ಬೆಂಗಳೂರು: ಜುಲೈ 4 ( ಮಂಗಳವಾರ) ರಂದು ಶ್ರೀ ಕಂಠೀರವಾ ಕ್ರೀಡಾಂಗಣದಲ್ಲಿ ನಡೆದ 2023ನೇ ಸಾಲಿನ ಸ್ಯಾಫ್ ಫುಟ್ಬಾಲ್ ಫೈನಲ್ ಪಂದ್ಯದ ರೋಚಕ ಹಣಾಹಣಿಯಲ್ಲಿ 5-4 ರಿಂದ ಪೆನಾಲ್ಟಿ ಶೂಟೌಟ್ ಜಯಿಸಿದ ಭಾರತ ತಂಡ ಚಾಂಪಿಯನ್ ಪಟ್ಟವನ್ನು ತಮ್ಮಲ್ಲೇ ಉಳಿಸಿಕೊಂಡು ಸಂಭ್ರಮಿಸಿದ್ದಲ್ಲದೆ ಇತಿಹಾಸದಲ್ಲಿ 9ನೇ ಬಾರಿ ಟ್ರೋಫಿ ಗೆದ್ದು ದಾಖಲೆ ನಿರ್ಮಿಸಿದೆ.
ಪಂದ್ಯ ಮೊದಲ ಕ್ಷಣದಿಂದಲೂ ರೋಚಕತೆಯಿಂದ ಕೂಡಿದ ಪರಿಣಾಮವಾಗಿ ಪೂರ್ಣ ಅವಧಿ ಅಂತ್ಯಕ್ಕೆ 1-1 ರಿಂದ ಸಮಬಲಗೊಂಡಿತು. ಪೆನಾಲ್ಟಿ ಶೂಟೌಟ್ ನಲ್ಲಿ ಫಲಿತಾಂಶ ನಿರ್ಧಾರಗೊಂಡ ಪಂದ್ಯದಲ್ಲಿ ಗೋಲ್ ಕೀಪರ್ ಗುರುಪ್ರೀತ್ ಸಂಧು ಅವರ ಚಮತ್ಕಾರದ ಪ್ರದರ್ಶನದಿಂದ ಸುನೀಲ್ ಛೇಟ್ರಿ ಬಳಗ 5-4 ರಿಂದ ಜಯಿಸಿ ಟ್ರೋಫಿ ಗೆದ್ದು ಸಂಭ್ರಮಿಸಿದರೆ, ಚೊಚ್ಚಲ ಚಾಂಪಿಯನ್ ಮುಕುಟ ಗೆಲ್ಲಬೇಕೆಂಬ ಕುವೈತ್ ಕನಸು ಕನಸಾಗಿಯೇ ಉಳಿಯಿತು.
ಪಂದ್ಯ ಆರಂಭಗೊಂಡ 14 ನಿಮಿಷಗಳಲ್ಲೇ ಕುವೈತ್ ನ ಫಾರ್ವರ್ಡ್ ಆಟಗಾರ ಅಬಿಬ್ ಅಲ್ ಖಲೈದಿ ತಮ್ಮ ಕಾಲ್ಚಳಕದಿಂದ ಭಾರತದ ಗೋಲ್ ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅವರ ಕಣ್ತಪ್ಪಿಸಿ ಚೆಂಡನ್ನು ಗೋಲು ಪೆಟ್ಟಿ ಒಳಗೆ ಹಾಕಲು ಯಶಸ್ಸು ಕಂಡರು. ಆ ಮೂಲಕ ಕುವೈತ್ ಗೆ 1-0 ಮುನ್ನಡೆ ತಂದುಕೊಟ್ಟರು. ನಂತರ ಸುನೀಲ್ ಛೇಟ್ರಿ ಬಳಗ ಮತ್ತಷ್ಟು ಆಕ್ರಮಣಕಾರಿ ಆಟ ಆಡಿದ ಪರಿಣಾಮ 16ನೇ ನಿಮಿಷದಲ್ಲಿ ಗೋಲು ಸಮಬಲಗೊಳಿಸುವ ಅವಕಾಶ ಭಾರತಕ್ಕೆ ಒಲಿದು ಬಂದಿತ್ತಾದರೂ ಚಾಂಗ್ಟೆ ಪ್ರಯತ್ನವನ್ನು ಕುವೈತ್ ಗೋಲ್ ಕೀಪರ್ ಅಬ್ದುಲ್ ರೆಹಮಾನ್ ಮರ್ಜೋಕ್ ತಡೆದರು. ಇದಾದ 3 ನಿಮಿಷಗಳಲ್ಲಿ ಫ್ರೀ ಕಿಕ್ ಮೂಲಕ ಕುವೈತ್ ಗೋಲು ಗಳಿಸುವ ಅವಕಾಶ ಪಡೆದರೂ ಗುರುಪ್ರೀತ್ ಅಡ್ಡಗೋಡೆಯಾಗಿ ತಡೆದರು. ಪಂದ್ಯ ಆರಂಭಗೊಂಡ 14 ನಿಮಿಷಗಳಲ್ಲೇ ಕುವೈತ್ ನ ಫಾರ್ವರ್ಡ್ ಆಟಗಾರ ಅಬಿಬ್ ಅಲ್ ಖಲೈದಿ ತಮ್ಮ ಕಾಲ್ಚಳಕದಿಂದ ಭಾರತದ ಗೋಲ್ ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅವರ ಕಣ್ತಪ್ಪಿಸಿ ಚೆಂಡನ್ನು ಗೋಲು ಪೆಟ್ಟಿ ಒಳಗೆ ಹಾಕಲು ಯಶಸ್ಸು ಕಂಡರು. ಆ ಮೂಲಕ ಕುವೈತ್ ಗೆ 1-0 ಮುನ್ನಡೆ ತಂದುಕೊಟ್ಟರು. ನಂತರ ಸುನೀಲ್ ಛೇಟ್ರಿ ಬಳಗ ಮತ್ತಷ್ಟು ಆಕ್ರಮಣಕಾರಿ ಆಟ ಆಡಿದ ಪರಿಣಾಮ 16ನೇ ನಿಮಿಷದಲ್ಲಿ ಗೋಲು ಸಮಬಲಗೊಳಿಸುವ ಅವಕಾಶ ಭಾರತಕ್ಕೆ ಒಲಿದು ಬಂದಿತ್ತಾದರೂ ಚಾಂಗ್ಟೆ ಪ್ರಯತ್ನವನ್ನು ಕುವೈತ್ ಗೋಲ್ ಕೀಪರ್ ಅಬ್ದುಲ್ ರೆಹಮಾನ್ ಮರ್ಜೋಕ್ ತಡೆದರು. ಇದಾದ 3 ನಿಮಿಷಗಳಲ್ಲಿ ಫ್ರೀ ಕಿಕ್ ಮೂಲಕ ಕುವೈತ್ ಗೋಲು ಗಳಿಸುವ ಅವಕಾಶ ಪಡೆದರೂ ಗುರುಪ್ರೀತ್ ಅಡ್ಡಗೋಡೆಯಾಗಿ ತಡೆದರು.
ಪೆನಾಲ್ಟಿ ಶೂಟೌಟ್ ನಲ್ಲಿ ಭಾರತದ ಗೋಲ್ ಕೀಪರ್ ಗುರುಪ್ರೀತ್ ಸಿಂಗ್ ಸಂಧು ಕ್ಷೇತ್ರರಕ್ಷಣೆಯಲ್ಲಿ ಚಮತ್ಕಾರ ತೋರಿದರು. ಪೆನಾಲ್ಟಿ ಶೂಟೌಟ್ ನಲ್ಲೂ ರೋಚಕತೆ ಮೂಡಿಸಿ 4-4 ರಿಂದ ಸಮಬಲಗೊಂಡ ನಂತರ ನಡೆದ ಸಡನ್ ಡೆತ್ ನಲ್ಲಿ ಕುವೈತ್ ನ ಖಲೀದ್ಎಲ್ ಅಬ್ರಾಹಂ ಅವರ ಹೊಡೆತವನ್ನು ಗುರುಪ್ರೀತ್ ತಡೆಯುವಲ್ಲಿ ಯಶಸ್ಸು ಕಂಡರು. ನಂತರ ಮಹೇಶ್ ಸಿಂಗ್ ಗೋಲು ಬಾರಿಸಿದ ಪರಿಣಾಮ ಭಾರತವು ಪೆನಾಲ್ಟಿ ಶೂಟೌಟ್ ನಲ್ಲಿ 5-4 ರಿಂದ ಗೆಲುವು ಸಾಧಿಸಿ ಸ್ಯಾಫ್ ಚಾಂಪಿಯನ್ ಷಿಪ್ ಪಟ್ಟವನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಸುನೀಲ್ ಛೇಟ್ರಿ ಪಡೆ ಯಶಸ್ಸು ಕಂಡಿತು. ಇದು ಭಾರತ ಗೆದ್ದ 9ನೇ ಸ್ಯಾಫ್ ಕಿರೀಟವಾಗಿದೆ.