ಬೆಂಗಳೂರು:- ವಿದ್ಯುತ್ ಅವಘಡದಿಂದ ಕಳೆದ 2 ವರ್ಷದಲ್ಲಿ ರಾಜ್ಯದಲ್ಲಿ ಒಟ್ಟು 290 ಮಂದಿ ಮೃತಪಟ್ಟಿದ್ದು, ಈ ಪೈಕಿ ಬೆಂಗಳೂರು ನಗರದಲ್ಲಿಯೇ ಬರೋಬ್ಬರಿ 42 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ
ಕಳೆದ ಐದು ವರ್ಷಗಳಿಂದ ವಿದ್ಯುತ್ ತಂತಿ ತಗುಲಿ ಮೃತ ಪಡುವವರ ಸಂಖ್ಯೆ ಹೆಚ್ಚಾಗಿದೆ. ಅದ್ರಲ್ಲಿ ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಒಟ್ಟು 290 ಮೃತರಾಗಿದ್ದು, ಬೆಂಗಳೂರಿನಲ್ಲಿಯೇ ಒಟ್ಟು 42 ಮಂದಿ ಮೃತಪಟ್ಟಿದ್ದಾರೆ. ಇನ್ಮು 290ರ ಪೈಕಿ 38 ಮಂದಿ ಪ್ರಾಣಾಪಾಯದಿಂದ ಪರಾರಿಯಾಗಿದ್ದಾರೆ. ಇದಲ್ಲದೇ ಸಿಲಿಕಾನ್ ಸಿಟಿಯಲ್ಲಿ ಬಿಡಾಡಿ ಧನಗಳ ಹಾವಳಿ ಹೆಚ್ಚಾಗಿದ್ದು, ಒಟ್ಟು 166 ಜಾನುವಾರುಗಳು ಅಸುನೀಗಿವೆ. ಇದಕ್ಕೆಲ್ಲ ಪ್ರಮುಖ ಕಾರಣಗಳು ಎಂದ್ರೆ ಅಧಿಕೃತವಾಗಿ ವಿದ್ಯುತ್ ಮಾರ್ಗಗಳ ಕೆಳಗೆ ಮನೆಗಳನ್ನ ನಿರ್ಮಾಣ ಮಾಡಿರುವುದು.
ಸಧ್ಯ ವಿದ್ಯುತ್ ಕೇಬಲ್ಗಳು ಹಾದು ಹೋಗಿರುವ ಒಟ್ಟು 7722 ಕಟ್ಟಡಗಳಿವೆ. ಈ ಕಟ್ಟಡಗಳ ಬೆಸ್ಕಾಂ ಇಲ್ಲಿಯವರೆಗೂ ಕ್ರಮಕ್ಕೆ ಮುಂದಾಗಿಲ್ಲ.
ಇನ್ನು ಸಧ್ಯ ಮೃತರಾಗಿರುವ 42 ಜನರ ಪೈಕಿ ಕೇವಲ 7 ಜನರಿಗೆ ಮಾತ್ರ ಪರಿಹಾರ ನೀಡಿದ್ದು, ಇನ್ನು 35 ಜನರಿಗೆ ಪರಿಹಾರವನ್ನೆ ನೀಡಿಲ್ಲ. ಹೀಗಾಗಿ ಸಾರ್ವಜನಿಕರೇ ವಿದ್ಯುತ್ ಕೇಬಲ್ಗಳು ಹಾದು ಹೋಗಿರುವಲ್ಲಿ ಎಚ್ಚರಿಕೆ ವಹಿಸಬೇಕಾಗಿದೆ. ಇನ್ನು ಈ ಕುರಿತಾಗಿ ಬೆಸ್ಕಾಂ ಅಧಿಕಾರಿಗಳನ್ನ ಪ್ರಶ್ನಿಸಿದ್ರೆ ಅಗತ್ಯ ಕ್ರಮ ತೆಗೆದುಕೊಳ್ತಾ ಇದ್ದೀವಿ. ಮಳೆಗಾಲಕ್ಕೆಂದೆ ಸ್ಪೆಷಲ್ ಟೀಮ್ ಇದ್ದು, ಯಾವುದೇ ಸಮಸ್ಯೆಯಾಗದಂತೆ ಜಾಗೃತಿ ವಹಿಸುತ್ತೇವೆ ಅಂದು ತಿಳಿಸಿದ್ದಾರೆ.
ಇನ್ನು, ನಗರದೆಲ್ಲೆಡೆ ಅನಧಿಕೃತ ಕೇಬಲ್ಗಳ ಹಾವಳಿ ಜಾಸ್ತಿಯಾಗಿದೆ. ಈ ಕುರಿತಾಗಿ ಬೆಸ್ಕಾಂ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕಾಗಿದೆ.