ಹಣಕಾಸು ಸಾಲಿನ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಮಾ.31 ಅಂತಿಮ ಗಡುವು ಆಗಿದ್ದು, ಆದಾಯ ತೆರಿಗೆ ಕಾಯ್ದೆ ನಿಬಂಧನೆಗಳಿಗೆ ಅನುಗುಣವಾಗಿ ಫೈಲ್ ಮಾಡಲಾಗುತ್ತದೆ.ಇದರಲ್ಲಿ ಆ ವ್ಯಕ್ತಿಯ ಆದಾಯ,ಲಾಭ ಹಾಗೂ ನಷ್ಟಗಳ ಜೊತೆಗೆ ಇತರ ತೆರಿಗೆ ಕಡಿತಗಳ ಮಾಹಿತಿಗಳೂ ಇರುತ್ತವೆ.
ನಿಗದಿತ ದಿನಾಂಕದೊಳಗೆ ಐಟಿಆರ್ ಸಲ್ಲಿಕೆ ಮಾಡದಿದ್ರೂ ವಿಳಂಬ ಐಟಿಆರ್ ಸಲ್ಲಿಕೆಗೆ ಅವಕಾಶವಿದ್ದರೂ ತೆರಿಗೆದಾರರು ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ವರ್ಷ ತೆರಿಗೆದಾರರು ಅನುಭವಿಸಿದ ನಷ್ಟವನ್ನು ಮುಂದಿನ ಆರ್ಥಿಕ ಸಾಲಿನಲ್ಲಿ ಅವರು ಗಳಿಸೋ ಲಾಭಕ್ಕೆ ಸರಿಹೊಂದಿಸೋ ಅವಕಾಶವನ್ನು ಕಳೆದುಕೊಳ್ಳುತ್ತಾರೆ.
ಪ್ರತಿ ವರ್ಷ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ ಹಿಂದಿನ ಹಣಕಾಸು ವರ್ಷದ ಫಾರ್ಮ್ಗಳನ್ನು ತಿಳಿಸುತ್ತದೆ. ಕೆಳಗೆ ತಿಳಿಸಲಾದ ಯಾವುದೇ ಷರತ್ತುಗಳು ನಿಮಗೆ ಅನ್ವಯಿಸಿದರೆ, ನೀವು ಖಂಡಿತವಾಗಿಯೂ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಸಲ್ಲಿಸಬೇಕಾಗುತ್ತದೆ.
-1 ಅಥವಾ SAHAJ: ವ್ಯಕ್ತಿಗಳು ಭಾರತದಲ್ಲಿ ನೆಲೆಸಿರುವ ಸಾಮಾನ್ಯ ನಾಗರಿಕರು ಮತ್ತು ರೂ. 50 ಲಕ್ಷದವರೆಗಿನ ಆದಾಯವನ್ನು ಹೊಂದಿರುವವರು ಫಾರ್ಮ್ ಅನ್ನು ಸಲ್ಲಿಸಬೇಕಾಗುತ್ತದೆ. ಸಂಬಳ, ಮನೆಯಿಂದ ಬರುವ ಆದಾಯ, ಇತರ ಮೂಲಗಳಿಂದ ಬರುವ ಆದಾಯ, ಸಂಗಾತಿ ಅಥವಾ ಮಕ್ಕಳಿಂದ ಬರುವ ಆದಾಯ ಸೇರಿ ಎಲ್ಲವೂ ರೂ.50 ಲಕ್ಷದವರೆಗೆ ಇದ್ದರೆ, ಐಟಿಆರ್-1ರ ಅಡಿ ರಿಟರ್ನ್ಸ್ ಸಲ್ಲಿಸಬೇಕು.
ವೃತ್ತಿ, ವ್ಯಾಪಾರ, ಹಿಂದೂ ಅವಿಭಜಿತ ಕುಟುಂಬಗಳಿಂದ ಆದಾಯ ಗಳಿಸದ ವ್ಯಕ್ತಿಗಳು ಈ ಫಾರ್ಮ್-2 ಅನ್ನು ಸಲ್ಲಿಸಬೇಕು. ರೂ.50 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ ವ್ಯಕ್ತಿ, ಕಂಪನಿಯ ನಿರ್ದೇಶಕರು, ಪಟ್ಟಿ ಮಾಡದ ಈಕ್ವಿಟಿ ಷೇರುಗಳನ್ನು ಹೊಂದಿರುವವರು ಈ ಐಟಿಆರ್ ಫಾರ್ಮ್-2 ಅನ್ನು ಸಲ್ಲಿಸಬೇಕು. ಮಾಸಿಕ ಸಂಬಳ ಹೊಂದಿರುವವರು, ಬಹು ಕುಟುಂಬಗಳು, ಬಂಡವಾಳ ಲಾಭಗಳು, ವಿದೇಶಗಳಲ್ಲಿ ಆಸ್ತಿಗಳು ಮತ್ತು ಆದಾಯದ ಮಾರ್ಗಗಳನ್ನು ಹೊಂದಿರುವವರು ಫಾರ್ಮ್ ಅನ್ನು ಸಲ್ಲಿಸಬೇಕು.
ವೃತ್ತಿ, ವ್ಯಾಪಾರ ಮತ್ತು ಹಿಂದೂ ಅವಿಭಜಿತ ಕುಟುಂಬಗಳಿಂದ ಆದಾಯ ಮತ್ತು ಲಾಭ ಗಳಿಸುವ ವ್ಯಕ್ತಿಗಳು ಈ ಫಾರ್ಮ್ ಸಲ್ಲಿಸಬೇಕು.
ಅಥವಾ ರೂ.50 ಲಕ್ಷದವರೆಗೆ ಆದಾಯ ಹೊಂದಿರುವ ವ್ಯಕ್ತಿಗಳು , ಸಂಸ್ಥೆಗಳು ; ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ ಪ್ರಕಾರ, ವೃತ್ತಿ ಮತ್ತು ವ್ಯವಹಾರದ ಮೂಲಕ ಆದಾಯ ಗಳಿಸುವ ವ್ಯಕ್ತಿಗಳು ಅನ್ನು ಸಲ್ಲಿಸಬೇಕು.