ಈ ಬಾರಿ ಬೇಸಿಗೆ ಆರಂಭವಾಗುತ್ತಿದಂತೆ ರಾಜ್ಯದಲ್ಲಿ ಬಿರು ಬಿಸಿಲು ಶುರುವಾಗಿದೆ. ಉರಿ ಬಿಸಿಲು ಜನರನ್ನು ಸುಡಲು ಆರಂಭಿಸಿದ್ರೆ. ಒಂದು ಕಡೆ ಬೇಸಿಗೆ ತಾಪದಿಂದ ಜನ ಬೇಸತ್ತು ಹೋಗಿದ್ರೆ ಮತ್ತೊಂದು ಕಡೆ ನಾನಾ ಕಾಯಿಲೆಯಿಂದ ಜನ ತತ್ತರಿಸಿ ಹೋಗಿದ್ದು ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.ಈ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ
ಹೌದು… ಈ ಬಾರಿ ಫೆಬ್ರವರಿಯಿಂದಲೇ ಸುಡುಬಿಸಿಲು ಶುರುವಾಗಿದ್ದು, ಜನ ಬೇಸತ್ತು ಹೋಗಿದ್ದಾರೆ. ಬೆಳ್ಳಗೆ 8 ಗಂಟೆಯಾದರೆ ಸಾಕು ಮನೆಯಿಂದ ಹೊರ ಬರಲು ಆಗದೇ ಜನ ತತ್ತರಿಸಿದ್ದು, ಸಾಮಾನ್ಯವಾಗಿ ಬೆಂಗಳೂರಿನಲ್ಲಿ 29ರಿಂದ 30ಡಿಗ್ರಿ ತಾಪಾಮಾನ ತಲುಪುತ್ತಿತ್ತು. ಆದರೆ ಈ ವರ್ಷ 36 ಡಿಗ್ರಿ ದಾಟಿದೆ ಹಾಗೂ ಉತ್ತರ ಕರ್ನಾಟಕದ ರಾಯಚೂರು, ಬೀದರ್ ಸೇರಿದಂತೆ ಹಲವು ಜಿಲ್ಲೆಗಳ ಉಷ್ಣಾಂಶ 46- 48 ಡಿಗ್ರಿ ದಾಟುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಉಷ್ಣಾಂಶ ಏರಿಕೆಯಾಗುವ ಸಾಧ್ಯತೆ ಇದೆ.
ಇನ್ನೂ… ಬೇಸಿಗೆ ಆರಂಭವಾಗುತ್ತಿದ್ದಂತೆ ಸಾಂಕ್ರಾಮಿಕ ರೋಗಗಳು ಜನರನ್ನು ಕಾಡಲು ಶುರು ಮಾಡಿದ್ದು ಆರೋಗ್ಯ ಇಲಾಖೆ ಹೈ ಆಲರ್ಟ್ ಆಗಿದೆ. ಹೌದು ಬೇಸಿಗೆ ಆರಂಭವಾಗುತ್ತಿದಂತೆ ಸಾಂಕ್ರಾಮಿಕ ರೋಗಗಳು ತಾ ಮುಂದು ನಾ ಮುಂದು ಅಂತಾ ಜನರನ್ನು ವಕ್ಕರಿಸಿಕ್ಕೊಳುತ್ತಿದೆ. ಡಿಹೈಡ್ರೇಷನ್, ಉಸಿರಾಟದ ಸಮಸ್ಯೆ , ಅತಿಸಾರ ರೋಗಗಳು ಸೇರಿದಂತೆ ನಾನಾ ರೀತಿಯ ಕಾಯಿಲೆಗಳು ಜನರನ್ನು ಕಾಡಲು ಶುರು ಮಾಡಿದ್ದು. ಆಸ್ಪತ್ರೆಗಳಲ್ಲಿ ಬೇಸಿಗೆ ರೋಗಳಿಂದ ಬಳಲುತ್ತಿರೋ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗಿದೆ. ಹೀಗಾಗಿ ಸಾರ್ವಜನಿಕರು ಆದಷ್ಟೂ ಆರೋಗ್ಯ ಬಗ್ಗೆ ಕಾಳಜಿ ವಹಿಸುವಂತೆ ಸಲಹಾ ಪತ್ರವನ್ನು ಆರೋಗ್ಯ ಇಲಾಖೆ ಹೊರಡಿಸಿದೆ.
ಬೇಸಿಗೆ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಜನರು ಮಾಡಬೇಕಾದದ್ದು…!
ಹೆಚ್ಚು ನೀರು ಕುಡಿಯುವಂತೆ ಸೂಚನೆ
ಬಾಯಾರಿಕೆ ಇಲ್ಲದಿದ್ದರೂ ಸಹ ಹೆಚ್ಚು ನೀರನ್ನು ಆಗಾಗ್ಗೆ ಸೇವಿಸಬೇಕು
ಪ್ರಯಾಣ ಮಾಡುವ ಸಮಯದಲ್ಲೂ ಕುಡಿಯಲು ನೀರನ್ನು ಜೊತೆಗೆ ತೆಗೆದುಕೊಂಡು ಹೋಗುವುದು ಅಗತ್ಯ
ತಿಳಿ ಬಣ್ಣದ, ಹತ್ತಿಯ ಬಟ್ಟೆಯನ್ನು ಧರಿಸುವುದು ಉತ್ತಮ.
ಬಿಸಿಲಿನಲ್ಲಿ ಹೊರ ಹೋಗುವ ಸಂದರ್ಭಗಳಲ್ಲಿ ಛತ್ರಿ, ಟೋಪಿ/ಹ್ಯಾಟ್, ಟವೆಲ್ಗಳನ್ನ ಕೊಂಡ್ಯೋಬೇಕು
ಸಾಧ್ಯವಾದಷ್ಟು ಮನೆಯಲ್ಲೇ ಇರಲು ಸೂಚನೆ
ಅವಶ್ಯಕತೆ ಇದ್ದಾಗ ಮಾತ್ರ ಮನೆಯಿಂದ ಹೊರಬರಲು ಸೂಚನೆ
ಬಿಸಿಲಿನಲ್ಲಿ ಅಂದರೆ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಹೊರಹೋಗುವುದನ್ನು ತಪ್ಪಿಸಬೇಕು
ಮಧ್ಯಾಹ್ನದ ಸಂದರ್ಭದಲ್ಲಿ ಶ್ರಮದಾಯಕ ಹೊರಾಂಗಣ ಚಟುವಟಿಕೆಗಳನ್ನು ಕೈಗೊಳ್ಳಬಾರದು
ಮಧ್ಯಪಾನ, ಟೀ, ಕಾಫಿ ಮತ್ತು ಕಾರ್ಬೊನೇಟೆಡ್ ಪಾನೀಯಗಳು ಅಥವಾ ಹೆಚ್ಚು ಸಕ್ಕರೆ ಅಂಶವನ್ನು ಹೊಂದಿದ ಪಾನೀಯಗಳಿಂದ ದೂರವಿರಿ
ಇಂತಹ ಪಾನೀಯಗಳು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ ಅಥವಾ ಹೊಟ್ಟೆ ನೋವನ್ನು ಉಂಟುಮಾಡುತ್ತವೆ
ಸಾಧ್ಯವಾದಷ್ಟು ಒಳಾಂಗಣದಲ್ಲಿ, ಉತ್ತಮ ಗಾಳಿ ತಂಪಾದ ಪ್ರದೇಶದಲ್ಲಿರಲೂ ಸೂಚನೆ
ನವಜಾತ ಶಿಶುಗಳು ಹಾಗೂ ಗರ್ಭಿಣಿಯರ ಬಗ್ಗೆ ಕಾಳಜಿವಹಿಸುವುದು
ಇನ್ನೂ ಮುಂದಿನ ದಿನಗಳಲ್ಲಿ ವಾತಾವರಣದ ತಾಪಮಾನ ಇನ್ನಷ್ಟು ಹೆಚ್ಚಳವಾಗುವ ಸಾದ್ಯತೆ ಇದ್ದು. ಜನರಲ್ಲಿ ಆತಂಕ ಹೆಚ್ಚಳವಾಗಲು ಶುರುವಾಗಿದೆ. ಇನ್ನೂ ಕಾಯಿಲೆಗಳ ಮಾತ್ರ ಜನರನ್ನು ಬೆಂಬಿಡದೆ ಕಾಡುತ್ತಿರುವುದು ವೈದ್ಯ ಲೋಕ ಕೂಡ ರೋಗಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಮುಂದಾಗಿದ್ದು.ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ ತಕ್ಷವೇ ವೈದ್ಯರ ಬಳಿ ತೆರಳಿ ಸೂಕ್ತ ರೀತಿಯ ಚಿಕಿತ್ಸೆ ಪಡೆಯುವಂತೆ ಸೂಚಿಸಿದ್ದಾರೆ
ಒಟ್ನಲ್ಲಿ ಬೇಸಿಗೆ ಬಿಸಿಲು ಮಾತ್ರ ಜನರನ್ನು ಹೈರಾಣು ಮಾಡಿದ್ದು ಆರೋಗ್ಯದ ಮೇಲೆ ತೀರ ಪರಿಣಾಮ ಬೀರುತ್ತಿದ್ದು. ಆರೋಗ್ಯ ಇಲಾಖೆ ಈ ಬಗ್ಗೆ ಹೈ ಆಲರ್ಟ್ ಆಗಿದೆ. ಇನ್ನು ಇಲಾಖೆ ಹಾಗೂ ವೈದ್ಯರು ಮಾತ್ರವಲ್ಲದೆ ಜನ ಸಾಮನ್ಯರು ಕೂಡ ಅದಷ್ಟೂ ಆರೋಗ್ಯ ಬಗ್ಗೆ ಕಾಳಜಿವಹಿಸಿಕೊಳ್ಳುವುದು ಒಳ್ಳೆದು.