದಕ್ಕೆ ಬಾಡಿಗೆಗೆ ಬಂದ ದಂಪತಿ ನಡುವೆ ಜಗಳ ನಡೆಯುತಿತ್ತು.. ಏರಿಯಾದ ಜನ ಇವರದ್ದು ಮಾಮೂಲಿ ಅನ್ನೊ ಮಟ್ಟಿಗೆ ಕಿತ್ತಾಡುತಿದ್ರು.. ಆದ್ರೆ ಮೊನ್ನೆ ನಡೆದ ಆ ಜಗಳ ಇಡಿ ಏರಿಯಾವನ್ನೇ ಈಗ ಬೆಚ್ಚಿ ಬೀಳಿಸಿದೆ.. ಕಾರಣ ಪತಿಯ ಕೋಪಕ್ಕೆ ಸಿಕ್ಕಿಬಿದ್ದ ನಾಗರತ್ನ ಬರ್ಬರವಾಗಿ ಹತ್ಯೆಯಾಗಿದ್ದಾಳೆ.
ಹೌದು, ಹೀಗೆ 12 ವರ್ಷಗಳ ಹಿಂದೆ ಮೈಸೂರಿನ ಆಶ್ರಮದಲ್ಲಿದ್ದ ನಾಗರತ್ನಳನ್ನು ಅಯ್ಯಪ್ಪ ಮದುವೆ ಮಾಡಿಕೊಂಡು ಕರೆತಂದಿದ್ದ.. ವೃತ್ತಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಅಯ್ಯಪ್ಪ ಸಂಜೆ ಮನೆಯಿಂದ ಹೊರಟರೇ ಮತ್ತೇ ಬರುತಿದದ್ದು ಮರುದಿನ ಬೆಳಿಗ್ಗೆ.. ಇತ್ತ ನಾಗರತ್ನ ಬಟ್ಟೆ ಅಂಗಡಿಗೆ ಕೆಲಸಕ್ಕೆ ಹೊಗುತಿದ್ದಳು.. ಮದುವೆಯಾದಾಗ ಸುಖ ಸಂಸಾರ ಮಾಡಿದ ಜೊಡಿ ಎರಡು ಮಕ್ಕಳಾದ ಬಳಿಕ ಜಗಳವಾಡಲು ಶುರು ಮಾಡಿದ್ರು.. ಕಾರಣ ಪತ್ನಿ ಮತ್ತೊಬ್ಬರ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಅನ್ನೊ ವಿಚಾರ.. ಆದ್ರೆ ಇದೇ ವಿಚಾರಕ್ಕೆ ಪುಷ್ಟಿ ಕೊಟ್ಟಿದ್ದು ಶನಿವಾರ ನಡೆದ ಆ ಒಂದು ಘಟನೆ.. ಕೆಲಸಕ್ಕೆ ಅಂತ ಶನಿವಾರ ಸಂಜೆ ಹೊರಟ ಅಯ್ಯಪ್ಪ ರಾತ್ರಿಯೇ ಮನೆಗೆ ವಾಪಾಸ್ ಆಗಿದ್ದ.. ಆದ್ರೆ ಈ ವೇಳೆ ನಾಗರತ್ನ ಅಕ್ಕನ ಮಗ ಆತನ ಮನೆಯಲ್ಲಿ ಮಲಗಿರೋದು ಕಂಡು ಕೋಪಗೊಂಡಿದ್ದ.. ಬಳಿಕ ಪತ್ನಿ ಜೊತೆ ಜಗಳ ಆಡಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆ..
ಯಾವಾಗ ಪತ್ನಿ ಜೊತೆ ಆಕೆಯ ಅಕ್ಕನ ಮಗ ಚಂದ್ರಶೇಖರ್ ಇರೊದು ಕಂಡವನೇ ಗಲಾಟೆ ಮಾಡಿದ್ದಾನೆ.. ಆ ಬಳಿಕ ಪತ್ನಿಯ ತಲೆಗೆ ಹಲ್ಲೆ ಮಾಡಿ ಆಕೆಯ ಗುಪ್ತಾಂಗಕ್ಕೆ ಚಾಕುವಿನಿಂದ ಚುಚ್ಚು ಕೊಲೆ ಮಾಡಿದ್ದಾನೆ.. ಬಳಿಕ ತಾನೇ ಸಂಬಂಧಿಕರಿಗೆ ಕರೆ ಮಾಡಿ ನಾಗರತ್ನಗೆ ಹಲ್ಲೆ ಮಾಡಿರೊದಾಗಿ ಹೇಳಿ ಕರೆಸಿಕೊಂಡಿದ್ದಾನೆ.. ಆದ್ರೆ ಈ ನಡುವೆ ನಾಗರತ್ನ ಜೊತೆಗಿದ್ದ ಆಕೆಯ ಅಕ್ಕನ ಮಗ ಚಂದ್ರಶೇಖರ್ ನಾಪತ್ತೆಯಾಗಿದ್ದು, ಆತನ ಕುಟುಂಬ ಆತಂಕದಲ್ಲಿದೆ.. ಪತ್ನಿಯನ್ನೇ ಕೊಲೆ ಮಾಡಿದ ಆತ ಆಕೆಯ ಜೊತೆಗಿದ್ದ ಮಗನ ಏನು ಮಾಡಿದ್ದಾನೋ ಅಂತ ಆತಂಕ ವ್ಯಕ್ತಪಡಿಸಿದ್ದಾರೆ..
ಆದ್ರೂ ಇಲ್ಲಿ ಆರೋಪಿ ಅಯ್ಯಪ್ಪ ಹೇಳ್ತಿರೋದು ಸತ್ಯನಾ ಅಂತ ನೋಡ್ಬೇಕಾಗುತ್ತೆ..ಯಾಕಂದ್ರೆ ಚಿಕ್ಕಮ್ಮನ ಜೊತೆಯಲ್ಲೆ ಮಗನ ಅಕ್ರಮ ಸಂಭಂದ ಅನ್ನೋದು ಭಾವನೆಗಳ ಮೇಲೆ ಧಕ್ಕೆ ತರುವಂತಿದೆ..