ಭೂಪಾಲ್: ‘ಭಾರತ್ ನ್ಯಾಯ ಯಾತ್ರೆ’ಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡುತ್ತಾ, ನಿರುದ್ಯೋಗದಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಭೂತಾನ್ನನ್ನು ಮೀರಿಸಿದೆ. ಪ್ರಧಾನಿ ನರೇಂದ್ರ ಅವರು ಭಾರತದ ಸಣ್ಣ ಕೈಗಾರಿಕೆಗಳನ್ನು ಮುಗಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ನೋಟುಗಳ ಅಮಾನ್ಯೀಕರಣ, ಜಿಎಸ್ಟಿ ಸೇರಿದಂತೆ ಕೇಂದ್ರ ಸರ್ಕಾರದ ಇತರ ನೀತಿಗಳು ಮಧ್ಯಮ ವರ್ಗದ ಕೈಗಾರಿಕೆಗಳ ಮೇಲೆ, ಸಣ್ಣ ಕೈಗಾರಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.
ಇದಕ್ಕೆ ಪ್ರಧಾನಿ ಮೋದಿಯವರೇ ನೇರ ಹೊಣೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಕಳೆದ 40 ವರ್ಷಗಳಲ್ಲಿ ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ನಿರುದ್ಯೋಗಿಗಳ ಸಂಖ್ಯೆ ಹೆಚ್ಚಳವಾಗಿದೆ ಪಾಕಿಸ್ತಾನಕ್ಕೆ ಹೋಲಿಸಿದರೆ ಅದರ ದುಪ್ಪಟ್ಟು ಭಾರತದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಬಾಂಗ್ಲಾದೇಶ ಹಾಗೂ ಭೂತಾನ್ಗಿಂತ ಹೆಚ್ಚು ನಿರುದ್ಯೋಗಿ ಯುವಕರನ್ನು ಭಾರತ ಹೊಂದಿದೆ.
ಪ್ರಧಾನಿ ಮೋದಿಯವರು ಜಿಎಸ್ಟಿ ಹಾಗೂ ನೋಟು ಅಮಾನ್ಯೀಕರಣ ಜಾರಿಗೆ ತಂದು ಮಧ್ಯಮ ವರ್ಗದ ಕೈಗಾರಿಕೆಗಳನ್ನು ನಾಶಗೊಳಿಸಿದರು. ಇದರ ಪರಿಣಾಮವಾಗಿ ನಿರುದ್ಯೋಗ ಹೆಚ್ಚಾಗಿದೆ ಎಂದು ಭಾರತ್ ನ್ಯಾಯ ಯಾತ್ರೆಯಲ್ಲಿ ಆರೋಪಿಸಿದರು. ಇದೇ ಸಂದರ್ಭದಲ್ಲಿ 2022 ರ ವಿಶ್ವ ಬ್ಯಾಂಕ್ ವರದಿಯನ್ನು ಪ್ರಸ್ತಾಪಿಸುತ್ತಾ, ಭಾರತದ ನಿರುದ್ಯೋಗ ಶೇ. 23,22 ರಷ್ಟಿದ್ದರೆ, ಪಾಕಿಸ್ತಾನದ ನಿರುದ್ಯೋಗ ಪ್ರಮಾಣ ಶೇ. 11.3 ರಷ್ಟಿದೆ ಬಾಂಗ್ಲಾದೇಶದ್ದು ಶೇ. 12.9 ರಷ್ಟಿದೆ ಎಂದರು.