ಕಾನೂಬಾಹಿರವಾಗಿ ಮಗು ದತ್ತು ಪಡೆದ ಪ್ರಕರಣದಲ್ಲಿ ರೀಲ್ಸ್ ರಾಣಿ ಸೋನು ಗೌಡ ಅವರನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಬಾಲಕಿಯ ತಂದೆ ತಾಯಿಗೂ ಸಂಕಷ್ಟ ಉಂಟಾಗುವ ಸಾಧ್ಯತೆ ಇದ್ದು, ಕರ್ನಾಟಕ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿ ತಂದೆ ತಾಯಿಗೆ ನೋಟಿಸ್ ನೀಡಿದೆ.
ಪೋಷಕರು ತಮ್ಮ ಮಕ್ಕಳನ್ನು ಬೇರೆಯವರಿಗೆ ವಹಿಸಬೇಕಾದರೆ ಕೆಲವು ಕಾನೂನಿನ ನಿಯಮಗಳು ಪಾಲಿಸಲೇ ಬೇಕಾಗಿದೆ. ಆದರೆ ಸೋನು ಗೌಡ ಪ್ರಕರಣದಲ್ಲಿ ಆ ರೀತಿ ನಿಯಮಗಳು ಪಾಲನೆ ಆಗಿಲ್ಲ. ಹೀಗಾಗಿ, ಕರ್ನಾಟಕ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿ ಅಧಿಕಾರಿಗಳು ವಿಚಾರಣೆ ವೇಳೆ ಮಗುವನ್ನು ಕೊಟ್ಟಿದ್ದಕ್ಕೆ ಅಧಿಕಾರಿಗಳು ಕಾರಣ ಕೇಳಲಿದ್ದಾರೆ. ಹಣ ಪಡೆದು ಮಗುವನ್ನು ನೀಡಿದ್ದೇವೆ ಎಂದರೆ ಪೋಷಕರಿಗೆ ಕಂಟಕ ಎದುರಾಗಲಿದೆ.
ಮಗುವನ್ನು ಹಣಕ್ಕೆ ಮಾರಾಟ ಮಾಡಿದ್ರೆ ಪೋಷಕರ ವಿರುದ್ಧವೂ ಪ್ರಕರಣ ದಾಖಲಾಗುತ್ತದೆ. ಬಡತನದ ಕಾರಣದಿಂದ ಮಗುವನ್ನ ನೋಡಿಕೊಳ್ಳಲು ಕೊಟ್ಟಿದ್ದು ಎಂದರೆ ಸಮಸ್ಯೆ ಉಂಟಾಗೋ ಸಾಧ್ಯತೆ ಕಡಿಮೆ ಇದೆ. ಸದ್ಯ ಮಗುವಿನ ಪಾಲಕರ ಹೇಳಿಕೆ ಮೇಲೆ ಮುಂದಿನ ಕ್ರಮ ನಿರ್ಧರ ಆಗಲಿದೆ.