ಬೆಂಗಳೂರು: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ರಾಜಗೋಪಾಲನಗರ ವಾರ್ಡ್ನಲ್ಲಿ (Rajagopalnagar Ward) ಅನ್ಯ ಪಕ್ಷದ ಹಲವು ಮುಖಂಡರು ಜೆಡಿಎಸ್ ಪಕ್ಷ ಸೇರ್ಪಡೆ ಆಗಿದ್ದಾರೆ. ಈ ವೇಳೆ ಪಕ್ಷದ ಶಾಲು ಹೊದಿಸಿ ಶಾಸಕರು ಬರಮಾಡಿಕೊಂಡು ಶುಭ ಹಾರೈಸಿದರು. ಇದೇ ವೇಳೆ ಮಾತನಾಡಿದ ಶಾಸಕರು, ಕಾಂಗ್ರೆಸ್ ಹಾಗೂ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ನೆಲ, ಜಲ, ಭಾಷೆಗೆ ಕಂಟಕ ಎದುರಾಗಲಿದೆ. ಹೀಗಾಗಿ ರಾಷ್ಟ್ರೀಯ ಪಕ್ಷಗಳನ್ನು ತೊಲಗಿಸಿ, ಜೆಡಿಎಸ್ ಬೆಂಬಲಿಸಿ. ಮಾಜಿ ಸಿಎಂ ಕುಮಾರಸ್ವಾಮಿ (Former CM Kumaraswamy) ಅವರು ಘೋಷಿಸಿರುವ ಪಂಚರತ್ನ ಯೋಜನೆಗಳನ್ನು ಜಾರಿಗೆ ತಂದು ಜನಸ್ನೇಹಿ ಆಡಳಿತ ನೀಡುತ್ತೇವೆ ಎಂದರು.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಮೊದಲಿನಿಂದಲೂ ಕೋಮುವಾದ ಸೃಷ್ಟಿಸಿ, ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತ ಬಂದಿವೆ. ಕುಮಾರಣ್ಣ ಮಾಡಿರುವ ಸಾಧನೆಗಳನ್ನು ಇಟ್ಟುಕೊಂಡು ಜನರ ಬಳಿ ಹೋಗಿ ಮತ ಕೇಳುತ್ತಾರೆ. ಈ ಬಾರಿ ನನ್ನನ್ನು ಗೆಲ್ಲಿಸಿದ ಬಳಿಕ ಕ್ಷೇತ್ರದ ಸಮಗ್ರ ಚಿತ್ರಣವನ್ನೇ ಬದಲಾಯಿಸುತ್ತೇನೆ ಎಂದು ಭರವಸೆ ನೀಡಿದರು. ಜೆಡಿಎಸ್ ಮುಖಂಡ ಜಯರಾಮ ನರಸಿಂಹ, ಸುರೇಶ್, ರುದ್ರೇಗೌಡ, ಬಿ.ಎನ್.ಜಗದೀಶ್, ಕಾರ್ಯಕರ್ತರು ಉಪಸ್ಥಿತರಿದ್ದರು.