ಕರ್ನಾಟಕ ಮತ್ತು ಭಾರತ ಸರಕಾರದ ಸಹಭಾಗಿತ್ವದಲ್ಲಿ ರಾಷ್ಟ್ರೀಯ ತುರ್ತು ವಾಹನ ಸೇವೆಯಡಿ ಬೀದರ್ ಜಿಲ್ಲೆಯ ಆರೋಗ್ಯ ಕವಚ ಆಯಂಬುಲೆನ್ಸ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತುರ್ತು ವೈದ್ಯಕೀಯ ಚಿಕಿತ್ಸಕ ರಿಗೆ (ಇಎಂಟಿ) ಮತ್ತು ಚಾಲಕರಿಗೆ (ಪಾಯಲೆಟ್) ಕಳೆದ 7 ತಿಂಗಳಿಂದ ವೇತನವೇ ಇಲ್ಲ.
ಈ ನೌಕರರ ಸ್ಥಿತಿ ಚಿಂತಾಜನಕವಾಗಿದೆ.. ಜಿಲ್ಲೆಯಲ್ಲಿ ಒಟ್ಟು 29 ಆರೋಗ್ಯ ಕವಚ ವಾಹನಗಳಿವೆ. ಔರಾದ್ ತಾಲೂಕಿನಲ್ಲಿ 5, ಬೀದರ್, ಹುಮನಾಬಾದ್, ಭಾಲ್ಕಿಯಲ್ಲಿ ತಲಾ 4 ಮತ್ತು ಬಸವಕಲ್ಯಾಣದಲ್ಲಿ 3 ಆಯಂಬುಲೆನ್ಸ್ಗಳಿದ್ದು, ಇದರಲ್ಲಿ ಒಂದು ವಾಹನ ಹೆಚ್ಚುವರಿಯಾಗಿ ಮೀಸಲಿಡಲಾಗಿದೆ. ಯಾವುದಾದರೂ ವಾಹನ ಕೈಕೊ ಟ್ಟರೆ ತುರ್ತು ವೇಳೆ ಈ ವಾಹನ ಬಳಕೆ ಮಾಡಲಾಗುತ್ತಿದೆ.
ಜಿಲ್ಲೆಯಲ್ಲಿ ತುರ್ತು ವೈದ್ಯಕೀಯ ಚಿಕಿತ್ಸಕರು 50 ಮತ್ತು ವಾಹನ ಚಾಲಕರು 51 ಸೇರಿ ಒಟ್ಟು 101 ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ.. ಸದ್ಯ ಈ ಎಲ್ಲಾ ಸಿಬ್ಬಂದಿಗೆ ಕಳೆದ 7 ತಿಂಗಳಿಂದ ಸಂಬಳಾ ಇಲ್ಲಾ. ಸಂಬಳಾ ಇಲ್ಲಾ ಅಂದರೆ ಬದುಕು ಸಾಗಿಸುವುದು ಕಷ್ಟಕರವಾಗಿದೆ. ಬಾಕಿ ವೇತನ ಪಾವತಿಸುವಂತೆ ಸರಕಾರಕ್ಕೆ ಸಾಕಷ್ಟು ಸಲ ಮನವಿ ಸಲ್ಲಿಸಿದರೂ ಕ್ರಮಕ್ಕೆ ಮುಂದಾಗಿಲ್ಲ ಎಂದು ಸಿಬ್ಬಂದಿಯೊಬ್ಬರು ಗೋಳು ತೊಡಿಕೊಂಡಿದ್ದಾರೆ
ಜನರಿಗೆ ತುರ್ತು ಚಿಕಿತ್ಸೆ ಸಿಗಲೆಂದು ಆರಂಭವಾದ 108 ಆಯಂಬುಲೆನ್ಸ್ ಸೇವೆಗೆ ಮಂಕು ಕವಿದಿದ್ದು, ಈಗ ಸಿಬ್ಬಂದಿಗಳ ವೇತನ ಕಂಟಕ ಎದುರಾಗಿದೆ. ಸರಕಾರದ ಬೇಜವಾಬ್ದಾರಿತನ ದಿಂದ ನೌಕರರು ಸಂಕಷ್ಟದಲ್ಲಿದ್ದಾರೆ. ಹಿಂದಿನ ವೇತನದಲ್ಲೂ ಭಾರಿ ಕಡಿತ ಮಾಡಲಾಗಿದೆ. ಹಿಂದಿನ ಸರ್ಕಾರದ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವರಾಗಿದ ಕೆ.ಸುಧಾಕರ್ ಅವರ ಆಡಳಿತದಲ್ಲಿ ಕಳೆದ ವರ್ಷ ಪ್ರತಿ ತಿಂಗಳು 36 ಸಾವಿರ ರೂ. ವೇತನ ಕೈಸೇರುತ್ತಿತ್ತು. ಆದರೆ ಈಗ ಕಡಿಮೆ ನೀಡುವ ಮೂಲಕ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದ ಸಿಬ್ಬಂದಿ..
108 ನೌಕರರ ಸ್ಥಿತಿ ಕೇಳೋರಿಲ್ಲತುರ್ತು ವೇಳೆ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ಕೆಲಸವನ್ನು 108 ಆಯಂಬ್ಯುಲೆನ್ಸ್ ನೌಕರರು ಮಾಡುತ್ತಾರೆ. ಎಲ್ಲ ರೀತಿಯ ರಿಸ್ಕ ತೆಗೆದುಕೊಂಡು ಕೆಲಸ ಮಾಡಿದರೂ ಪ್ರತಿ ತಿಂಗಳು ವೇತನ ಇನ್ನೂ ಕೈಸೇರಿಲ್ಲ. ನೌಕರರ ಸ್ಥಿತಿ ಕೇಳರ್ಯಾರು ಇಲ್ಲದಂತಾಗಿದೆ.ನೌಕರರು ಎದುರಿಸುತ್ತಿರುವ ಸಮಸ್ಯೆಗೆ ಸರಕಾರ ಸ್ಪಂದಿಸಬೇಕು. ಪ್ರತಿ ತಿಂಗಳು ಸಮರ್ಪಕವಾಗಿ ವೇತನ ಪಾವತಿ ಮಾಡುವ ವ್ಯವಸ್ಥೆ ಆಗಬೇಕು..ಕಳೆದ 7ತಿಂಗಳಿಂದ ವೇತನ ಇಲ್ಲ. ಸಮರ್ಪಕವಾಗಿ ಪ್ರತಿ ತಿಂಗಳು ವೇತನ ಸಿಗುತ್ತಿಲ್ಲ. ಕಳೆದ 7 ತಿಂಗಳಿಂದ ಸಂಬಳ ಇಲ್ಲದ ಕಾರಣ ಕುಟುಂಬ ನಿರ್ವಹಣೆಗೆ ತೊಂದರೆಯಾಗುತ್ತಿದೆ. ವೇತನದಲ್ಲೂ ಕಡಿತ ಮಾಡಿದ್ದು, ಈ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ತಕ್ಷಣ ಬಾಕಿ ವೇತನ ಪಾವತಿಸಿ ಮುಂದೆ ಪ್ರತಿ ತಿಂಗಳು 1ನೇ ತಾ ರೀಖಿಗೆ ಸಿಗುವಂತೆ ವ್ಯವಸ್ಥೆ ಮಾಡಬೇಕು.