ಬೆಂಗಳೂರು:-ರಾಜಧಾನಿ ಬೆಂಗಳೂರಿನ ರಾಜಾಜಿನಗರದ ಆರನೇ ಬ್ಲಾಕ್ ನಲ್ಲಿ, ಕಳೆದ ಒಂದು ವರ್ಷದಿಂದ ಸರಿಯಾಗಿ ಕುಡಿಯಲು ನೀರು ಬರ್ತಿಲ್ಲ. ಈ ಹಿನ್ನೆಲೆಯಲ್ಲಿ ನಿನ್ನೆ ಸ್ಥಳೀಯ ನಿವಾಸಿಗಳು, ಮಹಿಳೆಯರು, ಮಕ್ಕಳು ಖಾಲಿ ಬಿಂದಿಗೆ, ಬಕೀಟ್ಗಳನ್ನಿಡಿದು ಬೇಕೆ ಬೇಕು ನೀರು ಬೇಕು ಎಂದು ಧಿಕ್ಕಾರ ಕೂಗಿ ತಮ್ಮ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏರಿಯಾದ ಯಾವ ಮನೆಯ ವಾಟರ್ ಸಂಪ್ ನೋಡಿದ್ರು ಖಾಲಿ ಖಾಲಿಯಾಗಿದೆ. ಇಡೀ ಏರಿಯಾಗೆ ಎರಡೋ, ಮೂರೋ ಬೋರ್ ವೆಲ್ ಗಳಿವೆ. ಆದರೆ ಯಾವ ಬೋರ್ ವೆಲ್ ನಲ್ಲೂ ಸರಿಯಾಗಿ ನೀರು ಬರೋದಿಲ್ಲ. ಈ ಏರಿಯಾಗೆ ಕಾವೇರಿ ನೀರು ಬಂದ್ರು ಅದು ಐದು ನಿಮಿಷ ಕೂಡ ಬರಲ್ಲ. ನೀರು ಬಂದ್ರು ಕೊಳಚೆ ನೀರು ಮಿಕ್ಸ್ ಆಗಿ ಬರ್ತಿದೆ, ಈ ಬಗ್ಗೆ ಜಲಮಂಡಳಿ ಅಧಿಕಾರಿಗಳಿಗೆ ದೂರು ನೀಡಿದ್ರು ಸಮಸ್ಯೆ ಮಾತ್ರ ಬಗೆಹರಿತಿಲ್ಲ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಐದು ರುಪಾಯಿ ಕಾಯಿನ್ ನೀರು ತಂದು ವಾಷ್ ರೂಮ್ ಗೆ ಹೋಗುವ ದುಸ್ಥಿತಿ ಬಂದಿದೆ. ಸ್ನಾನ ಮಾಡಲು ಆಗ್ತಿಲ್ಲ, ಕುಡಿಯಲು ನೀರಿಲ್ಲ ಅಂತ ಹೇಳುವುದಕ್ಕೂ ಆಗಲ್ಲ, ಅಷ್ಟು ಸಮಸ್ಯೆ ಇದೆ ಎಂದು ಏರಿಯಾ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಏರಿಯಾದ ಮನೆಗಳಲ್ಲಿ ಇರುವುದು ಸಣ್ಣದಾದ ವಾಟರ್ ಟ್ಯಾಂಕ್ಗಳು, ಕುಡಿಯಲು ನೀರು ಬೇಕು ಅಂತ ವಾಟರ್ ಟ್ಯಾಂಕರ್ ಬುಕ್ ಮಾಡಿದ್ರೆ ಅರ್ಧಂಬರ್ದ ನೀರು ಹಾಕಿ ಫುಲ್ ಅಮೌಂಟ್ ತೆಗೆದುಕೊಂಡು ಹೋಗ್ತಾರೆ.
ಆಫ್ ಚಾರ್ಜ್ ತೆಗೆದುಕೊಳ್ಳಿ ಎಂದರೆ ಕಿರಿಕ್ ಮಾಡ್ತಾರೆ ಎಂದು ಇಲ್ಲಿನ ಜನ ಅಳಲು ತೋಡಿಕೊಂಡಿದ್ದಾರೆ.