ದುಡಿಯುವ ಕಾಲದಲ್ಲಿ ಮಾಡುವ ಸಣ್ಣ ಹೂಡಿಕೆಗಳು ವೃದ್ದಾಪ್ಯದಲ್ಲಿ ನಿಶ್ಚಿತ ಆದಾಯವನ್ನು ಪಡೆಯಲು ತುಂಬಾ ಸಹಾಯಕವಾಗುತ್ತದೆ. ಭಾರತವು ಮೂಲತಃ ಕೃಷಿ ಪ್ರಧಾನ ದೇಶ. ಹಾಗಾಗಿ, ದೇಶದ ಬಹುಪಾಲು ಮಂದಿ ಕೃಷಿಯನ್ನೇ ಅವಲಂಬಿಸಿದ್ದಾರೆ. ಹಾಗಾಗಿ, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವೃದ್ಧಾಪ್ಯದಲ್ಲಿ ಜೀವನೋಪಾಯದ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಪಿಎಂ ಕಿಸಾನ್ ಮಾನಧನ್ ಯೋಜನೆಯನ್ನು ಪ್ರಾರಂಭಿಸಿದೆ.
ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ಅರ್ಹ ಫಲಾನುಭವಿಗಳಿಗೆ ತಿಂಗಳಿಗೆ 3000 ರೂ. ಸಹಾಯಧನ ದೊರೆಯುತ್ತದೆ.
ದೇಶದ ರೈತಾಪಿ ವರ್ಗದ ಜನರಿಗೆ ವೃದ್ದಾಪ್ಯದಲ್ಲಿ ಆರ್ಥಿಕ ನೆರವನ್ನು ನೀಡುವ ನಿಟ್ಟಿನಲ್ಲಿ 2019 ರಲ್ಲಿ ಪ್ರಧಾನಮಂತ್ರಿ ಮಾನಧನ್ ಯೋಜನೆಯನ್ನು ಕೇಂದ್ರ ಸರ್ಕಾರ ಪರಿಚಯಿಸಿತು. ಈ ಯೋಜನೆಯಲ್ಲಿ ಅರ್ಹ ವೃದ್ಧ ರೈತರಿಗೆ ಮಾಸಿಕ 3000 ರೂ.ಗಳ ಪಿಂಚಣಿಯನ್ನು ನೀಡಲಾಗುತ್ತದೆ. ಇದರ ಫಲಾನುಭವಿಯಾಗಲು ಯಾರು ಅರ್ಹರು, ಈ ಪಿಂಚಣಿ ಪಡೆಯಲು ಏನು ಮಾಡಬೇಕು ಎಂಬ ಇತ್ಯಾದಿ ಮಾಹಿತಿ ಇಲ್ಲಿದೆ.
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ಬುಕ್
- ವಿಳಾಸ ಗುರುತಿನ ಚೀಟಿ
- ಮೊಬೈಲ್ ಸಂಖ್ಯೆ
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ.
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ರೈತರು ಕೆಳಗಿನ ಸರಳ ಹಂತಗಳನ್ನು ಅನುಸರಿಸಿ ಸುಲಭವಾಗಿ ಇದರ ಫಲಾನುಭವಿಯಾಗಬಹುದು.
- ಮೊದಲಿಗೆ maandhan.in ವೆಬ್ಸೈಟ್ ಗೆ ಭೇಟಿ ನೀಡಿ, ಅಲ್ಲಿ ರಿಜಿಸ್ಟರ್ ಆಯ್ಕೆಯನ್ನು ಆರಿಸಿ.
- ಹೊಸ ಪುಟದಲ್ಲಿ ನಿಗದಿತ ಜಾಗದಲ್ಲಿ ಇಮ್ಮ ಮೊಬೈಲ್ ಸಂಖ್ಯೆ ನಮೂದಿಸಿ ಕ್ಯಾಪ್ಚಾ ಕೋಡ್ ನಮೂದಿಸಿ. ಇದರಲ್ಲಿ ಓಟಿಪಿ ಕಳುಹಿಸಿ ಆಯ್ಕೆಯನ್ನು ಕ್ಲಿಕ್ ಮಾಡಿ.
- ಓಟಿಪಿ ನಮೂದಿಸಿ ಸಲ್ಲಿಸಿದ ನಂತರ ಅರ್ಜಿ ತೆರೆಯುತ್ತದೆ.
- ಅರ್ಜಿಯಲ್ಲಿ ಅಗತ್ಯ ಮಾಹಿತಿಗಳನ್ನು ನಮೂದಿಸಿ ಒಮ್ಮೆ ಮಾಹಿತಿಯನ್ನು ಪರಿಶೀಲಿಸಿ ಬಳಿಕ ಸಲ್ಲಿಸಿ.
- ಪಿಎಂ ಕಿಸಾನ್ ಮಾನಧನ್ ಯೋಜನೆ ಪ್ರಮುಖವಾಗಿ ಸಣ್ಣ ಮತ್ತು ಅತಿಸಣ್ಣ ಭೂಮಿ ಹೊಂದಿರುವ ಅರ್ಥಾತ್ 2 ಹೆಕ್ಟೇರ್ ಗಿಂತಲೂ ಕಡಿಮೆ ಜಾಮೀನು ಹೊಂದಿರುವ ರೈತರಿಗಾಗಿ ಆರಂಭಿಸಿರುವ ಯೋಜನೆ.