ಅವರದು ಮೂರು ವರ್ಷದ ಪರಸ್ಪರ ಲವ್..ಅದೇಕೋ ಏನೋ ಪ್ರೇಯಸಿ ಪ್ರಿಯಕರನ ನಡೆತೆ ಸರಿಯಿಲ್ಲವೆಂದು ಮದುವೆಗೆ ನಿರಾಕರಿಸಿದ್ದಾಳೆ.. ಆದ್ರೆ ಪ್ರಿಯಕರ ಮಾತ್ರ ನೀನೆ ಬೇಕು ಅಂತ ಪ್ರೇಯಸಿಯ ಬೆನ್ನುಬಿದ್ದಿದ್ನಂತೆ. ಆದ್ರೀಗ ಪ್ರಿಯಕರ ಆಸ್ಪತ್ರೆ ಬೆಡ್ ಮೇಲೆ ಸಾವು ಬದುಕಿನ ಮಧ್ಯೆ ಹೋರಾಟ ನಡೆಸ್ತಿದ್ದಾನೆ.
ಪ್ರೇಯಿಸಿ ಮನೆಗೆ ಹೋಗಿದ್ದ ವೇಳೆ ಪ್ರಿಯಕರನ ಮೇಲೆ ಪೆಟ್ರೋಲ್ ಎರಚಿ ಕೊಲೆಗೆ ಯತ್ನಿಸಿದ್ದಾರೆ ಅಂತ ಪ್ರಿಯಕರನ ಕುಟುಂಬಸ್ಥರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಅಷ್ಟಕ್ಕೂ ಅಂದು ಪ್ರೇಯಿಸಿ ಮನೆಯಲ್ಲಿ ನಡೆದಿದ್ದೇನು ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್..
ಹೀಗೆ ಬೆಡ್ ಮೇಲೆ ಸಾವು ಬದುಕಿನ ಮಧ್ಯೆ ಹೋರಾಡ್ತಿರೋ ಪ್ರಿಯಕರ. ಎರಡು ಕುಟುಂಬಗಳಿಂದ ಕೊಲೆ ಯತ್ನದ ಆರೋಪ ಪ್ರತ್ಯಾರೋಪ…… ಹೌದು, ಇದು ವಿಜಯಪುರ ಜಿಲ್ಲೆಯಲ್ಲಿ ನಡೆದಿರೋ ವಿಲಕ್ಷಣ ಲವ್ ಸ್ಟೋರಿ….. ಜಿಲ್ಲೆಯ ಮುದ್ದೇಬಿಹಾಳ ಗ್ರಾಮದ ಐಶ್ವರ್ಯ ಹಾಗೂ ಢವಳಗಿ ಗ್ರಾಮದ ರಾಹುಲ್ ಬಿರಾದಾರ ಮೊದ ಮೊದಲು ಮೂರು ವರ್ಷ ಲವ್ ಮಾಡಿದ್ದಾರೆ. ಇವರಿಬ್ಬರ ಲವ್ ವಿಚಾರ ಇಬ್ಬರ ಮನೆಯವರಿಗೂ ಗೊತ್ತಾಗಿದೆ. ಆಗ ಮದುವೆ ಮಾಡುವ ವಿಚಾರವಾಗಿ ಕಿರಿಕ್ ನಡೆದಿದೆ.