ನವದೆಹಲಿ;- ಇಂಡಿಯಾ ಹೆಸರು ಬದಲಾವಣೆ ವದಂತಿ ಅಷ್ಟೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಮಾತನಾಡಿದ ಸಚಿವ ಅನುರಾಗ್ ಠಾಕೂರ್ ‘ಭಾರತದ ರಾಷ್ಟ್ರಪತಿ ಎಂಬುದನ್ನು ‘ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಬರೆಯಲಾಗಿದೆ.
ಅದರಲ್ಲಿ ತಪ್ಪೇನಿದೆ? ಇದೊಂದು ದೊಡ್ಡ ವಿಷಯವೇ ಅಲ್ಲ. ಈ ಮೊದಲು ಸಹ ಹಲವು ಆಮಂತ್ರಣ ಪತ್ರಿಕೆಗಳನ್ನು ‘ಭಾರತ ಸರ್ಕಾರ್’ ಎಂಬ ಹೆಸರಿನಲ್ಲಿ ಕಳುಹಿಸಲಾಗಿದೆ. ಆಗೆಲ್ಲಾ ಎಲ್ಲಿ ಸಮಸ್ಯೆಯಾಗಿತ್ತು? ಎಂದು ಪ್ರಶ್ನಿಸಿದ್ದಾರೆ.
ಜೊತೆಗೆ, ಬಹಳಷ್ಟು ನ್ಯೂಸ್ ಚಾನಲ್ಗಳು ತಮ್ಮ ಹೆಸರಿನಲ್ಲಿ ಭಾರತ ಎಂಬುದನ್ನು ಅಳವಡಿಸಿಕೊಂಡಿವೆ. ಆದರೆ ಈ ಜನ ಮಾತ್ರ (ವಿಪಕ್ಷಗಳು) ಭಾರತ ಎಂಬ ಹೆಸರಿನೊಂದಿಗೆ ಅಲರ್ಜಿ ಹೊಂದಿದ್ದಾರೆ. ಈಗೀಗ ಕೆಲವರಿಗೆ ಭಾರತ ಎಂಬ ಹೆಸರು ನೋವುಂಟು ಮಾಡುತ್ತಿದೆ. ಇವರು ವಿದೇಶಿ ನೆಲದಲ್ಲಿ ನಿಂತು ಭಾರತಕ್ಕೆ ಅವಮಾನಿಸುತ್ತಿದ್ದಾರೆ. ಇದು ಭಾರತ ಎಂಬ ಹೆಸರನ್ನು ವಿರೋಧಿಸುತ್ತಿರುವುದು ಅವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದಿದ್ದಾರೆ.