ಬೆಂಗಳೂರಿನಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ನಮ್ಮ ಕಂಬಳ ಕ್ರೀಡೆಗೆ ಈಗಾಗಲೇ ಭರದ ಸಿದ್ಧತೆಗಳು ನಡೆದಿವೆ.ಪಕ್ಷಾತೀತವಾಗಿ ನಡೆಯಲಿರುವ ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಇಂದು ಬಿಡುಗಡೆ ಮಾಡಲಾಯಿತು. ಈ ಕುರಿತು ಮತ್ತಷ್ಟು ಡೀಟೈಲ್ಸ್ ಇಲ್ಲಿದೆ.
ನಮ್ಮ ಕಂಬಳ,ಇದು ನಮ್ಮ ಬೆಂಗಳೂರಿನಲ್ಲಿ ನಡೆಯತ್ತಿರುವ ಮೊದಲ ಕಂಬಳ. ಈ ಕಂಬಳ ಕ್ರೀಡೆಗಾಗಿ ಈಗಾಗಲೇ ಸಕಲ ಸಿದ್ಧತೆಗಳು ನಡೆದಿದ್ದು,155 ಮೀಟರ್ ಉದ್ದದ ಕೆರೆಯನ್ನು ನಿರ್ಮಾಣ ಮಾಡಲಾಗಿದೆ.ಸುಮಾರು ಎಂಟು ಕೋಟಿ ವೆಚ್ಚದಲ್ಲಿ ನೆರವೇರಲಿರುವ ಈ ಕಾರ್ಯಕ್ರಮಕ್ಕೆ ಸರ್ಕಾರದಿಂದ ಒಂದು ಕೋಟಿ ಅನುದಾನವು ನೀಡುತ್ತಿದ್ದಾರೆ ಅಂತ ಕಂಬಳ ಆಯೋಜಕರು ತಿಳಿಸಿದರು.
ಈಗಾಗಲೇ ಎಂಟು ಸಾವಿರ ಜನರಿಗೆ ಆಸನದ ವ್ಯವಸ್ಥೆ ಆಗಿದೆ, 200ಕ್ಕು ಹೆಚ್ಚು ಕೋಣಗಳ ಜೋಡಿಗಳ ನೋಂದಣಿ ಆಗಿದೆ. ಈಗಾಗಲೇ ಎರಡು ಜೋಡಿ ಕೋಣಗಳನ್ನು ಕರೆತರಲಾಗಿದ್ದು, ನಾಳೆ ಉಳಿದ 198 ಜೋಡಿ ಕೋಣಗಳನ್ನು ಉಪ್ಪಿನಂಗಡಿಯಿಂದ ನೇರವಾಗಿ ಹಾಸನಕ್ಕೆ ಕರೆತಂದು ಅಲ್ಲಿಂದ ಮೆರವಣಿಗೆ ಮೂಲಕ ಬೆಂಗಳೂರಿನ ಅರಮನೆ ಮೈದಾನಕ್ಕೆ ಕರೆತರಲಾಗುವುದು, ಜೊತೆಗೆ ನಾಳೆ ಕೋಣಗಳ ಪೂರ್ವ ತಯಾರಿಯು ಕೂಡ ನಡೆಯಲಿದೆ. ಇನ್ನೂ ಈ ಕಂಬಳ ಗೆದ್ದವರಿಗೆ ಮೂರು ಹಂತದ ಬಹುಮಾನ ನೀಡಲಾಗುತ್ತದೆ.ಅದರಲ್ಲಿ ಮೊದಲ ಬಹುಮಾನ 16 ಗ್ರಾಂ ಚಿನ್ನ,1ಲಕ್ಷ ನಗದು ,ದ್ವಿತೀಯ 8ಗ್ರಾಂ ಚಿನ್ನ 50 ಸಾವಿರ ನಗದು ಹಾಗೂ ತೃತೀಯ ಬಹುಮಾನ 25 ಸಾವಿರ ನಗದು ನೀಡಲಾಗುತ್ತದೆ.
ಒಟ್ಟಿನಲ್ಲಿ ಅರಮನೆ ಮೈದಾನದಲ್ಲಿ ಸುಮಾರು 50 ಎಕರೆ ಜಾಗದಲ್ಲಿ ನಡೆಯಲಿರುವ ಕಂಬಳಕ್ಕೆ ಅದ್ಧೂರಿಯಾಗಿ ತಯಾರಿ ನಡೆದಿದ್ದು, ,ಪಕ್ಷಾತೀತವಾಗಿ ನಡೆಯಲಿರುವ ನಮ್ಮ ಕಂಬಳಕ್ಕೆ ರಾಜಕೀಯ ಗಣ್ಯರು, ಸಿನಿಮಾ ತಾರೆಯರು,ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.