ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದೀಪಾವಳಿ ಹಬ್ಬದ ಹಿನ್ನಲೆ ಪಟಾಕಿ ಸಿಡಿಸಿ ಗಾಯಗೊಂಡವರ ಸಂಖ್ಯೆ ಪ್ರತಿವರ್ಷಕ್ಕಿಂತ ಈ ಬಾರಿ ಹೆಚ್ಚಳವಾಗಿದೆ ಅದರಲ್ಲೂ ಮಕ್ಕಳೆ ಸಂಖ್ಯೆನೆ ಆಧಿಕವಾಗಿದೆ…
ಬೆಂಗಳೂರಿನ ಮಿಂಟೋ ,ಶಂಕರ್ ಮತ್ತು ನಾರಾಯಣ ಕಣ್ಣಿನ ಆಸ್ಪತ್ರೆಯಲ್ಲಿ ಇದುವರೆಗೂ 125ಕ್ಕೊ ಹೆಚ್ಚು ಕೇಸ್ ಗಳು ದಾಖಲಾಗಿವೆ. ಅದರಲ್ಲಿ ಮಿಂಟೋ ಅಸ್ಪತ್ರೆ ಒಂದರಲ್ಲೆ 36 ಕೇಸ್ ಪತ್ತೆಯಾಗಿದ್ದು ಅದರಲ್ಲಿ ಬಹುತೇಕ ಮಕ್ಕಳ ಸಂಖ್ಯೆನೆ ಆಧಿಕವಾಗಿದೆ ಅಂತ ಮಿಂಟೋ ಅಸ್ಪತ್ರೆ ನಿರ್ಧೇಶಕ ನಾಗರಾಜ್ ತಿಳಿಸಿದರು.
ಇನ್ನೂ ನಾರಾಯಣ ನೇತ್ರಾಲಯದಲ್ಲಿ ಇದುವರೆಗೂ ಒಟ್ಟು 51ಕ್ಕೊ ಕೇಸ್ ಗಳು ದಾಖಲಾಗಿದ್ದರೆ
ಶಂಕರ್ ಅಸ್ಪತ್ರೆಯಲ್ಲಿ 42 ಕ್ಕೊ ಹೆಚ್ಚು ಕೇಸ್ ಗಳು ದಾಖಲಾಗಿವೆ. ಇದರಲ್ಲಿ ಮೂವರಿಗೆ ಸಂಪೂರ್ಣ ಕಣ್ಣಿನದೃಷ್ಟಿ ಕಳೆದುಕೊಂಡಿದ್ದಾರೆ .5 ಜನರಿಗೆ ಭಾಗಶಹ ದೃಷ್ಠಿದೋಷ ಉಂಟಾಗಿದೆ. ಇನ್ನ 45 ಮಂದಿಗೆ ಗಂಭೀರ ಗಾಯಗಳಾಗಿವೆ.
ಇನ್ನು ಮಂಡ್ಯದ ಮಳವಳ್ಳಿಯ 6ನೇ ತರಗತಿ ಯುವಕ ಚೇತನ್ ತಮ್ಮ ಮನೆ ಸಮೀಪದ ದೇವಸ್ಥಾನದಲ್ಲಿ ಇತರ ಸ್ನೇಹಿತರೊಂದಿಗೆ ಸುರ್ ಸುರ್ ಪಟಾಕಿ ಹಾರಿಸುವಾಗ ಎರಡು ಕಣ್ಣಿಗೂ ಗಂಭೀರವಾಗಿ ಗಾಯಗೊಂಡಿದ್ದು ಅತನಿಗೆ ಮಿಂಟೋ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ಒಟ್ಟಿನಲ್ಲಿ ಈ ಬಾರಿ ಸಿಲಿಕಾನ್ ಸಿಟಿಯಲ್ಲಿ ದೀಪಾವಳಿ ಹಬ್ಬದಂದು ಪಟಾಕಿ ಸಿಡಿಸಿ ಗಾಯಗೊಂಡವರ ಸಂಖ್ಯೆ ಹೆಚ್ಚಳವಾಗಿದ್ದು ಅದರಲ್ಲೂ ಮಕ್ಕಳ ಸಂಖ್ಯೆನೇ ಅಧಿಕವಾಗಿದೆ.