ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಳವಾಗಿದ್ದು, ಇನ್ನು ಮೂರ್ನಾಲ್ಕು ದಿನಗಳು ಇದೇ ರೀತಿ ಹವಾಮಾನ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ
ಸಿಲಿಕಾನ್ ಸಿಟಿಯಲ್ಲಿ ಮಳೆಗಾಲದಲ್ಲೂ ಬೇಸಿಗೆ ಅನುಭವವಾಗುತ್ತಿದ್ದು, ನಗರದಲ್ಲಿ ಬಿಸಿಲಿನ ಗರಿಷ್ಠ ಉಷ್ಣಾಂಶ 32 ಡಿಗ್ರಿಯವರೆಗೂ ದಾಟಿದೆ.
ಇನ್ನು ಬಿಸಿಲಿನ ಜೊತೆಗೆ ಬಿಸಿಗಾಳಿಯ ಅನುಭವವು ಆಗುತ್ತಿದ್ದು, ಈ ಬಿಸಿಲಿನಿಂದ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರಲಿದೆ. ಸಧ್ಯ ಹವಾಮಾನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದ್ದು, ಬೆಳಗ್ಗಿನ ಜಾವದ ವೇಳೆ ಚಳಿಯ ಅನುಭವ, ಮಧ್ಯಾಹ್ನ ಬಿಸಿಲಿನ ಅನುಭವ ಸಂಜೆಯಾಗುತ್ತಿದ್ದಂತೆ ಮಳೆಯ ವಾತಾವರಣ ಕಂಡುಬರುತ್ತಿದೆ.
ಇದೇ ವಾತಾವರಣ ಇನ್ನು ಒಂದು ವಾರ ಕಂಡುಬರಲಿದ್ದು, ಮಕ್ಕಳನ್ನ ಮಧ್ಯಾಹ್ನದ ವೇಳೆ ಬಿಸಿಲಿಗೆ ಬಿಡದಂತೆ ಎಚ್ಚರವಹಿಸಲು ಹವಾಮಾನ ಇಲಾಖೆ ತಜ್ಞರು ಹೇಳ್ತಿದ್ದಾರೆ.