ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೋಮವಾರ ನಾಲ್ಕನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. ಇದರ ಹೊರತಾಗಿಯೂ ಆರಂಭಿಕ ಎರಡು ಪಂದ್ಯಗಳಲ್ಲಿ ಗೆಲುವು ಪಡೆದಿದ್ದ ಕಾರಣ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ 2-1 ಅಂತರದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಮುಡಿಗೇರಿಸಿಕೊಂಡಿತ್ತು.
ಅಂದಹಾಗೆ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೆ ಅರ್ಹತೆ ಪಡೆಯಲು ಭಾರತ ತಂಡಕ್ಕೆ ಅಹಮದಾಬಾದ್ ಟೆಸ್ಟ್ ಪಂದ್ಯದಲ್ಲಿ ಗೆಲುವು ಅನಿವಾರ್ಯವಿತ್ತು. ಆದರೆ, ನ್ಯೂಜಿಲೆಂಡ್ ತಂಡ, ಭಾರತ ತಂಡದ ಜೊತೆ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ರೇಸ್ನಲ್ಲಿದ್ದ ಶ್ರೀಲಂಕಾ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಪಡೆಯಿತು. ಆ ಮೂಲಕ ಟೀಮ್ ಇಂಡಿಯಾ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೆ ಅಧಿಕೃತವಾಗಿ ಅರ್ಹತೆ ಪಡೆದುಕೊಂಡಿತು.
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಜೂನ್ 7 ರಿಂದ 11ರವರೆಗೂ ಇಂಗ್ಲೆಂಡ್ ದಿ ಓವಲ್ ಮೈದಾನದಲ್ಲಿ ನಡೆಯುವ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲಿ ಸೆಣಸಲಿವೆ. ಅಂದಹಾಗೆ ಸೋಮವಾರ ಮುಗಿದಿದ್ದ ಟೆಸ್ಟ್ ಸರಣಿಯು ಭಾರತ ಹಾಗೂ ಆಸ್ಟ್ರೇಲಿಯಾ ಪಾಲಿಗೆ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ.
2023ರ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೂ ಮುನ್ನ ಈ ಎರಡೂ ತಂಡಗಳ ಆಟಗಾರರ ಬಲಾ-ಬಲ ತಿಳಿದುಕೊಳ್ಳಲು ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಅತ್ಯಂತ ಮುಖ್ಯವಾಗಿತ್ತು. ಅದರಂತೆ ಟೆಸ್ಟ್ ಸರಣಿ ಮುಗಿಸಿರುವ ಎರಡೂ ತಂಡಗಳು ಮಾರ್ಚ್ 17 ರಿಂದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ ಕಾದಾಟ ನಡೆಸಲು ಸಜ್ಜಾಗುತ್ತಿವೆ.
ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಆರಂಭಿಕ ಮೂರು ಪಂದ್ಯಗಳು ನಡೆದಿದ್ದ ಮೈದಾನಗಳು ಸ್ಪಿನ್ ಸ್ನೇಹಿ ವಿಕೆಟ್ಗಳಾಗಿದ್ದವು. ಆದರೆ, ಅಹಮದಾಬಾದ್ ವಿಕೆಟ್ ಫ್ಲಾಟ್ ಆಗಿದ್ದರಿಂದ ಬ್ಯಾಟ್ಸ್ಮನ್ಗಳ ಸ್ನೇಹಿಯಾಗಿತ್ತು. ಈ ಸರಣಿಯಲ್ಲಿ ಎರಡೂ ತಂಡಗಳಿಂದ ಕೆಲ ಶ್ರೇಷ್ಠ ಪ್ರದರ್ಶನಗಳು ಮೂಡಿಬಂದಿವೆ. ಈ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ, ಅತಿ ಹೆಚ್ಚು ವಿಕೆಟ್ ಪಡೆದ ಹಾಗೂ ಇನ್ನು ಹಲವು ವೈಯಕ್ತಿಕ ಅಂಕಿಅಂಶಗಳನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಅತಿ ಹೆಚ್ಚು ರನ್ ಗಳಿಸಿದ ಟಾಪ್ ಮೂವರು ಬ್ಯಾಟ್ಸ್ಮನ್ಗಳು
- ಉಸ್ಮಾನ್ ಖವಾಜಾ – 7 ಇನಿಂಗ್ಸ್ಗಳಲ್ಲಿ 47.57ರ ಸರಾಸರಿಯಲ್ಲಿ 333 ರನ್2. ವಿರಾಟ್ ಕೊಹ್ಲಿ- 6 ಇನಿಂಗ್ಸ್ಗಳಲ್ಲಿ 49.50ರ ಸರಾಸರಿಯಲ್ಲಿ 297 ರನ್
3. ಅಕ್ಷರ್ ಪಟೇಲ್ – 5 ಇನಿಂಗ್ಸ್ಗಳಲ್ಲಿ 88.00ರ ಸರಾಸರಿಯಲ್ಲಿ 264 ರನ್
ಅತಿ ಹೆಚ್ಚು ವಿಕೆಟ್ ಕಬಳಿಸಿದ ಟಾಪ್ ಮೂವರು ಬೌಲರ್ಗಳು
- ರವಿಚಂದ್ರನ್ ಅಶ್ವಿನ್ – 2.59 ರ ಎಕಾನಮಿಯಲ್ಲಿ 8 ಇನಿಂಗ್ಸ್ಗಳಿಂದ 25 ವಿಕೆಟ್ಗಳು
- ರವೀಂದ್ರ ಜಡೇಜಾ – 2.57 ರ ಎಕಾನಮಿಯಲ್ಲಿ 8 ಇನಿಂಗ್ಸ್ಗಳಿಂದ 22 ವಿಕೆಟ್ಗಳು
- 3. ನಾಥನ್ ಲಿಯಾನ್ – 2.59 ರ ಎಕಾನಮಿಯಲ್ಲಿ 6 ಇನಿಂಗ್ಸ್ಗಳಿಂದ 22 ವಿಕೆಟ್ಗಳು
ವೈಯಕ್ತಿಕ ಗರಿಷ್ಠ ಸ್ಕೋರರ್ಸ್ (ಇನಿಂಗ್ಸ್)
- ವಿರಾಟ್ ಕೊಹ್ಲಿ – 364 ಎಸೆತಗಳಲ್ಲಿ 186 (15×4, 0x6)2. ಉಸ್ಮಾನ್ ಖವಾಜಾ -422 ಎಸೆತಗಳಲ್ಲಿ 180 (21×4 0x6)
3. ಶುಭಮನ್ ಗಿಲ್ – 235 ಎಸೆತಗಳಲ್ಲಿ 128 (12×4, 1×6)
ವೈಯಕ್ತಿಕ ಅತ್ಯುತ್ತಮ ಬೌಲಿಂಗ್ ಪ್ರದರ್ಶನ (ಇನಿಂಗ್ಸ್)
- ನೇಥನ್ ಲಿಯಾನ್ – ಇಂದೋರ್ನಲ್ಲಿ 23.3 ಓವರ್ಗಳಲ್ಲಿ 8/642. ರವೀಂದ್ರ ಜಡೇಜಾ – ದಿಲ್ಲಿಯಲ್ಲಿ 12.1 ಓವರ್ಗಳಲ್ಲಿ 7/42
3. ಟಾಡ್ ಮರ್ಫಿ – ನಾಗ್ಪುರದಲ್ಲಿ 47 ಓವರ್ಗಳಲ್ಲಿ 7/124