ಉಪ್ಪಿನಂಗಡಿಯ ಪೆರ್ನೆ ಗ್ರಾಮದಲ್ಲಿ ವಿವಾಹಿತ ಮಹಿಳೆಯೊಬ್ಬರು ತನ್ನ ಅಕ್ಕನ ಮಗನಿಂದಲೇ ಕೊಲೆ ಆಗಿ ಹೋಗಿದ್ದಾರೆ. ಮೃತರನ್ನು ಹೇಮಾವತಿ(27) ಎಂದು ಗುರುತಿಸಲಾಗಿದೆ. ಹೇಮಾವತಿ ಅವರ ಮನೆಗೆ ಹೇಮಾವತಿ ಅಕ್ಕನ ಮಗ ( ಅಪ್ರಾಪ್ತ ಬಾಲಕ ) ಹೋಗಿದ್ದಾನೆ. ರಾತ್ರಿ ಚಿಕ್ಕಮ್ಮ ಮಲಗಿದ್ದ ವೇಳೆ ಅವರಿದ್ದಲ್ಲಿಗೆ ಹೋಗಿ ಅವರನ್ನು ಸ್ಪರ್ಶಿಸಿ ದೇಹಸುಖ ಬಯಸಿದ್ದಾನೆ . ತಕ್ಷಣ ಎಚ್ಚರಗೊಂಡ ಹೇಮಾವತಿ..ಬಾಲಕನನ್ನು ಗದರಿಸಿ ಸುಮ್ಮನೆ ಇರುವಂತೆ ಹೇಳಿದ್ದಾರೆ .
ನಾಳೆ ಏನಾದರೂ ಈ ವಿಚಾರ ಮನೆಯವರಿಗೆ ಗೊತ್ತಾದರೆ..ಎಂದು ಭಯಪಟ್ಟ ಬಾಲಕ ಚಿಕ್ಕಮ್ಮ ಹೇಮಾವತಿ ನಿದ್ರೆಗೆ ಜಾರಿದಾಗ ಅವರ ಕುತ್ತಿಗೆ ಹಿಸುಕಿ ಕೊಂದಿದ್ದಾನೆ. ನಂತರ
ಬಾಲಕ ಮನೆಯವರಿಗೆ ಹೃದಯಾಘಾತವಾಗಿದೆ ಎಂದು ಹೇಳಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ನಂತರ ಅನುಮಾನಗೊಂಡು ಪೊಲೀಸರು ವಿಚಾರಣೆ ನಡೆಸಿದಾಗ ಬಾಲಕನ ದೇಹದಲ್ಲಿ ಪರಚಿದ ಗಾಯ ಪತ್ತೆಯಾಗಿದೆ. ನಂತರ ಬಾಲಕನನ್ನು ಬಾಯಿಬಿಡಿಸಿದಾಗ ನಡೆದ ಸತ್ಯವನ್ನು ಕಕ್ಕಿದ್ದಾನೆ.