ಹುಬ್ಬಳ್ಳಿ:- ಕರ್ನಾಟಕದಲ್ಲಿ 2018ರಿಂದ 2023ರ ಅವಧಿಯಲ್ಲಿ ಒಟ್ಟು 1,331 ಮಕ್ಕಳನ್ನು ದತ್ತು ತೆಗೆದುಕೊಳ್ಳಲಾಗಿದ್ದು, ಈ ಪೈಕಿ 775 ಹೆಣ್ಣು ಮಕ್ಕಳನ್ನು ದತ್ತು ಪಡೆದಿದ್ದಾರೆ. ವಿದೇಶದಲ್ಲಿ ನೆಲೆಸಿರುವ ಪೋಷಕರು 103 ಹೆಣ್ಣು ಮಕ್ಕಳನ್ನು ದತ್ತು ಪಡೆದಿದ್ದಾರೆ. ಅಲ್ಲದೆ, ರಾಜ್ಯದ ದತ್ತು ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ತಜ್ಞರು ಹೇಳುವ ಪ್ರಕಾರ, ಈ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಮಕ್ಕಳೇ ಇರಲು ಪ್ರಮುಖ ಕಾರಣವೆಂದರೆ ಸಾಮಾಜಿಕ ಪೂರ್ವಾಗ್ರಹ ಮತ್ತು ಪೋಷಕರು ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳಿಗೆ ಆದ್ಯತೆ ಹೆಚ್ಚು ನೀಡುವುದು. ದತ್ತು ಸ್ವೀಕಾರದಲ್ಲಿ ದೇಶದಲ್ಲೇ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಮಹಾರಾಷ್ಟ್ರವು ದೇಶದಲ್ಲಿ ಅತಿ ಹೆಚ್ಚು ಮಕ್ಕಳನ್ನು ದತ್ತು ನೀಡಿದೆ. ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ನಂತರದ ಸ್ಥಾನದಲ್ಲಿದೆ.
ಮಕ್ಕಳ ದತ್ತು ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ ಪ್ರಕಾರ, 2018 ಮತ್ತು 2023 ರ ನಡುವೆ 18,177 ಮಕ್ಕಳು ಭಾರತ ಮತ್ತು ವಿದೇಶಗಳಲ್ಲಿ ಹೊಸ ಕುಟುಂಬವನ್ನು ಸೇರಿದ್ದಾರೆ. ಈ ಪೈಕಿ 10,600 ಹೆಣ್ಣು ಮಕ್ಕಳು ಹೊಸ ಕುಟುಂಬಕ್ಕೆ ಕಣ್ಣಾಗಿದ್ದಾರೆ