ರಾಜ್ಯದ ಮಕ್ಕಳಲ್ಲಿ ಶೇ 20% ರಷ್ಟು ಬೊಜ್ಜಿನ ಸಮಸ್ಯೆ ಹೆಚ್ಚಿದೆ. ಮಕ್ಕಳಲ್ಲಿ ಹೆಚ್ಚಿದ ಅತಿಯಾದ ಬೊಜ್ಜು ಪ್ರೇರಿತ ಆಸ್ತಮಾ, ಕ್ಯಾನ್ಸರ್ ಗೂ ಕಾರಣವಾಗುತ್ತಿದೆ.
ಕೊವಿಡ್ ಬಳಿಕ ಮಕ್ಕಳಲ್ಲಿ ಅತಿಯಾದ ಬೊಜ್ಜು ಹೆಚ್ಚಾಗುತ್ತಿದೆ. ಮಕ್ಕಳ ಈ ಬೊಜ್ಜು ಸಾಲು ಸಾಲು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗ್ತಿದೆ. ಮಕ್ಕಳಲ್ಲಿ ಸೈಲೆಂಟ್ ಆಗಿ ಕ್ಯಾನ್ಸರ್ ಗೂ ಕಾರಣವಾಗ್ತಿದ್ದು ಮಕ್ಕಳ ಅನಾರೋಗ್ಯಕರ ಈ ಬೊಜ್ಜು ಬಗ್ಗೆ ವೈದ್ಯರು ಎಚ್ಚರಿಕೆ ನೀಡುತ್ತಿದ್ದಾರೆ. ಮಕ್ಕಳಲ್ಲಿ ಅನಾರೋಗ್ಯಕರ ಆಹಾರ ಪದ್ಧತಿ, ಅತಿಯಾದ ಜಂಕ್ ಪುಡ್ ಸೇವನೆ ಮತ್ತು ಅತಿಯಾದ ಮೊಬೈಲ್ ಬಳಕೆ, ಹೊರಾಗಂಣ ಆಟ ಕಡಿಮೆಯಿಂದ ಪುಟ್ಟ ಮಕ್ಕಳಲ್ಲಿ ಈ ಬೊಜ್ಜು ಹೆಚ್ಚಾಗಿ ಸ್ಥೂಲಕಾಯ ಪ್ರೇರಿತ ಆಸ್ತಮಾ ಹಾಗೂ ಕ್ಯಾನ್ಸರ್ಗೆ ಕಾರಣವಾಗುತ್ತಿದೆ. ಬೊಜ್ಜು ಪ್ರೇರಿತ ಅಸ್ತಮಾ ಹಾಗೂ ಕ್ಯಾನ್ಸರ್ ಮಕ್ಕಳ ಆರೋಗ್ಯಕ್ಕೆ ಕುತ್ತು ತರ್ತಿದೆ. ಹೀಗಾಗಿ ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಬಿ ಅಲರ್ಟ್ ಎಂದು ವೈದ್ಯರು ಹೆಚ್ಚರಿಸಿದ್ದಾರೆ.
ಕೊವಿಡ್ ನಂತರ ಬೊಜ್ಜು ಗಮನಾರ್ಹವಾಗಿ ಹೆಚ್ಚಾಗಿದೆ. ಕೊವಿಡ್ ಟೈಮ್ ನಲ್ಲಿನ ಜೀವನಶೈಲಿಯಿಂದ ಶೇ.40% ರಷ್ಟು ಅಸ್ತಮಾ ಪ್ರಕರಣಗಳು ಆನುವಂಶಿಕವಾಗಿದ್ದರೆ. ಇನ್ನುಳಿದಂತೆ ಸಿಟಿಯ ವಾಯುಮಾಲಿನ್ಯ ಹಾಗೂ ಆಹಾರ ಪದ್ಧತಿ ಮಕ್ಕಳ ಬೊಜ್ಜು ಹೆಚ್ಚಾಗಲು ಕಾರಣವಾಗುತ್ತಿದೆ. ಇನ್ನು 16 ವರ್ಷಕ್ಕಿಂತ ಕಿರಿಯ ಮಕ್ಕಳಲ್ಲಿಯೇ ಈ ಬೊಜ್ಜು ಹೆಚ್ಚಾಗುತ್ತಿದ್ದು ಬಾಲ್ಯದ ಈ ಬೊಜ್ಜು ಮಕ್ಕಳ ಟೈಪ್-2 ಡಯಾಬಿಟಿಸ್, ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಅಸ್ಥಿಸಂಧಿವಾತ, ಪರಿಧಮನಿಯ ಹೃದಯ ಕಾಯಿಲೆ, ಪಾರ್ಶ್ವವಾಯು, ಪಿತ್ತಕೋಶದ ಕಾಯಿಲೆ, ಉಸಿರಾಟದ ತೊಂದರೆ ಸೇರಿದಂತೆ ಕೆಲವು ಕ್ಯಾನ್ಸರ್ಗಳ ಅಪಾಯವನ್ನು ಎದುರಿಸಬಹುದು ಎಂದು ಕಿದ್ವಾಯಿ ಆಸ್ಪತ್ರೆ ಮಕ್ಕಳ ವಿಭಾಗದ ಕಾರ್ಡಿಯಾಲಜಿಸ್ಟ್ ಡಾ ಅರುಣ್ ತಿಳಿಸಿದರು