ಭಾರತವು ತಮ್ಮ ದೇಶದ ನಿಕಟ ಮಿತ್ರನಾಗಿ ಮುಂದುವರಿಯುತ್ತದೆ ಎಂದು ಹೇಳಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ದ್ವೀಪಸಮೂಹ ರಾಷ್ಟ್ರಕ್ಕೆ ಸಾಲ ಪರಿಹಾರವನ್ನ ನೀಡುವಂತೆ ಭಾರತಕ್ಕೆ ಮನವಿ ಮಾಡಿದ್ದಾರೆ.
ಅಧಿಕಾರ ವಹಿಸಿಕೊಂಡ ನಂತರ ಸ್ಥಳೀಯ ಮಾಧ್ಯಮಕ್ಕೆ ನೀಡಿದ ಮೊದಲ ಸಂದರ್ಶನದಲ್ಲಿ, ಮಾಲ್ಡೀವ್ಸ್ ಗೆ ನೆರವು ನೀಡುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದೆ ಮತ್ತು ಹೆಚ್ಚಿನ ಸಂಖ್ಯೆಯ ಯೋಜನೆಗಳನ್ನ ಜಾರಿಗೆ ತಂದಿದೆ ಎಂದು ಮುಯಿಝು ಹೇಳಿದರು.
ಭಾರತವು ಮಾಲ್ಡೀವ್ಸ್ನ ನಿಕಟ ಮಿತ್ರನಾಗಿ ಮುಂದುವರಿಯುತ್ತದೆ ಮತ್ತು ಅದರ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ ಎಂದು ಮಾಲ್ಡೀವ್ಸ್ ಸುದ್ದಿ ಪೋರ್ಟಲ್ Edition.mv ತನ್ನ ಧಿವೇಹಿ ಭಾಷೆಯ ಸಹೋದರಿ-ಪ್ರಕಾಶನ ಮಿಹಾರುಗೆ ಮುಯಿಝು ಅವರ ಸಂದರ್ಶನದ ಆಯ್ದ ಭಾಗಗಳನ್ನು ಒಳಗೊಂಡ ವರದಿಯಲ್ಲಿ ತಿಳಿಸಿದೆ.
ಯೋಜಿಸಿದಂತೆ ಈ ತಿಂಗಳು ಭಾರತೀಯ ಮಿಲಿಟರಿ ಸಿಬ್ಬಂದಿಯ ಮೊದಲ ಬ್ಯಾಚ್ ದ್ವೀಪ ರಾಷ್ಟ್ರವನ್ನ ತೊರೆದ ನಂತರ ಭಾರತವನ್ನ ಶ್ಲಾಘಿಸುವ ಮುಯಿಝು ಅವರ ಹೇಳಿಕೆಗಳು ಬಂದಿವೆ. ಮೇ 10 ರೊಳಗೆ, ಮೂರು ಭಾರತೀಯ ವಾಯುಯಾನ ಪ್ಲಾಟ್ಫಾರ್ಮ್ಗಳನ್ನು ನಿರ್ವಹಿಸುವ ಎಲ್ಲಾ 88 ಮಿಲಿಟರಿ ಸಿಬ್ಬಂದಿ ದೇಶವನ್ನ ತೊರೆಯಬೇಕು ಎಂದು ಮುಯಿಝು ಒತ್ತಾಯಿಸಿದ್ದರು.