ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಕನ್ನಡ ಸಂಘದ ಅವರಣದಲ್ಲಿ ಬಿಬಿಎಂಪಿ ನೌಕರರ ಕನ್ನಡ ಸಂಘದ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಗೊಂಡ ಸಾಯಿ ಶಂಕರ್ ಅವರಿಗೆ ಪದಗ್ರಹಣ ಸಮಾರಂಭ ಜರುಗಿದೆ. ಇದೇ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಎ ಅಮೃತ್ ರಾಜ್ ಹಾಗೂ ಗೌರವಾಧ್ಯಕ್ಷರಾದ ಹೆಚ್.ವಿ.ಅಶ್ವಥ್ ರವರು ಕನ್ನಡ ಸಂಘದ ನೂತನವಾಗಿ ಆಯ್ಕೆಯಾದ ಸಾಯಿಶಂಕರ್ ರವರಿಗೆ ಶುಭಾ ಕೋರಿದರು.
ಈ ವೇಳೆ ಎ.ಅಮೃತ್ ರಾಜ್ ಮಾತನಾಡಿ, ನೌಕರರ ಕ್ಷೇಮಾಭಿವೃದ್ದಿ ಸಂಘ ಮತ್ತು ಬಿಬಿಎಂಪಿ ಕನ್ನಡ ನೌಕರರ ಸಂಘ ಸಹೋದರ ಸಂಸ್ಥೆಯಾಗಿದೆ. ನಾಡು, ನುಡಿ ಉಳಿಸಲು ಬೆಳಸಲು ಮತ್ತು ನೌಕರರ ಹಿತರಕ್ಷಣೆಗಾಗಿ ಎರಡು ಸಂಘಗಳು ಸಹಭಾಗಿತ್ವದಲ್ಲಿ ಶ್ರಮಿಸಲಿದೆ ಎಂದು ಹೇಳಿದರು. ಬಳಿಕ ನೂತನ ಅಧ್ಯಕ್ಷರಾದ ಸಾಯಿಶಂಕರ್ ಮಾತನಾಡಿ, ಬಿಬಿಎಂಪಿ ಸಂಪೂರ್ಣ ಆಡಳಿತ ಕನ್ನಡ ಭಾಷೆಯಲ್ಲಿ ನಡೆಯುತ್ತಿದೆ. ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿ ಲಭಿಸಿದೆ ಮತ್ತು ಕನ್ನಡ ಬಾಷೆ ಬರೆಯಲು,ಮಾತನಾಡಲು ಸುಂದರ ಭಾಷೆಯಂದು ವಿಶ್ವ ಖ್ಯಾತಿ ಪಡೆದಿದೆ ಎಂದು ಹೇಳಿದರು.