ಕಲಘಟಗಿ: ಬಿಜೆಪಿಯ ಬೆಲೆ ಏರಿಕೆ ನೀತಿಯಿಂದ ಬೇಸತ್ತು ರಾಜ್ಯದಲ್ಲಿ ಈಗ ಕಾಂಗ್ರೆಸ್ ಪಕ್ಷದ ಪರ ಜನರು ಒಲವು ತೋರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಂತೋಷ್ ಲಾಡ್ ಹೇಳಿದರು. ತಾಲ್ಲೂಕಿನ ಮಡಕಿಹೊನ್ನಳ್ಳಿ ಗ್ರಾಮದ ತಮ್ಮ ಅಮೃತ ನಿವಾಸದಲ್ಲಿ ಸೋಮವಾರ ರಾತ್ರಿ ತಾಲ್ಲೂಕಿನ ವಿವಿಧ ಗ್ರಾಮಗಳ ನೂರಾರು ಮುಖಂಡರು ಬಿಜೆಪಿ ತೊರೆದು ಲಾಡ್ ರವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದವರಿಗೆ ಶಾಲು ಹಾಕಿ ಬರಮಾಡಿಕೊಂಡು ಮಾತನಾಡಿದರು.
ಕ್ಷೇತ್ರದ ಮನಸೂರ, ಮಿಶ್ರಿಕೋಟಿ, ಹಿರೇಹೊನ್ನಳ್ಳಿ,ಜಿ ಬಸವನಕೊಪ್ಪ,ತಂಬೂರ, ಬಮಿಗಟ್ಟಿ, ಬೆಲವಂತರ, ತಾವರಗೇರಿ, ಜಿನ್ನೂರ, ನೆಲ್ಲಿಹರವಿ ಇನ್ನು ಹಲವು ಗ್ರಾಮಗಳ ನೂರಾರು ಕಾರ್ಯಕರ್ತರು, ಮುಖಂಡರು ಕಾಂಗ್ರೆಸ್ ಗೆ ಸೇರ್ಪಡೆಗೊಂಡರು. ಬಿಜೆಪಿ ಪಕ್ಷದವರು ಸಾಮಾನ್ಯ ಜನರ,ರೈತರ ದ್ವನಿಯಾಗದೆ ಅದಾನಿ ಅಂಬಾನಿ ಇತರೆ ಬಂಡವಾಳ ಶಾಹಿಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದವರೆಗೆ ಬಡವರ ಕಷ್ಟ ಏನು ಎಂಬುದು ತಿಳಿಯುತ್ತಿಲ್ಲ ಎಂದರು.
ನಾನು ಅಧಿಕಾರದಲ್ಲಿ ಇರದಿದ್ದರೂ ಎರಡು ವರ್ಷಗಳಿಂದ ಮತ ಕ್ಷೇತ್ರದಲ್ಲಿ ಹಲವು ಜನಪರ ಯೋಜನೆ ಮಾಡಿದ್ದು ಇಟ್ಟುಕೊಂಡು ಮತ ಕೇಳುತ್ತಿದ್ದೇನೆ ಜನರು ನನಗೆ ಪ್ರಚಾರದ ಸಮಯದಲ್ಲಿ ಉತ್ತಮ ಜನಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದರು. ಎಸ್. ಆರ್ ಪಾಟೀಲ, ಮಂಜುನಾಥ ಮುರಳ್ಳಿ, ನರೇಶ ಮಲೆನಾಡು, ಹರಿಶಂಕರ ಮಠದ, ಸೋಮಶೇಖರ ಬೆನ್ನೂರ, ಆನಂದ ಕಲಾಲ,ಬಾಬು ಅಂಚಟಗೇರಿ,ಕುಮಾರ ಖಂಡೇಕರ,ಬಾಳು ಖಾನಾಪುರ,ಗಂಗಾಧರ ಚಿಕ್ಕಮಠ, ಅಜ್ಮತ್ ಜಾಗೀರ್ದಾರ, ಬಾಬಾಜಾನ್ ತೇರಗಾಂವ, ಲಿಂಗರಡ್ಡಿ ನಡುವಿನಮನಿ, ಗುರು ಬೆಂಗೇರಿ, ಶಿವಲಿಂಗ ಮುಗಣ್ಣವರ ಇತರರು ಇದ್ದರು.
ಕಲ್ಮೇಶ ಮಂಡ್ಯಾಳ ಹುಬ್ಬಳ್ಳಿ