ಬೆಂಗಳೂರು ಗ್ರಾಮಾಂತರ: ಲವ್ ಹೆಸರಿನಲ್ಲಿ ಯುವತಿಯ ಮಹಾದೋಖಾ ನಡೆದಿದ್ದು ಅಮಾಯಕ ಹುಡುಗರನ್ನ ಬುಟ್ಟಿಗೆ ಹಾಕಿಕೊಂಡು ಲವ್ ದೋಖಾ ನಡೆಸಿರುವ ಘಟನೆ ಸೂರ್ಯಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.ಮಾವನ ಜೊತೆ ಮದುವೆಗೂ ಮೊದಲು ಮತ್ತೊಬ್ಬನ ಜೊತೆ ಲವ್ವಿಡವ್ವಿ ಇದು ನಾಟಿ ಬ್ಯೂಟಿಯ ಲವ್ ಕಹಾನಿ ದೋಖಾ
ಹೌದು.. ಅವ್ರುದು ಏಳು ವರ್ಷಗಳ ಟೂ ಸೈಡ್ ಲವ್ ಅಕ್ಕನ ಮಗಳ ಜೊತೆ ಮಾವನ ಏಳು ವರ್ಷಗಳ ಲವ್ ಆಗಿದ್ದು ಏಳು ವರ್ಷಳಲ್ಲಿ ಮಾವನ ಮಗನ ಜೊತೆ ಮೂರು ಬಾರಿ ಮದುವೆ ಮಾಡಲಾಗಿದ್ದು ಆದರೆ ಮೂರನೇ ಬಾರಿ ಮದುವೆಯಾದ ಮೂರೇ ದಿನಕ್ಕೆ ಮತ್ತೊಬ್ಬನ ಜೊತೆ ಜೂಟ್ ಆದ ಖತರ್ನಾಕ್ ಹುಡುಗಿ
ಮೂಲತಃ ಬೆಂಗಳೂರಿನ ದೊಡ್ಡಕಲ್ಲಸಂದ್ರದ ನಿವಾಸಿಗಳಾದ ಮಂಜುನಾಥ್ ಮತ್ತು ಮನುಜಾ ಏಳು ವರ್ಷಗಳಿಂದ ಮನುಜಾ ಮತ್ತು ಮಂಜುನಾಥ್ ಪರಸ್ಪರ ಲವ್ ಮಾಡುತ್ತಿದ್ದು ಮನೆಯವರ ವಿರೋಧದ ನಡುವೆ ಎರಡು ಬಾರಿ ಮದುವೆ ಆದರೂ ಎರಡು ಬಾರಿಯು ಯುವತಿಯನ್ನು ಕರೆದೊಯ್ದಿದ್ದ ಪೋಷಕರು ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡುವುದಾಗಿ ಕರೆದೊಯ್ದಿದ್ದರು
ಆದರೂ ನಾಲ್ಕೈದು ವರ್ಷ ಕಳೆದರು ಮದುವೆ ಮಾಡಿಕೊಟ್ಟಿರಲಿಲ್ಲ ಕಳೆದೊಂದು ವಾರದ ಹಿಂದೆ ಉಟ್ಟ ಬಟ್ಟೆಯಲ್ಲಿ ಮಂಜುನಾಥ್ ಕುಟುಂಬದ ಜೊತೆ ಬಂದಿದ್ದ ಮನುಜಾ ಹಿರಿಯರ ಸಮ್ಮುಖದಲ್ಲಿ ಜನವರಿ 26ನೇ ತಾರೀಖು ಮದುವೆ ಮಾಡಲಾಗಿತ್ತು. ಆ ನಂತರವೇ ನಡೆದಿದ್ದು ಮಹಾದೋಖಾ
ಮನುಜಾ ಪೋಷಕರಿಂದ ತಲಘಟ್ಟಪುರ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲು ಮಾಡಲಾಗಿದ್ದು ತಲಘಟ್ಟಪುರ ಠಾಣೆಯಲ್ಲಿ ತಾನು ಒಪ್ಪಿ ಮದುವೆಯಾಗಿರುವುದಾಗಿ ಹೇಳಿಕೆ ನೀಡಿದ್ದ ಮನುಜಾ ಆದ್ರೆ ಅಜ್ಜಿ ನೆಪ ಹೇಳಿ ಯುವತಿಯನ್ನು ಮನೆಗೆ ಕರೆದೊಯ್ದಿದ್ದ ಪೋಷಕರು ಮೂರು ದಿನದ ಬಳಿಕ ಮಾವ ಮಂಜುನಾಥ್ ಮನೆಗೆ ಬಂದ ಮನುಜಾ ಕಾಣೆಯಾಗಿದ್ದಾಳೆ
ಆದರೆ ಎಲ್ಲಿ ಹೋಗಿದ್ದಾಳೆಂದು ಎಲ್ಲರು ತಲೆಕೆಡಿಸಿಕೊಂಡಿದ್ದರೆ ಆಗಲೇ ಅವಳು ಮತ್ತೊಬ್ಬನ ಜೊತೆ ಜೂಟ್ ಆಗಿದ್ದಾಳೆ ಈ ಬಗ್ಗೆ ಗಂಡನಿಂದ ಸೂರ್ಯನಗರ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ನೀಡಿದ್ದರು ನಿಶಾಂತ್ ಎಂಬ ಯುವಕನ ಜೊತೆ ಠಾಣೆಗೆ ಹಾಜರ್ ಆಗಿ ನನಗೆ ಬೆದರಿಸಿ ಮಂಜುನಾಥ್ ಜೊತೆ ಮದುವೆ ಮಾಡಿಸಿದ್ದಾರೆಂದು ಹೇಳಿಕೆ ನೀಡಿದ ಯುವತಿ.
ನನಗೆ ಮಂಜುನಾಥ್ ಜೊತೆ ಮದುವೆ ಇಷ್ಟ ಇಲ್ಲ ನಾನು ಪೋಷಕರ ಜೊತೆ ಹೋಗುವುದಾಗಿ ಹೈಡ್ರಾಮಾ ಇತ್ತ ನನಗೆ ಯುವತಿಯಿಂದ ಅನ್ಯಾಯ ಆಗಿದೆ ಎಂದು ಮದುವೆಯಾಗಿದ್ದ ಮಂಜುನಾಥ್ ಗೋಳಾಟ
ಲವ್ , ಮ್ಯಾರೇಜ್ ಹೆಸರಲ್ಲಿ ವಂಚನೆ ಮಾಡಿದ್ದಾಳೆ ಎಂದು ಆಕ್ರೋಶ ನನಗೆ ನ್ಯಾಯ ಬೇಕು ಎಂದು ಠಾಣೆ ಮೆಟ್ಟಿಲೇರಿದ ಪತಿ ಮಂಜುನಾಥ್ ಮೂರ್ನಾಲ್ಕು ಮಂದಿ ಯುವಕರ ಜೊತೆ ಲವ್ ನಾಟಕ ಯುವಕರ ಜೊತೆ ರೀಲ್ಸ್ ಮಾಡಿ ಪೋಟೋ ತೆಗೆಸಿಕೊಂಡಿರೋ ಯುವತಿ ವಿಷಯ ತಿಳಿದು ಯುವತಿಯನ್ನ ಮದುವೆಯಾಗಿದ್ದ ಮಂಜುನಾಥ್ ಕುಟುಂಬಸ್ಥರ ಆಕ್ರೋಶ ಪೊಲೀಸ್ ಠಾಣೆ ಮುಂಭಾಗ ಮಂಜುನಾಥ್ ಕುಟುಂಬಸ್ಥರ ಗೋಳಾಟ..