ಶ್ರಾವಣ ಮಾಸ ಬಂದ ಹಿನ್ನಲೆ ಶುಭ ಕಾರ್ಯಗಳು ಆರಂಭವಾಗಿದ್ದು ರೈತರು ಬೆಳೆದ ಹೂಗಳಿಗೆ ಭಾರಿ ಡಿಮ್ಯಾಂಡ್ ಬಂದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಹೂ ಬೆಳೆಗಾರರು ದಿಲ್ ಖುಷ್ ಆಗಿದ್ದಾರೆ. ಕೆ.ಜಿ. ಸೇವಂತಿ ಹೂ ಬೆಲೆ 200 ರೂ, ಕೆ.ಜಿ. ರೋಜ್ ಹೂ ಗೆ 250 ರೂ, ಕೆ.ಜಿ. ಚೆಂಡು ಹೂ 60 ರೂ, ಮ್ಯಾರಿಗೋಲ್ಡ್ 150 ರೂ, ಕೆ.ಜಿ.
ಕನಕಾಂಬರಗೆ ಸಾವಿರ ರೂ. ಬೆಲೆ ಇದೆ. ಇದ್ರಿಂದ ರೈತರು ವರ್ಷದ 365 ದಿನಗಳು ಶ್ರಾವಣ ಮಾಸದಿಂದ ಕೂಡಿರಲಿ ಅಂತ ಬೇಡಿಕೊಳುತ್ತಿದ್ದಾರೆ.
ತರಹೇವಾರಿ ಹೂ ಬೆಳೆಗೆ ಖ್ಯಾತಿಯಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಸ್ತುತ 15 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಹೂ ಬೆಳೆಯಲಾಗುತ್ತಿದೆ. ದ್ರಾಕ್ಷಿ, ಬಾಳೆ ಸೇರಿದಂತೆ ತರಕಾರಿ ಬೆಳೆ ಬದಲು ಈಗ ರೈತರು ಸುಲಭವಾಗಿ ಹಣ ಮಾಡುವ ಹೂ ಬೆಳೆಯುತ್ತ ಮುಖ ಮಾಡಿದ್ದಾರೆ.
ಇನ್ನು ಚಿಕ್ಕಬಳ್ಳಾಪುರದ ಹೂ ಮಾರುಕಟ್ಟೆಗೆ ಪ್ರತಿದಿನ ದೇಶದ ವಿವಿಧ ಮೂಲೆಗಳಿಂದ ದೊಡ್ಡ ದೊಡ್ಡ ವರ್ತಕರು ಆಗಮಿಸಿ ಹೂ ಕೊಂಡುಕೊಳ್ಳುತ್ತಿದ್ದಾರೆ.
ಆಶಾಡ ಕಳೆದು ಶ್ರಾವಣ ಬಂದಿದ್ದೆ ತಡ ಪ್ರೇಮಿಗಳು, ನವ ದಂಪತಿಗಳು ಸೇರಿದಂತೆ ರೈತರು, ವರ್ತಕರು, ವ್ಯಾಪಾರಿಗಳು ಸೇರಿದಂತೆ ಎಲ್ಲರಿಗೂ ಹೊಸ ಚೈತನ್ಯ ಮೂಡಿದೆ. ವ್ಯಾಪಾರ ವಹಿವಾಟುಗಳು ಜೋರಾಗಿ ಸಾಗಿದೆ. ಹೂ ಬೆಳೆದ ರೈತರಿಗಂತೂ ಎಲ್ಲಿಲ್ಲದ ಬೇಡಿಕೆ ಬಂದಿದೆ.