ರಾಜ್ಯದಲ್ಲಿ ಇವಿ ಬೈಕ್ ಟ್ಯಾಕ್ಸಿ ಓಡಾಟಕ್ಕೆ ಸರ್ಕಾರ ಬ್ರೇಕ್ ಹಾಕಿದೆ. ಆದರೂ ಸಹ ರ್ಯಾಪಿಡೋ ಬೈಕ್ ಟ್ಯಾಕ್ಸಿ ಅವರು ನಮಗೆ ಇದು ಅನ್ವಯವಾಗುವುದಿಲ್ಲ ಎಂದು ಹೇಳಿದ್ದು, ಖಾಸಗಿ ಸಾರಿಗೆ ಒಕ್ಕೂಟವನ್ನ ಕೆರಳಿಸಿದೆ. ಈ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಸೆಪ್ಟೆಂಬರ್ 11 2023 ಅಕ್ಷರಶಃ ಬೆಂಗಳೂರಿಗೆ ಬೆಂಗಳೂರೇ ರಣರಂಗವಾಗಿತ್ತು. ರಾಜ್ಯದಲ್ಲಿ ಹೆಚ್ಚಾದ ಬೈಕ್ ಟ್ಯಾಕ್ಸಿ ಓಡಾಟದಿಂದ ಕಂಗೆಟ್ಟಿದ್ದ ಆಟೋ ಹಾಗೂ ಟ್ಯಾಕ್ಸಿ ಚಾಲಕರು ಇಡೀ ಬೆಂಗಳೂರನ್ನೆ ಸ್ತಬ್ಧ ಮಾಡಿ ಪ್ರತಿಭಟನೆ ಮಾಡಿದ್ದರು. ಅದಾದ ನಂತರವು ಅನೇಕ ಬಾರಿ ಸರ್ಕಾರಕ್ಕೆ ಮಾಡಿದ್ದವು. ಹಲವು ದಿನಗಳ ಹೋರಾಟದ ಫಲವಾಗಿ ಕಳೆದ 6 ನೇ ತಾರೀಖು ರಾಜ್ಯದಲ್ಲಿ ಇವಿ ಬೈಕ್ ಟ್ಯಾಕ್ಸಿಯನ್ನ ಬ್ಯಾನ್ ಮಾಡಲಾಗಿದೆ.
ಇನ್ನೂ…ರಾಜ್ಯದಲ್ಲಿ ಇವಿ ಬೈಕ್ ಟ್ಯಾಕ್ಸಿ ಬ್ಯಾನ್ ಮಾಡಿದರೂ ಸಹ ರ್ಯಾಪಿಡೋ ಬೈಕ್ ಟ್ಯಾಕ್ಸಿ ಅವರು ಈ ಒಂದು ಆದೇಶ ನಮಗೆ ಅನ್ವಯಿಸುವುದಿಲ್ಲ. ಬೈಕ್ ಟ್ಯಾಕ್ಸಿಯ ವಿಚಾರ ಕೋರ್ಟ್ನಲ್ಲಿ ಸ್ಟೇ ಇದ್ದು, ಎಂದಿನಂತೆ ನಾವು ನಮ್ಮ ಸೇವೆಯನ್ನ ಜನರಿಗೆ ನೀಡುತ್ತೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನ ಪೋಸ್ಟ್ ಮಾಡಿದ್ದಾರೆ. ಇನ್ನೂ..ಈ ಹೇಳಿಕೆ ವಿರುದ್ದ ಸಿಡಿದೆದ್ದ ಖಾಸಗಿ ಚಾಲಕರ ಒಕ್ಕೂಟ ಇಂದು ಸುದ್ದಿಗೋಷ್ಟಿ ನಡೆಸಿತ್ತು. ಇನ್ನೂ ಸುದ್ದಿಗೋಷ್ಟಿಯಲ್ಲಿ ಖಾಸಗಿ ಚಾಲಕರ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮ, ಪೀಸ್ ಆಟೋ ಯೂನಿಯನ್ ಅಧ್ಯಕ್ಷ ರಘು ನಾರಾಯಣ ಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಹೌದು…ರಾಜ್ಯದಲ್ಲಿ ಇವಿ ಬೈಕ್ ಟ್ಯಾಕ್ಸಿಗೆ ಈ ಹಿಂದೆ ಅವಕಾಶ ನೀಡಲಾಗಿತ್ತು. ಇವಿ ಬೈಕ್ ಟ್ಯಾಕ್ಸಿ ಸ್ಕೀಂ ಮೂಲಕ ಮಾಲಿನ್ಯವನ್ನ ಕಡಿಮೆಗೊಳಿಸಬೇಕೆಂಬ ಉದ್ದೇಶದಿಂದ ಜಾರಿಗೆ ತರಲಾಯಿತು. ಆದರೆ ಇದನ್ನ ಅರಿಯದ ಕೆಲ ಕಂಪನಿಗಳು ಪೆಟ್ರೋಲ್ಯುಕ್ತ ವಾಹನಗಳನ್ನ ಚಲಾಯಿಸಿ ಮತ್ತಷ್ಟು ಮಾಲಿನ್ಯ ಉಂಟುಮಾಡುತ್ತಿದ್ದಾರೆ. ಇನ್ನೂ ಇದನ್ನ ಅರಿಯದ ರ್ಯಾಪಿಡೋ ಕಂಪನಿ ಸಾಮಾಜಿಕ ಜಾಲತಾಣಗಳಲ್ಲಿ ಎಂದಿನಂತೆ ನಾವು ಬೈಕ್ ಟ್ಯಾಕ್ಸಿಯನ್ನ ಚಲಾಯಿಸುತ್ತೇವೆ ಎಂದು ಹೇಳಿದ್ದಾರೆ. ಹಾಗಾದರೆ ಇವರಿಗೆ ಸರ್ಕಾರದ ಯಾವ ಆದೇಶವು ಅನ್ವಯವಾಗುವುದಿಲ್ಲ. ಇದಕ್ಕೆ ಸಾರಿಗೆ ಸಚಿವರೇ ಉತ್ತರ ಕೊಡಬೇಕು. ಹಾಗೂ ಇವರ ವಿರುದ್ದ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಒಟ್ನಲ್ಲಿ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಓಡಾಟದ ವಿರುದ್ದ ಹೋರಾಡಿದ್ದ ಖಾಸಗಿ ವಾಹನ ಚಾಲಕರಿಗೆ ಈಗ ಗುಡ್ನ್ಯೂಸ್ ಸಿಕ್ಕಿದರೂ ಸಹ ರ್ಯಾಪಿಡೋ ಕಂಪನಿಯ ಒಂದು ವಿಡಿಯೋ ಚಾಲಕರ ನಿದ್ದೆಗೆಡಿಸಿದ್ದು, ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಓಡಾಡುತ್ತಾ ಇಲ್ವೋ ಅನ್ನೋದನ್ನ ಕಾದು ನೋಡಬೇಕಿದೆ.