ಹುಬ್ಬಳ್ಳಿ: ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಅನೇಕ ಮಹತ್ತರ ಕೊಡುಗೆಗಳನ್ನು ಕೊಡುವ ಮೂಲಕ ಸಾಕಷ್ಟು ಯೋಜನೆಗಳು ಅನುಷ್ಠಾನಗೊಂಡಿವೆ. ಬಹುತೇಕ ಯೋಜನೆಗಳು ತಾರ್ಕಿಕ ಅಂತ್ಯ ಕಂಡರೆ ಕೇಲವು ಇನ್ನು ಅಂಬೆಗಾಲು ಇಡುತ್ತಾ ಸಾಗಿವೆ. ಇದರಲ್ಲಿ ಧಾರವಾಡ- ಬೆಳಗಾವಿ ನೇರ ರೈಲು ಮಾರ್ಗದ ಅನುಷ್ಠಾನ ಸಹ ಒಂದು.
ಈಗಾಗಲೇ ಸಾಕಷ್ಟು ವಿಳಂಬವಾಗಿದ್ದು ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಬೆಳಗಾವಿ ಜಿಲ್ಲೆಯ ಕಿತ್ತೂರು ಮಾರ್ಗವಾಗಿ ತೆರಳುವ ಈ ರೈಲು ಮಾರ್ಗದ ಜಾರಿಗಾಗಿ ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಭೂಮಿ ವಶಪಡಿಸಿಕೊಳ್ಳುವ ಕಾರ್ಯ ಇದುವರೆಗೂ ಆರಂಭಗೊಂಡಿಲ್ಲ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ರೈಲು ಮಾರ್ಗ ಅಳವಡಿಕೆಗೆ ಬೇಕಾದ ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಯ ಭೂಮಿಯನ್ನು ಕಳೆದ ಮಾರ್ಚ್ನಲ್ಲಿಯೇ ರೈಲ್ವೆ ಇಲಾಖೆಗೆ ಹಸ್ತಾಂತರಿಸಬೇಕಿತ್ತು.
ಭೂಮಿ ಹಸ್ತಾಂತರಗೊಂಡ ನಂತರ ರೈಲ್ವೆ ಇಲಾಖೆ ಟೆಂಡರ್ ಕರೆಯುವ ಕಾರ್ಯ ಮಾಡಬೇಕಿತ್ತು. ಆದರೆ, ಕೆಐಎಡಿಬಿ (ಕರ್ನಾಟಕ ಇಂಡಸ್ಟ್ರಿಯಲ್ ಏರಿಯಾ ಡೆವಲಪ್ ಮೆಂಟ್ ಬೋರ್ಡ್) ಇನ್ನೂ ರೈತರಿಂದ ಭೂಮಿ ವಶಪಡಿಸಿಕೊಳ್ಳುವ ಕಾರ್ಯವನ್ನೇ ಮಾಡಿಲ್ಲ.
ಇನ್ನೂ ಧಾರವಾಡ- ಬೆಳಗಾವಿ ನೇರ ರೈಲು ಮಾರ್ಗ ಧಾರವಾಡದ ಬೇಲೂರು ಕೈಗಾರಿಕೆ ಪ್ರದೇಶದಿಂದ ಹಾಯ್ದು ಹೋಗುತ್ತದೆ. ನೀಲಿನಕ್ಷೆ ಪ್ರಕಾರ ಈ ರೈಲು ಮಾರ್ಗ ಅನುಷ್ಠಾನಗೊಳಿಸಿದ್ದರೆ ಮಾರ್ಗಮಧ್ಯೆದ ಯುಪ್ಲೆಕ್ಸ್ ಕಂಪನಿಯ ಬಹುತೇಕ ಜಾಗ ರೈಲ್ವೆ ಇಲಾಖೆಗೆ ಹಸ್ತಾಂತರಗೊಳ್ಳುತ್ತಿತ್ತು. ಕಂಪನಿಯ ಅಧಿಕಾರಿಗಳ ಕೋರಿಕೆ ಮೇರೆಗೆ ಮಾರ್ಗವನ್ನು ಬದಲಾಯಿಸಲಾಯಿತು. ಮಾರ್ಗ ಬದಲಾವಣೆಯಿಂದಾಗಿ ಪಕ್ಕದ ಅಂದಾಜು 2.5 ಕಿ.ಮೀ ಹೆಚ್ಚುವರಿ ಭೂಮಿ ವಶಪಡಿಸಿಕೊಳ್ಳುವುದು ರೈಲ್ವೆ ಇಲಾಖೆಗೆ ಅನಿವಾರ್ಯವಾಯಿತು.
ವಾರಾಣಸಿ, ಅಯೋಧ್ಯೆ ಮತ್ತು ಪ್ರಯಾಗ್ರಾಜ್ ಧಾರ್ಮಿಕ ಸ್ಥಳಗಳಿಗೆ 8 ದಿನಗಳ ಭೇಟಿಗಾಗಿ 20 ಸಾವಿರ ರೂ. ಖರ್ಚಾಗುತ್ತದೆ. ಇದರಲ್ಲಿ 15 ಸಾವಿರ ರೂ. ಭಕ್ತರು ನೀಡಿದರೆ, 5 ಸಾವಿರ ರೂ.ಗಳನ್ನು ಸರಕಾರ ಸಹಾಯಧನ ನೀಡುತ್ತಿತ್ತು. ‘ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ’ ಹೆಸರಿನಡಿ ಯಾತ್ರೆಗಾಗಿಯೇ ವಿಶೇಷವಾದ ರೈಲನ್ನು ಕೂಡ ವಿನ್ಯಾಸಗೊಳಿಲಾಗಿತ್ತು. ರೈಲು ಮೂರು ಬಾರಿ ಯಾತ್ರೆ ತೆರಳಿತ್ತು. ಆದರೆ, 2023ರ ಮಾರ್ಚ್ನಲ್ಲಿ ಕಾಶಿಯಾತ್ರೆಗೆ ಮತ್ತೊಂದು ಟ್ರಿಪ್ಗಾಗಿ ಆಸಕ್ತರಿಂದ ಅರ್ಜಿ ಕರೆದಿತ್ತು. ಅದರಂತೆ ಅರ್ಜಿ ಸಲ್ಲಿಸಿದ 444 ಮಂದಿ ತಲಾ 15 ಸಾವಿರ ರೂ. ಹಣವನ್ನೂ ಕಟ್ಟಿ ಮುಂಗಡವಾಗಿ ಟಿಕೆಟ್ಗಳನ್ನು ಕಾಯ್ದಿರಿಸಿದ್ದರು.
ಏಪ್ರಿಲ್ನಲ್ಲಿ ಕಾಶಿ ಯಾತ್ರೆಗೆ ತೆರಳಬೇಕಿತ್ತು. ಆದರೆ ಅಷ್ಟರಲ್ಲಿ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂತು. ಹೀಗಾಗಿ, ಏಪ್ರಿಲ್ನಲ್ಲಿ ತೆರಳಬೇಕಿದ್ದ ಯಾತ್ರೆಯನ್ನು ಮುಜರಾಯಿ ಇಲಾಖೆ ರದ್ದುಗೊಳಿಸಿತು. ಆದರೆ, ಏಪ್ರಿಲ್ನಲ್ಲಿ ಯಾತ್ರೆ ತೆರಳಬೇಕಿದ್ದ ನೋಂದಾಯಿತ 444 ಮಂದಿ ಗ್ರಾಹಕರಿಗೆ ಮುಜರಾಯಿ ಇಲಾಖೆ ಮೇ ತಿಂಗಳಲ್ಲಿ ಹಣ ಹಿಂದಿರುಗಿಸಿದೆ.