ನವದೆಹಲಿ: ಭಯೋತ್ಪಾದನೆ ವಿಚಾರದಲ್ಲಿ ಜಗತ್ತು ಒಮ್ಮತವನ್ನು ಸಾಧಿಸದಿರುವುದು ದುಃಖಕರವಾಗಿದೆ. ಶತ್ರುಗಳು ಇದರ ಲಾಭವನ್ನು ಪಡೆಯುತ್ತಿದ್ದಾರೆ. ಭಯೋತ್ಪಾದನೆಯನ್ನು ಎದುರಿಸಲು ನಾವು ಹೇಗೆ ಒಟ್ಟಾಗಿ ಕೆಲಸ ಮಾಡಬೇಕು ಎಂಬುದರ ಕುರಿತು ವಿಶ್ವದಾದ್ಯಂತ ಎಲ್ಲ ದೇಶದ ಸರ್ಕಾರಗಳು ಯೋಚಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ G-20 ಸಭೆಯಲ್ಲಿ ಇಸ್ರೇಲ್- ಪ್ಯಾಲೇಸ್ಟೈನ್ (Isreal- Palestine) ಯುದ್ಧದ ಬಗ್ಗೆ ಮಾತನಾಡಿದ ಅವರು, ಭಾರತವು ದಶಕಗಳಿಂದ ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸುತ್ತಿದೆ, ಭಯೋತ್ಪಾದಕರು ಸಾವಿರಾರು ಅಮಾಯಕರನ್ನು ಕೊಂದಿದ್ದಾರೆ. ಭಯೋತ್ಪಾದನೆ ದೊಡ್ಡ ಸವಾಲಾಗಿದೆ, ಅದು ಮಾನವೀಯತೆಯ ವಿರುದ್ಧವಾಗಿದೆ ಎಂದರು.
2001 ರಲ್ಲಿ ಭಾರತೀಯ ಸಂಸತ್ತಿನ ಮೇಲಿಯೂ ದಾಳಿ ನಡೆದಿತ್ತು ಎಂದು ನೆನಪಿಸಿಕೊಂಡರು. ಜಗತ್ತು ಈಗ ಒಗ್ಗಟ್ಟಿನಿಂದ ಮುನ್ನಡೆಯುವ ಅಗತ್ಯವನ್ನು ಇದೆ ಎಂದು ಪ್ರತಿಪಾದಿಸಿದರು. ಇಂದು ಜಗತ್ತು ಎದುರಿಸುತ್ತಿರುವ ಘರ್ಷಣೆಗಳು ಮತ್ತು ಮುಖಾಮುಖಿಗಳಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ. ವಿಭಜಿತ ಜಗತ್ತು ಮಾನವೀಯತೆಯ ಮುಂದೆ ಸವಾಲುಗಳಿಗೆ ಪರಿಹಾರವನ್ನು ನೀಡಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.