ಬೆಂಗಳೂರು: ಬೇಸಿಗೆ ಆರಂಭಕ್ಕೂ ಮುನ್ನವೇ ಬೆಂಗಳೂರಿನಲ್ಲಿ ಬಿಸಿಲಿನ ಝಳ ಹೆಚ್ಚಾಗಿದೆ. ರಾಜಧಾನಿಯಲ್ಲಿ ತಾಪಮಾನ ಹೆಚ್ಚಾಗಿದ್ದು, ನಾಲ್ಕು ವರ್ಷದ ದಾಖಲೆಯನ್ನು ಮುರಿದಿದೆ.
ಮಂಗಳವಾರ, ಬುಧವಾರ ಸಿಲಿಕಾನ್ ಸಿಟಿಯಲ್ಲಿ 36 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.ನಗರದಲ್ಲಿ 3.6 ಡಿಗ್ರಿ ಹೆಚ್ಚಿನ ಬಿಸಿಲು ಕಾಣಿಸಿಕೊಂಡಿದ್ದು, 2018 ರ ಬಳಿಕ ದಾಖಲೆಯನ್ನು ನಿನ್ನೆಯ ಬಿಸಿಲು ಬರೆದಿದೆ.
ಸಾಮಾನ್ಯವಾಗಿ ಮಾರ್ಚ್ ತಿಂಗಳ ಅಂತ್ಯದಲ್ಲಿ ಈ ರೀತಿ ಬಿಸಿಲು ಇರುತ್ತದೆ. ಆದರೆ ಈಗ ಮಾರ್ಚ್ ಆರಂಭದಲ್ಲಿಯೇ ಬಿಸಿಲ ಕಾವು ಹೆಚ್ಚಾಗಿದೆ. ೪ ವರ್ಷದಲ್ಲಿ ಮತ್ತೆ ಅತಿ ಹೆಚ್ಚು ಉಷ್ಣಾಂಶ ಬೆಂಗಳೂರಿನಲ್ಲಿ ದಾಖಲಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಬೇಸಿಗೆ ಆರಂಭ ಆಗುತ್ತಿದ್ದಂತೆ ಈ ವರ್ಷ ಕುಡಿಯುವ ನೀರಿನ ಸಮಸ್ಯೆ ಕೂಡ ಹೆಚ್ಚಾಗಿಯೇ ಇದ್ದು ಒಬ್ಬರಿಗೆ ಒಂದೇ ಕ್ಯಾನ್ ನೀರು ಮಾತ್ರ ನೀಡಲಾಗುತ್ತಿದೆ.