ಇಂದೋರ್ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಭಾರತದ ವೇಗದ ಬೌಲರ್ ಉಮೇಶ್ ಯಾದವ್ ಚೆಂಡಿನೊಂದಿಗೆ ಶತಕ ಪೂರೈಸಿದ್ದಾರೆ. ಉಮೇಶ್ ಕೇವಲ 4652 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದು ಭಾರತದ ನೆಲದಲ್ಲಿ ದಾಖಲೆಯಾಗಿದೆ.
ಉಮೇಶ್ ಯಾದವ್ ಭಾರತದ ನೆಲದಲ್ಲಿ 100ನೇ ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದ 5ನೇ ವೇಗಿ ಎನಿಸಿಕೊಂಡಿದ್ದಾರೆ. ಹಾಗೆಯೇ ಒಟ್ಟಾರೆಯಾಗಿ ಈ ಸಾಧನೆ ಮಾಡಿದ 13 ನೇ ಬೌಲರ್ ಕೂಡ ಆಗಿದ್ದಾರೆ. ಇನ್ನೊಂದು ಸಂಗತಿಯೆಂದರೆ ಆ 13 ಬೌಲರ್ಗಳಲ್ಲಿ ಅತಿವೇಗವಾಗಿ 100 ಟೆಸ್ಟ್ ವಿಕೆಟ್ಗಳನ್ನು ಪಡೆದ ಮೊದಲ ಬೌಲರ್ ಉಮೇಶ್ ಯಾದವ್.
ಉಮೇಶ್ ಯಾದವ್ ಅವರು ಮಿಚೆಲ್ ಸ್ಟಾರ್ಕ್ ಅವರ ವಿಕೆಟ್ ಕಿತ್ತು ತಮ್ಮ 100ನೇ ಟೆಸ್ಟ್ ವಿಕೆಟ್ ಪೂರೈಸಿದರು. ಬಳಿಕ ಮತ್ತೇರಡು ವಿಕೆಟ್ ಸೇರಿದಂತೆ ಒಟ್ಟು 3 ವಿಕೆಟ್ ಪಡೆಯವುದರೊಂದಿಗೆ ಅವರ ವಿಕೆಟ್ಗಳ ಸಂಖ್ಯೆಯನ್ನು 101 ಕ್ಕೆ ಏರಿಸಿಕೊಂಡರು.
ಭಾರತದ ನೆಲದಲ್ಲಿ 100 ವಿಕೆಟ್ ಪಡೆದ 5 ವೇಗದ ಬೌಲರ್ಗಳ ಪೈಕಿ ಉಮೇಶ್ ಯಾದವ್ ಒಬ್ಬರೇ 25 ಕ್ಕಿಂತ ಕಡಿಮೆ ಸರಾಸರಿಯಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಅವಧಿಯಲ್ಲಿ ಅವರ ಬೌಲಿಂಗ್ ಸರಾಸರಿ 24.5 ಆಗಿದೆ.
ಭಾರತದಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳಲ್ಲಿ ಕಪಿಲ್ ದೇವ್ 219 ವಿಕೆಟ್ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಅವರ ನಂತರ ಜಾವಗಲ್ ಶ್ರೀನಾಥ್ 108 ವಿಕೆಟ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, 104 ವಿಕೆಟ್ಗಳೊಂದಿಗೆ ಜಹೀರ್ ಖಾನ್ 3ನೇ ಸ್ಥಾನದಲ್ಲಿದ್ದಾರೆ.