ಮಂತ್ರಿಯಾಗಿ ಬಂದ ಮೊದಲ ದಿನವೇ ತುಮಕೂರು ಜಿಲ್ಲಾಧಿಕಾರಿ, ಸಿಇಒಗೆ ವಿ. ಸೋಮಣ್ಣ ತರಾಟೆ ತೆಗೆದುಕೊಂಡರು.
ಜಿಲ್ಲೆಯ ಚಿನ್ನೇನಹಳ್ಳಿ ಜಾತ್ರೆ ವೇಳೆ ಅಸ್ವಸ್ಥರಾಗಿದ್ದ ಕೆಲವರಲ್ಲಿ ಆರು ಜನ ಮೃತ ಪಟ್ಟಘಟನೆಗೆ ಸಂಬಂಧಪಟ್ಟಂತೆ ತುಮಕೂರು ಜಿಲ್ಲಾಸ್ಪತ್ರೆಗರ ಬೇಟಿ ನೀಡಿದ ಸಂದರ್ಬದಲ್ಲಿ ಅಧಿಕಾರಿಗಳ ಇಲ್ಲದಿರುವುದನ್ನು ಕಂಡು ಅವರಿಗೆ ಕರೆ ಮಾಡಿ ತರಾಟೆ ತೆಗೆದುಕೊಂಡರು.
ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಆರೋಗ್ಯ ವಿಚಾರಣೆ ಮಾಡಿದ ನಂತರ ಅವರು ಸ್ಥಳದಲ್ಲಿಜಿಲ್ಲಾಧಿಕಾರಿ, ಸಿಇಒ ಇಲ್ಲದನ್ನು ಕಂಡು ತರಾಟೆ ತೆಗೆದುಕೊಂಡರು. ಯಾವನೂ ಬಂದಿಲ್ಲ, ಕುಡಿಯುವ ನೀರಿಗೂ ಡಿಚ್ ಒಗೆ ಏನ್ ಸಂಬಂಧ ಎಂದು ರೇಗಾಡಿದರು. ಮಧುಗಿರಿ ತಾಲೂಕಿನಲ್ಲಿ ಕಹಿ ಘಟನೆ ನಡೆದಿದೆ. ಕಲುಷಿತ ನೀರು ಕುಡಿದು ಸಾವನಪ್ಪಿದ್ದಾರೆ. ಈ ಬಗ್ಗೆ ವರದಿ ಕೇಳಲಾಗಿದೆ. ಅದು ಬಂದ ನಂತರ ಕ್ರಮ ವಹಿಸಲಾಗುವುದು ಎಂದರು.
ನರೇಂದ್ರ ಮೋದಿ ಅವರು ಎನ್ ಡಿ ಎ ಒಕ್ಕೂಟದ ಮಂತ್ರಿ ಮಂಡಲದಲ್ಲಿ ನನ್ನನ್ನೂಪರಿಗಣಿಸಿದ್ದಾರೆ. ಪ್ರಧಾನಿ ಹಾಗೂ ಗೃಹ ಸಚಿವರಿಗೆ, ದೇವೇಗೌಡರಿಗೆ ಧನ್ಯವಾದ ಹೇಳುತ್ತೇನೆ.
ನನಗೆ ಕೊಟ್ಟ ಖಾತೆಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ಪ್ರಧಾನಿ ಮೋದಿ ಅವರ ನಿರೀಕ್ಷೆಯಂತೆ ಕೆಲಸ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.