ಮೈಸೂರಿನ ಅರಮನೆ ಆವರಣಕ್ಕೆ ಪ್ರತಿದಿನವೂ ಹಲವು ಅನಾಮಿಕರು ಬಂದು ಆನೆ ಸೊಂಡಿಲು, ದಂತಗಳನ್ನು ಹಿಡಿದು ಪೋಸ್ ಕೊಡುತ್ತಾ ರೀಲ್ಸ್ ಮಾಡುತ್ತಿದ್ದಾರೆ. ಆನೆಗಳ ಮುಂದೆ ಫೋಟೊಶೂಟ್ಗಾಗಿ ಅರಣ್ಯ ಅಧಿಕಾರಿಗಳು ಅನುಮತಿ ಕೊಡುವ ಮೂಲಕ ಆನೆಗಳ ವಿಚಾರದಲ್ಲಿ ಅರಣ್ಯ ಇಲಾಖೆ ದಿವ್ಯ ನಿರ್ಲಕ್ಷ್ಯ ತೋರಿದಂತಿದೆ.
ಮೊನ್ನೆಯಷ್ಟೆ ಎರಡು ಆನೆಗಳ ನಡುವೆ ಕಾಳಗ ನಡೆದು ಆತಂಕ ಸೃಷ್ಟಿಸಿತ್ತು. ಆದರೂ ಅಧಿಕಾರಿಗಳು ಎಚ್ಚೆತ್ತಂತೆ ಕಾಣುತ್ತಿಲ್ಲ.
ಈ ಹಿಂದೆ ಕೂಡ ಆನೆ ಮುಂದೆ ಫೋಟೋ ತೆಗೆದಿದ್ದರಿಂದ ಹಲವು ಅವಾಂತರ ಸೃಷ್ಟಿಯಾಗಿತ್ತು. ಆದರ, ಈಗ ಕೆಲವರ ರೀಲ್ಸ್ ಶೋಕಿಗೆ ದಸರಾ ಆನೆಗಳ ಬಳಕೆ ಹೆಚ್ಚಾಗಿದೆ. ಅರಣ್ಯ ಅಧಿಕಾರಿಗಳು ದುಡ್ಡಿಗೆ ಮಣಿದರಾ ಅಥವಾ ಒತ್ತಡಕ್ಕೆ ಮಣಿದರಾ ಎಂಬ ಪ್ರಶ್ನೆ ಮೂಡಿದೆ. ಆದರೆ, ದಿನ ನಿತ್ಯ ಅರಮನೆ ಆವರಣದ ಅನಾಮಿಕ ವ್ಯಕ್ತಿಗಳ ರೀಲ್ಸ್ ಶೋಕಿ ಮಾತ್ರ ಹೆಚ್ಚಾಗಿದೆ. ರೀಲ್ಸ್ ಹೆಸರಿನಲ್ಲಿ ಅರಣ್ಯ ಅಧಿಕಾರಿಗಳು ದುಡ್ಡು ಮಾಡುತ್ತಿದ್ದಾರೆ ಎಂಬ ಮಾತು ಜೋರಾಗಿದೆ.