ಥಾಯ್ಲೆಂಡ್ನಲ್ಲಿ ಮಲಗಿದ್ದ ಯುವಕನೊಬ್ಬನ ಚಡ್ಡಿಯೊಳಗೇ ನಾಗರಹಾವೊಂದು ನುಗ್ಗಿದ್ದು, ಆತ ಎಚ್ಚರಗೊಂಡಾಗ ಪ್ರಾಣವು ಬಾಯಿಗೆ ಬಂದಿದ್ದಂತೂ ಸುಳ್ಳಲ್ಲ
ಥಾಯ್ಲೆಂಡ್ನಲ್ಲಿ ಇತ್ತೀಚೆಗೆ ಯುವಕನೊಬ್ಬ ರಾತ್ರಿ ಮಲಗಿದ್ದಾನೆ.
ಇಡೀ ದಿನ ಸುತ್ತಾಡಿದ ಸುಸ್ತೋ ಏನೋ, ಗಾಢವಾಗಿ ಆತನನ್ನು ನಿದ್ರಾದೇವತೆ ಆವರಿಸಿದ್ದಾಳೆ. ಇದೇ ವೇಳೆ ಎಲ್ಲಿಂದಲೋ ಮೆಲ್ಲಗೆ ಬಂದ ಹಾವು, ನಿಧಾನವಾಗಿ ಯುವಕನ ಚಡ್ಡಿಯೊಳಗೆ ಪ್ರವೇಶಿಸಿದೆ. ಇಡೀ ರಾತ್ರಿ ಹಾವು ಯುವಕನ ಚಡ್ಡಿಯೊಳಗೆ ಬೆಚ್ಚಗೆ ಮಲಗಿದೆ. ಯುವಕನೂ ಮಲಗಿದ್ದಾನೆ. ಆದರೆ, ಬೆಳಗ್ಗೆ ಏಳುತ್ತಲೇ ಯುವಕನಿಗೆ ತನ್ನ ಚಡ್ಡಿಯೊಳಗೆ ಏನೂ ನುಸುಳಿದ, ಅಲುಗಾಡಿದ ಅನುಭವವಾಗಿದೆ.
ಅಪಾಯದ ಮುನ್ಸೂಚನೆ ಅರಿತ ಯುವಕನು ಅಲುಗಾಡದೆ ಚಡ್ಡಿಯೊಳಗೆ ಏನಿದೆ ಎಂಬುದನ್ನು ನೋಡಿದ್ದಾನೆ. ಆಗ ನಾಗರಹಾವು ಕಂಡ ಆತನಿಗೆ ಆಘಾತವಾಗಿದೆ. ಸ್ವಲ್ಪ ಅಲುಗಾಡಿದರೂ ಹಾವು ಕಚ್ಚುತ್ತದೆ ಎಂಬುದನ್ನು ಅರಿತ ಆತನು
ಗೆಳೆಯರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಸುದ್ದಿ ತಿಳಿದ ಗೆಳೆಯರು ಕೂಡ ಆಘಾತಕ್ಕೊಳಗಾಗಿದ್ದು, ಕೂಡಲೇ ಸ್ಥಳೀಯ ಉರಗ ತಜ್ಞರನ್ನು ಕರೆದುಕೊಂಡು ಮನೆಗೆ ಹೋಗಿದ್ದಾರೆ
ಯುವಕನ ಮನೆಗೆ ಬಂದ ಉರಗ ತಜ್ಞನು ಯುವಕನ ಚಡ್ಡಿಯಿಂದ ನಿಧಾನವಾಗಿ ಹಾವನ್ನು ಹೊರತೆಗೆದಿದ್ದಾರೆ.