ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಆಗಾಗ್ಗೆ ಮಳೆಯಾಗುತ್ತಿದ್ದು, ಮುಂದಿನ ಐದು ದಿನಗಳ ಕಾಲ ಮಳೆ ಮುಂದುವರಿಯಲಿದೆ. ಈ ವೇಳೆ ಎಷ್ಟು ಜಾಗರೂಕರಾಗಿದ್ದರೂ ಕಡಿಮೆಯೇ.. ಯಾಕೆಂದರೆ ಕೊಂಚ ಯಾಮಾರಿದರೂ ಅಪಾಯ ಕಟ್ಟಿಟ್ಟಬುತ್ತಿ.
ಹೌದು.. ಸಾಮಾನ್ಯವಾಗಿ ವರ್ಷದ ಮೊದಲ ಮಳೆ ತೀವ್ರ ಗಾಳಿ, ಗುಡುಗು, ಮಿಂಚಿನಿಂದ ಕೂಡಿರುತ್ತದೆ.
ಈ ಸಂದರ್ಭದಲ್ಲಿ ನೀವು ನಿಮ್ಮ ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯ. ಯಾಕೆಂದರೆ ಬಲವಾದ ಗಾಳಿ ಬೀಸಿದಾಗ ಮರ ಗಿಡಗಳು ಅಥವಾ ಅದರ ರೆಂಬೆ ಕೊಂಬೆಗಳು ಬೀಳುವ
ಸಾಧ್ಯತೆ ಇರುತ್ತದೆ. ಹೀಗಾಗಿ ಮಳೆ ಬಂದಾಗ ಮರ ಗಿಡಗಳ ಕೆಳಗೆ ನಿಲ್ಲುವುದನ್ನು ತಪ್ಪಿಸಬೇಕು
ಸಾಮಾನ್ಯವಾಗಿ ಮಳೆ ಬಂದಾಗ ಛತ್ರಿ ಒಂದು ಇದ್ದರೆ ಸಾಕು ಇನ್ನೇನು ಇಟ್ಟುಕೊಳ್ಳೋಣ ಅಂತ ನೀವು ಥಟ್ ಅಂತ ಹೇಳಿಬಿಡಬಹುದು. ಆದರೆ ಛತ್ರಿ ಜೋರಾಗಿ ಗಾಳಿ ಬೀಸಿದಾಗ ಹಾರಿ ಹೋಗುವ ಸಾಧ್ಯತೆ ಇದೆ. ಹೀಗಾಗಿ ಛತ್ರಿ ಬದಲಾಗಿ ಮಳೆ ಸಂದರ್ಭದಲ್ಲಿ ನೀವು ಏನೆಲ್ಲಾ ವಸ್ತುಗಳನ್ನು ನಿಮ್ಮೊಂದಿಗೆ ಇಷ್ಟುಕೊಳ್ಳಬಹುದು ಎಂದು ತಿಳಿಯೋಣ.
ರೇನ್ ಕೋಟ್ ಮಳೆಗಾಲದಲ್ಲಿ ನಿಮ್ಮೊಂದಿಗೆ ರೇನ್ ಕೋಟ್ ಇಟ್ಟುಕೊಳ್ಳುವುದು ಸೂಕ್ತ. ಇದನ್ನು ಸುಲಭವಾಗಿ ಕೊಂಡೊಯ್ಯಬಹುದು. ಜೊತೆಗೆ ಸುಲಭವಾಗಿ ಬಳಸಬಹುದಾಗಿದೆ.
ಅಡಿಯಿಂದ ಮುಡಿಯವರೆಗೆ ಈ ರೇನ್ ಕೋಟ್ ನಿಂದ ನಿಮ್ಮ ದೇಹವನ್ನು ಮಳೆ, ಗಾಳಿಯಿಂದ ರಕ್ಷಿಸಿಕೊಳ್ಳಬಹುದು. ಹೀಗಾಗಿ ವಾಹನ ಸವಾರರು, ಬಸ್ ಅಥವಾ ಕಾಲ್ನಡಿಗೆಯಲ್ಲಿ ಓಡಾಡುವವರು ಇದನ್ನು ಇಟ್ಟುಕೊಳ್ಳುವುದು ಒಳ್ಳೆಯದು.
2.ಬ್ಯಾಗ್ ಕವರ್ ಮಳೆಗಾಲದಲ್ಲಿ ನೀವು ಮಾತ್ರವಲ್ಲ ನಿಮ್ಮ ಬ್ಯಾಗ್ ಗಳ ರಕ್ಷಣೆ ಕೂಡ ಅಗತ್ಯವಾಗಿರುತ್ತದೆ. ಕೆಲಸಕ್ಕೆ ಹೋಗುವವರು ಲ್ಯಾಪ್ಟಾಪ್, ಮೊಬೈಲ್, ಪರ್ಸ್ ಹೊಂದಿರುವವರಿಗೆ ರೇನ್ ಕವರ್ ಅತ್ಯಗತ್ಯ. ಹೀಗಾಗಿ ಮಳೆ ಸಂದರ್ಭದಲ್ಲಿ ಒಂದು ಬ್ಯಾಗ್ ಅನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. 3. ಮಳೆಗಾಲದಲ್ಲಿ ಸೂಕ್ತವಾದ ಪಾದರಕ್ಷೆ ಮಳೆಗಾಲದಲ್ಲಿ ಸೂಕ್ತವಾದ ಪಾದರಕ್ಷೆಗಳನ್ನು ಬಳಸುವುದು ತುಂಬಾ ಮುಖ್ಯ. ಮಳೆ ಸಂದರ್ಭದಲ್ಲಿ ಕೆಸರು ಅಧಿಕ ನೀರಿನ ಹರಿವಿನಿಂದಾಗಿ ಕಾಲು ಜಾರುವ ಸಾಧ್ಯತೆ ಇರುತ್ತದೆ. ಹೀಗಾಗಿ ಜಾಗರೂಕರಾಗಿ ನಡೆಯಬೇಕು. ಮಳೆ ನೀರು ನಿಂತುಕೊಂಡ ಸ್ಥಳಗಳಲ್ಲಿ ಎಷ್ಟು ಹುಷಾರಾಗಿದ್ದರೂ ಕಡಿಮೆಯೇ.
3.ವಾಟರ್ ಪ್ರೂಫ್ ಕ್ಯಾಪ್ ಮಳೆಗಾಲದಲ್ಲಿ ನಿಮ್ಮೊಂದಿಗೆ ರೇನ್ ಕೋಟ್ ಇಟ್ಟುಕೊಳ್ಳುವುದು ಕಷ್ಟವಾದರೆ ವಾಟರ್ ಪ್ರೂಫ್ ಕ್ಯಾಪ್ ಇಟ್ಟುಕೊಳ್ಳಬಹುದು. ಇದರಿಂದ ನೀವು ನಿಮ್ಮನ್ನು
ಕೊಂಚ ಮಟ್ಟಿಗೆ ರಕ್ಷಣೆ ಮಾಡಿಕೊಳ್ಳಬಹುದು. ವಾಟರ್ ಪ್ರೂಫ್ ಕ್ಯಾಪ್ ಬಳಕೆಯಿಂದ ನಿಮ್ಮ ತಲೆ ಒದ್ದೆಯಾಗುವುದನ್ನು ತಡೆಯಬಹುದು.
ಮಾಸ್ಕ್ ಮಳೆಗಾಲದಲ್ಲಿ ಆರೋಗ್ಯ ಹಾಳಾಗುವುದು ಹೆಚ್ಚು. ಜ್ವರ, ಶೀತ, ಕೆಮ್ಮು ಇಂತೆಲ್ಲಾ ಕಾಯಿಲೆಗಳು ಬಹುಬೇಗ ಬಂದುಬಿಡುತ್ತವೆ. ಹೀಗಾಗಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ನೀಔಉ ಜಾಗೃತಿ ವಹಿಸಬೇಕು. ಇದಕ್ಕಾಗಿ ನಿಮ್ಮೊಂದಿಗೆ ಮಾಸ್ಕ್ ಇಟ್ಟುಕೊಳ್ಳುವುದು ಉತ್ತಮ. ಇದರಿಂದ ಮಳೆಗಾಲದಲ್ಲಿ ಹರಡುವ ಕಾಯಿಲೆಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು.5.ವಿಕ್ಸ್ ಮಳೆಗಾಲದಲ್ಲಿ ಇದ್ದಕ್ಕಿದ್ದಂತೆ ಮೂಗು ಕಟ್ಟುವುದು, ಮೈ-ಕೈ ನೋವಾಗುವುದು ಕಾಣಿಸಿಕೊಳ್ಳುತ್ತದೆ. ಇದನ್ನು ಹಾಗೇ ಬಿಟ್ಟರೆ ಆರೋಗ್ಯ ಸಮಸ್ಯೆ ಗಂಭೀರವಾಗಬಹುದು. ಹೀಗಾಗಿ ನಿಮ್ಮೊಂದಿಗೆ ವಿಕ್ಸ್, Pain ಇದ್ದರೆ ಒಳ್ಳೆಯದು. ನಿಮಗೆ ಮೂಗು ಕಟ್ಟುವ ಅನುಭವವಾದಾಗ ನೀವು ವಿಕ್ಸ ಬಳಸಬಹುದು. ಹೀಗೆ