ಕಲಘಟಗಿ ಸಂಭ್ರಮ-ದುಃಖ, ಸೋಲು-ಗೆಲುವಿನ, ನೋವು-ನಲಿವಿನ ಮಿಳಿತವೇ ಮೊಹರಂ. ಇದು ಅಲ್ಲಾಹುವಿನ ತಿಂಗಳು ಎನ್ನುವುದು ಪ್ರವಾದಿ ಪೈಗಂಬರರ ನುಡಿ. ಪ್ರಥಮ ಮನುಷ್ಯ ಆದಂ ಅವರನ್ನು ಸೃಷ್ಟಿಸಿದ್ದು, ಪ್ರವಾದಿ ಇಬ್ರಾಹಿಮರು ಅಗ್ನಿಕುಂಡದಿಂದ ರಕ್ಷೆ ಪಡೆದಿದ್ದು, ಪ್ರವಾದಿ ಮೂಸ್ ಹಾಗೂ ಅವರ ಸಮುದಾಯ ಕ್ರೂರಿ ಫಿರ್ಔನ್ನಿಂದ (ಫೇರೋ) ಮುಕ್ತಿ ಹೊಂದಿದ್ದು,
ಮೀನಿನ ಹೊಟ್ಟೆಯಿಂದ ಪ್ರವಾದಿ ಯೂನುಸರು ಪಾರಾಗಿದ್ದು ಇದೇ ತಿಂಗಳಲ್ಲಿ ಎಂದು ಇಸ್ಲಾಮಿ ಚರಿತ್ರೆಯ ಪುಸ್ತಕಗಳಲ್ಲಿ ದಾಖಲಾಗಿದೆ.ಭೂಮಿಗೆ ಪ್ರಥಮ ಮಳೆ ಬಿದ್ದಿದ್ದು ಈ ತಿಂಗಳಲ್ಲೇ ಎನ್ನುವುದು ಮುಸ್ಲಿಮರ ನಂಬಿಕೆ.ಇದೇ ಮಾಸದ 10ನೇ ದಿನದಂದು ಪ್ರವಾದಿ ಪೈಗಂಬರರ ಲಚಮಪ್ಪ ಲಮಾಣಿ ಇವರ ಮೊಮ್ಮಗ ಅರ್ಜುನ್ ಸೋಮಪ್ಪ ಲಮಾಣಿ
ವಧೆಯಾಗಿದ್ದು ಮುಸ್ಲಿಮರ ಪಾಲಿಗೆ ಕರಾಳ ಘಟನೆ ಹೀಗಾಗಿ
ಮೊಹರಂನ್ನು ಮುಸ್ಲಿಂರು ಶೋಕದ ಸಂಕೇತವಾಗಿ ಆಚರಿಸುತ್ತಾರೆ. ಮಸೀದಿ ಹಾಗೂ ಇತರ ಕಡೆಗಳಲ್ಲಿ ಪಾಂಜಾಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.ಮೊಹರಂ ಕೊನೆಯ ದಿನವಾದ ಬುಧವಾರ ಪಾಂಜಾ ಹಾಗೂ ಡೋಲಿಗಳನ್ನು ಮೆರವಣಿಗೆ ಮಾಡಲಾಯಿತು.
ಈ ಮೊಹರಂ ಹಬ್ಬವನ್ನು ಕಲಘಟಗಿ ತಾಲೂಕಿನ ಶಿಗಿಗಟ್ಟಿ ತಾಂಡಾದಲ್ಲಿ ವಿಶೇಷವಾಗಿ ಆಚರಣೆ ಮಾಡಲಾಯಿತು.ಡೋಲಿ ಹಾಗೂ ಪಾಂಜಾಗಳ ಮೆರವಣಿಗೆಯುದ್ದಕ್ಕೂ ಯುವಕರು ಹೆಜ್ಜೆ ಮೇಳದೊಂದಿಗೆ ಹೆಜ್ಜೆ ಹಾಕುತ್ತ ಸಾಗಿದ್ದು ವಿಶೇಷವಾಗಿತ್ತು. ಹಿಂದೂ, ಮುಸ್ಲಿಂರು ಬೇಧ, ಭಾವವಿಲ್ಲದೇ ಮೊಹರಂ ಆಚರಣೆ ಮಾಡಿದ್ದು ವಿಶೇಷವಾಗಿತ್ತು.