ಅಮೆರಿಕದಲ್ಲಿ ಭಾರತ ಇನ್ನೂ ಎರಡು ರಾಯಭಾರ ಕಚೇರಿ ತೆರೆಯಲು ನಿರ್ಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನ್ಯೂಯಾರ್ಕ್ ನ ನಸ್ಸೌ ವೆಟರನ್ಸ್ ಮೆಮೋರಿಯಲ್ ಕೊಲಿಜಿಯಂನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಮೋದಿ, “ಕಳೆದ ವರ್ಷ ಸಿಯಾಟಲ್ನಲ್ಲಿ ನಮ್ಮ ಸರ್ಕಾರ ಹೊಸ ಕಾನ್ಸುಲೇಟ್ ತೆರೆಯಲಿದೆ ಎಂದು ನಾನು ಘೋಷಿಸಿದ್ದೆ. ಅದರಂತೆ ಇದೀಗ ಅದನ್ನು ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಅಮೆರಿಕದಲ್ಲಿ ಭಾರತ ಇನ್ನೂ ಎರಡು ರಾಯಭಾರ ಕಚೇರಿ ತೆರೆಯಲು ನಿರ್ಧರಿಸಿದೆ ಎಂದು ಹೇಳಿದರು,
ಎರಡು ಹೊಸ ರಾಯಭಾರ ಕಚೇರಿಗಳನ್ನು ತೆರೆಯುವ ಬಗ್ಗೆ ಸಲಹೆಗಳನ್ನು ಕೋರಿದ್ದೇವೆ. ನಿಮ್ಮ ಸಲಹೆಯ ನಂತರ ಭಾರತ, ಬೋಸ್ಟನ್ ಮತ್ತು ಲಾಸ್ ಏಂಜಲೀಸ್ನಲ್ಲಿ ಎರಡು ಹೊಸ ಕಾನ್ಸುಲೇಟ್ಗಳನ್ನು ತೆರೆಯಲು ನಿರ್ಧರಿಸಿದೆ” ಎಂದು ಮೋದಿ ತಿಳಿಸಿದರು.
ಜಗತ್ತಿಗೆ AI ಅಂದ್ರೆ ಕೃತಕ ಬುದ್ಧಿಮತ್ತೆ. ಆದರೆ, ನನಗೆ AI ಎಂದರೆ ಅಮೆರಿಕನ್-ಇಂಡಿಯನ್ ಸ್ಪಿರಿಟ್. ಇದು ವಿಶ್ವದ ಹೊಸ ‘AI’ ಶಕ್ತಿ….” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.