ಫಾಸ್ಟ್ಟ್ಯಾಗ್ಗೆ ಸಂಬಂಧಿಸಿದಂತೆ ಕೇಂದ್ರ ಸಾರಿಗೆ ಸಚಿವಾಲಯವು ಬಿಗ್ ಅಪ್ಡೇಟ್ವೊಂದನ್ನು ನೀಡಿದೆ.
ಜನವರಿ 31ರ ಒಳಗಾಗಿ ಫಾಸ್ಟ್ಟ್ಯಾಗ್ನ ಕೆವೈಸಿ ಮಾಡಿಸದೇ ಇದ್ದರೆ, ಫಾಸ್ಟ್ಟ್ಯಾಗ್ಗಳನ್ನು ನಿಷ್ಕ್ರಿಯಗೊಳಿಸಲಾಗುವುದು
ಅಥವಾ ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಸಿದೆ.
ಈಗಾಗಲೇ ನಿಮ್ಮ ಫಾಸ್ಟ್ಟ್ಯಾಗ್ನಲ್ಲಿ ಹಣ ಜಮೆ ಇದ್ದರೂ ಸಹ ಕೆ.ವೈ.ಸಿ ಮಾಡಿಸುವುದು ಕಡ್ಡಾಯವಾಗಿದೆ.
ವಾಹನ ಬಳಸುವವರು ಒಂದು ವಾಹನಕ್ಕೆ ಒಂದೇ ಫಾಸ್ಟ್ಟ್ಯಾಗ್ ಬಳಸಬೇಕು ಎಂದೂ ರಸ್ತೆ ಸಾರಿಗೆ ಸಚಿವಾಲಯ ಸೂಚಿಸಿದೆ.